Home » ಲೈವ್ ನ್ಯೂಸ್ » ನನ್ನೂರು* *ನನ್ನ* *ಕೀರ್ತಿ*
ಕರ್ನಾಟಕದ ಮುಕುಟಮಣಿ ನನ್ನೂರು

ನನ್ನೂರು* *ನನ್ನ* *ಕೀರ್ತಿ*
ಕರ್ನಾಟಕದ ಮುಕುಟಮಣಿ ನನ್ನೂರು

ವಿಶ್ವಾದಾದ್ಯಂತ ವಿಶೇಷ ಬಿದರಿ ಚಿದ್ರಿ ಕಲೆಗೆ ಹೆಸರುವಾಸಿ ನನ್ನೂರು
ನನ್ನ ದೇಶದ ಎರಡನೇ ಅತ್ಯಂತ ದೊಡ್ಡ ಕೋಟೆ ಇರುವ ಊರು ನನ್ನೂರು
ವಿಶೇಷ ಊಟ ಭಜ್ಜಿ ಪಲ್ಯಕ್ಕೆ ಹೆಸರಾದ ನನ್ನೂರು
ಬಸವಣ್ಣನಿಗೆ ಸಿಂಗಾರ ಮಾಡಿ ಹೋಳ ಹಬ್ಬಕ್ಕೆ ಕೀರ್ತಿಯಾದ ನನ್ನೂರು
ಮೊಹಮ್ಮದ ಗವಾನರ ಕಾಲದಿಂದಲೇ  ಮದರಸಾ ಇರುವ ನನ್ನೂರು
ಸಿಕ್ಕರ ಪವಿತ್ರ ಸ್ಥಳ ನಾನಕ್ ಝರ ಇರುವ ನನ್ನೂರು
ಗುಹಾಂತರ ದೇವಾಲಯ
ನರಸಿಂಹ ಝರಣ ಇರುವ ನನ್ನೂರು
ಅಹಾ ರುದ್ರ ವೀರಭದ್ರ ದೇವಸ್ಥಾನ  ಇರುವ ನನ್ನೂರು
ಮಾಣಿಕ್ಯ ನಗರ ಮಾಣಿಕ್ಯ ಪ್ರಭುವಿನ ಸಂಸ್ಥಾನ ಇರುವ ನನ್ನೂರು
ಹನ್ನೆರಡನೇ ಶತಮಾನದ ಪಾರ್ಲಿಮೆಂಟ್ ಅನುಭವ ಮಂಟಪ ಇರುವ ನನ್ನೂರು
ಪವಿತ್ರ ಅಕ್ಕ ಮಹಾದೇವಿ ಮೆಟ್ಟಿದ ನನ್ನೂರು
ಇನ್ನು ಏನೇನೆಂತ ಹೊಗಳಲಿ ನನ್ನೂರಿಗೆ
ನನ್ನೂರು ಕೀರ್ತಿಯ ಬೀಡು
ಪರಪಂಚ ಸುತ್ತಿದ ನನಗೆ ನನ್ನೂರು ನನಗೆ ಮೇಲು.  
ಕರ್ನಾಟಕದ ಮುಕುಟಮಣಿ ನನ್ನೂರು
  ….✍️ ಸರಿತಾ ಬೇಬಿ ವಿ ಸಾಹಿತಿಗಳು ಬೀದರ.

Author

ಪ್ರಮುಖ ಸುದ್ದಿ

Stock market

Astrology