ಅಂಬಿಗರ ಚೌಡಯ್ಯನವರ ಜೀವನ ಮೌಲ್ಯಗಳನ್ನು ಅರಿಯೋಣ: ಸಚಿವರಾದ ಎನ್.ಎಸ್.ಬೋಸರಾಜು ಸಲಹೆ
ರಾಯಚೂರು.21.ಜನವರಿ.26: ಸಮಾಜದಲ್ಲಿನ ಅನಾಚಾರ, ಅಪನಂಬಿಕೆಗಳನ್ನು ನಿರ್ಭೀತಿಯಿಂದ ಟೀಕಿಸಿ ಕ್ರಾಂತಿಕಾರಿ ಶರಣರು ಎಂದು ಹೆಸರಾದ ನಿಜಶರಣ ಅಂಬಿಗರ ಚೌಡಯ್ಯನವರ ಆಚಾರ-ವಿಚಾರಗಳನ್ನು ನಾವೆಲ್ಲರು ಅರಿತು ನಡೆಯಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು. ಜನವರಿ 21ರ ಬುಧವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮoದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರು ಜಯಂತಿ ಕಾರ್ಯಕ್ರಮಕ್ಕೆ…

