ಬೆಂಗಳೂರು .30.ಸೆಪ್ಟೆಂಬರ್.26: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಕಂಡುಬಂದಿರುವ ಪಿಎಚ್.ಡಿ ಶೈಕ್ಷಣಿಕ ಅರ್ಹತೆಯ ಗೊಂದಲ ಹಾಗೂ ಲೋಪದೋಷಗಳ ಕುರಿತು ಗಂಭೀರ ಕ್ರಮಕ್ಕೆ ಕಾಲೇಜು ಶಿಕ್ಷಣ ಇಲಾಖೆಯ ಮುಂದಾಗಿದೆ. ಈ ಸಂಬಂಧ ಇಲಾಖೆಯ ಆಯುಕ್ತರ ಕಚೇರಿಯಿಂದ ಅಧಿಕೃತ ನೋಟಿಸ್ ಹೊರಡಿಸಲಾಗಿದೆ.
2025-26 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಆನ್ ಲೈನ್ ಅರ್ಜಿ ಸಲ್ಲಿಸುವಾಗ ಕೆಲವು ಅಭ್ಯರ್ಥಿಗಳು ಯುಜಿಸಿ ನಿಗದಿತ ಪಿಎಚ್.ಡಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿ, ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.

ಅರ್ಹತೆಯುಳ್ಳ ವಿದ್ಯಾವಂತರಿಗೆ ಮಹಾ ಮೋಸವಾಗಿದೆ, ನಿರ್ದಿಷ್ಟ ವಿದ್ಯಾರ್ಹತೆ ಇಲ್ಲದಿದ್ದರೂ, ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ರೀತಿ ಘಟನೆಗಳು ಶಿಕ್ಷಣ ಇಲಾಖೆಯಲ್ಲಿ ನಡೆದಿರುವುದು ಆತಂಕದ ವಿಚಾರ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಈ ತರಹದ ಕೆಲಸ ಮಾಡೋಕೆ ಯಾರು ಧೈರ್ಯ ಮಾಡುವುದಿಲ್ಲ.....-ಅಮ್ಮದ್ ಅಲಿ, ಅಧ್ಯಕ್ಷರು, ಸೋಲಿಡಾರಿಟಿ ಯೂತ್ ಮೂಮೆಂಟ್ ಲಿಂಗಸೂಗೂರು.
2026-27 ನೇ ಸಾಲಿನ ನೇಮಕಾತಿಗಾಗಿ ಸಲ್ಲಿಸಿರುವ ಅವರು ಆನ್ಲೈನ್ ಅರ್ಜಿಯ ವಿವರಗಳನ್ನು ಪರಿಶೀಲಿಸಿದಾಗ, ಪಿಎಚ್.ಡಿ ಆನ್ಲೈನ್ ಅರ್ಜಿಯ ವಿವರಗಳನ್ನು ವಿದ್ಯಾರ್ಹತೆಯನ್ನು ಕ್ಷೇಮ್ ಮಾಡದೇ ಇರುವುದು ಇಲಾಖೆಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಈ ಅರ್ಜಿಯಲ್ಲಿ ಕಂಡುಬಂದಿರುವ ವೈಪರೀತ್ಯ ಹಾಗೂ ಅರ್ಹತೆಯ ಸತ್ಯಾಸತ್ಯತೆಯ ಕುರಿತು ಸಂಬಂಧಪಟ್ಟ ಅತಿಥಿ ಉಪನ್ಯಾಸಕರಿಂದ ಸ್ಪಷ್ಟವಾದ ಲಿಖಿತ ವಿವರಣೆ ಪಡೆಯುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂದು ಇಲಾಖೆ ತಿಳಿಸಿದೆ.
ಸಂಬಂಧಪಟ್ಟ ಉಪನ್ಯಾಸಕರಿಗೆ ಸಂಕಷ್ಟ ಎದುರಾಗಿದೆ ಇವರುಗಳಿಗೆ ನೋಟೀಸ್ ಪ್ರತಿಯನ್ನು ತಲುಪಿಸಿ, ಅಗತ್ಯ ದಾಖಲೆಗಳೊಂದಿಗೆ 7 ದಿನಗಳ ಒಳಗಾಗಿ ಲಿಖಿತ ವಿವರಣೆ ಪಡೆದು ಇಲಾಖೆಗೆ ರವಾನಿಸುವಂತೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ನಿಗದಿತ ಸಮಯದೊಳಗೆ ಸೂಕ್ತ ವಿವರಣೆ ನೀಡದಿದ್ದಲ್ಲಿ, ಲಭ್ಯವಿರುವ ದಾಖಲೆಗಳ ಆಧಾರದ ಮೇಲೆಯೇ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಈಗಾಗಲೇ ಹಲವು ಉಪನ್ಯಾಸಕರು ಇಲಾಖೆಗೆ ಲಿಖಿತ ಉತ್ತರ ಸಲ್ಲಿಸಿದ್ದಾರೆ ಎನ್ನಲಾಗಿದ್ದು, ಎಷ್ಟು ಜನ ಉತ್ತರಿಸಿದ್ದಾರೆ ಹಾಗೂ ಮುಂದಿನ ನಡೆ ಏನು ಎಂಬ ಸ್ಪಷ್ಟತೆ ಇಲಾಖೆಯ ಉನ್ನತಾಧಿಕಾರಿಗಳ ನಿರ್ಧಾರದ ಮೇಲಿದೆ. ಶೈಕ್ಷಣಿಕ ಪಾರದರ್ಶಕತೆ ಕಾಯ್ದುಕೊಳ್ಳಲು ಇಲಾಖೆ ಕೈಗೊಂಡಿರುವ ಈ ಕಠಿಣ ಕ್ರಮವು ವಿದ್ಯಾರ್ಹತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಕಾರ್ಯನಿರ್ವಾಹಿಸಿದ ತಪ್ಪಿತಸ್ಥ ಉಪನ್ಯಾಸಕರಲ್ಲಿ ಆತಂಕ ಮೂಡಿಸಿದೆ.





Any questions related to ಕಾಲೇಜು ಶಿಕ್ಷಣ ಇಲಾಖೆ ಮತ್ತಷ್ಟು ಅತಿಥಿ ಉಪನ್ಯಾಸಕರಿಗೆ ಅರ್ಹತೆ ಸಂಕಟ!?