ಎಸ್ಐಆರ್: ಕೊಪ್ಪಳ ಜಿಲ್ಲೆಯಲ್ಲಿ ಎಂಟನೇ ದಿನಕ್ಕೆ 11,39,824 ಗಣತಿ ನಮೂನೆ ವಿತರಣೆ
ಕೊಪ್ಪಳ.08.ಜುಲೈ 26: ಕೊಪ್ಪಳ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026 ರ ಮನೆಮನೆ ಭೇಟಿ ಮುಂದುವರೆದಿದ್ದು, ಜೂನ್ 30 ರಿಂದ ಜುಲೈ 7ರ ಸಂಜೆ 06 ಗಂಟೆವರೆಗೆ ಒಟ್ಟು 11,39,824 ಗಣತಿ ನಮೂನೆಗಳನ್ನು ಮತದಾರರಿಗೆ ಹಂಚಿಕೆ ಮಾಡಲಾಗಿರುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ತಿಳಿಸಿದ್ದಾರೆ. ಕೊಪ್ಪಳ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 11,90,214 ಮತದಾರರಿದ್ದು, ಈ ಎಲ್ಲಾ ಮತದಾರರ ಮುದ್ರಿತವಾಗಿರುವ ಗಣತಿ ನಮೂನೆಗಳನ್ನು ಈಗಾಗಲೇ ಸಂಬಂಧಪಟ್ಟ…

