ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ: ಪಂಚಾಯಿತಿ
ಬೆಂಗಳೂರು.02.ಅಕ್ಟೋಬರ.26:ರಾಜ್ಯ ಸರ್ಕಾರ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ತಯಾರಿ: ಪಂಚಾಯಿತಿ ಮಟ್ಟದಲ್ಲೂ ಗ್ಯಾರಂಟಿ ಸಮಿತಿಗೆ ಆದೇಶ; 63 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ.
ವರ್ಷಾಂತ್ಯದಲ್ಲಿ ಜಿಲ್ಲಾಮತ್ತು ತಾಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಿರೀಕ್ಷೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಹಂಚಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ’ಗ್ಯಾರಂಟಿ ಸಮಿತಿ’ಗಳ ರಚನೆಗೆ ಗುರುವಾರ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಪಂಚ ಗ್ಯಾರಂಟಿಗಳ ಅನುಷ್ಠಾನ ಉಸ್ತುವಾರಿಗಾಗಿ ರಾಜ್ಯಾದ್ಯಂತ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ಗಳಲ್ಲಿ ಮುಂದಿನ 15 ದಿನಗಳೊಳಗೆ ಗ್ಯಾರಂಟಿ ಸಮಿತಿಗಳನ್ನು ರಚನೆ ಮಾಡಲು ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒಗಳಿಗೆ ಆದೇಶಿಸಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಪ್ರಜಾಸೇವಾ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ಸಂಬಂಧಪಟ್ಟ ಜಿಲ್ಲಾಉಸ್ತುವಾರಿ ಸಚಿವರ ಅನುಮೋದನೆಯೊಂದಿಗೆ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಬೇಕು. ಈ ಬಗ್ಗೆ ಮುಂದಿನ 15 ದಿನಗಳೊಳಗೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿ ಪ್ರಕ್ರಿಯೆ ಪೂರ್ಣಗೊಳಿಸಲು ವಿಫಲರಾದರೆ, ಈ ಅಧಿಕಾರವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ ವರ್ಗಾಯಿಸಲಾಗುವುದು ಎಂದು ಆದೇಶದಲ್ಲಿಸ್ಪಷ್ಟಪಡಿಸಲಾಗಿದೆ.
63 ಸಾವಿರ ಮಂದಿಗೆ ಸ್ಥಾನಮಾನ
ಗ್ಯಾರಂಟಿ ಸಮಿತಿಗಳ ವಿಕೇಂದ್ರೀಕರಣದ ಮೂಲಕ ಒಟ್ಟು 63,513 ಮಂದಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸರ್ಕಾರ ಅಧಿಕಾರ ಮತ್ತು ಸ್ಥಾನಮಾನ ನೀಡುತ್ತಿದೆ. ಸದ್ಯ ಎಲ್ಲ 31 ಜಿಲ್ಲೆಗಳು ಮತ್ತು 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಒಂದೊಂದು ಗ್ಯಾರಂಟಿ ಸಮಿತಿಗಳಿವೆ. ಅಧ್ಯಕ್ಷರು ಮತ್ತು 14 ಸದಸ್ಯರನ್ನು ಒಳಗೊಂಡು ಜಿಲ್ಲಾಮಟ್ಟದಲ್ಲಿ465 ಮಂದಿ ಹಾಗೂ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಧ್ಯಕ್ಷರು ಮತ್ತು 14 ಮಂದಿ ಸದಸ್ಯರು ಒಳಗೊಂಡು ಒಟ್ಟು 3,360 ಮಂದಿ ಇದ್ದಾರೆ.
ರಾಜ್ಯದ 5,948 ಗ್ರಾಮ ಪಂಚಾಯಿಗೆ ತಲಾ 6 ಸದಸ್ಯರ ಸಮಿತಿ ರಚಿಸಲಾಗುತ್ತಿದೆ. ಇದರಿಂದ ಒಟ್ಟು 35,688 ಮಂದಿಗೆ ಅಧಿಕಾರ ಸಿಗುತ್ತಿದೆ. ಅಂತೆಯೇ ನಗರ ಪ್ರದೇಶಗಳ ಒಟ್ಟು 4,000 ವಾರ್ಡ್ಗಳಲ್ಲಿ ತಲಾ 6 ಸದಸ್ಯರ ಸಮಿತಿಯಂತೆ ಒಟ್ಟು 24 ಸಾವಿರ ಮಂದಿಗೆ ಸ್ಥಾನಮಾನ ಸಿಗುತ್ತಿದೆ. ಇದರೊಂದಿಗೆ ರಾಜ್ಯ ಮಟ್ಟದ ಸಮಿತಿ ಹೊರತುಪಡಿಸಿ ಒಟ್ಟಾರೆ 63,513 ಮಂದಿಗೆ ಸರ್ಕಾರದ ಗ್ಯಾರಂಟಿ ಸಮಿತಿಗಳಲ್ಲಿ ಅಧಿಕಾರ ಮತ್ತು ಸ್ಥಾನಮಾನ ಕಲ್ಪಿಸಲಾಗುತ್ತಿದೆ.
ಮೀಸಲು ಅನ್ವಯ
ಪ್ರತಿ ಸಮಿತಿಯಲ್ಲಿಎಸ್ಸಿ ಮತ್ತು ಎಸ್ಟಿ -1, ಅಲ್ಪಸಂಖ್ಯಾತರಿಗೆ -1, ಮಹಿಳೆಯರಿಗೆ-2, ಹಿಂದುಳಿದ ವರ್ಗದವರಿಗೆ -1 ಹಾಗೂ ಸಾಮಾನ್ಯ ವರ್ಗ-1 ಸದಸ್ಯರಿಗೆ ಪ್ರಾತಿನಿಧ್ಯ ಕಲ್ಪಿಸಲಾಗುತ್ತದೆ. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಲಭ್ಯವಿಲ್ಲದ ಸಂದರ್ಭದಲ್ಲಿ ಸಾಮಾನ್ಯ ವರ್ಗದಿಂದ ಸದಸ್ಯರನ್ನು ನೇಮಿಸಲು ಅವಕಾಶವಿದೆ.
ಹಣಕಾಸಿನ ಬಗ್ಗೆ ಉಲ್ಲೇಖವಿಲ್ಲ
ಪಂಚಾಯಿತಿ ಮಟ್ಟದ ಗ್ಯಾರಂಟಿ ಸಮಿತಿಗಳ ಸದಸ್ಯರಿಗೆ ಭತ್ಯೆ ಇನ್ನಿತರ ಸೌಲಭ್ಯ ನೀಡುವ ಬಗ್ಗೆ ಆದೇಶದಲ್ಲಿಉಲ್ಲೇಖಿಸಿಲ್ಲ. ಈ ಸಮಿತಿಗಳ ಕಾರ್ಯ ನಿರ್ವಹಣೆಗೆ ಎಷ್ಟು ವೆಚ್ಚವಾಗುತ್ತದೆ ಎಂಬುದನ್ನೂ ಸ್ಪಷ್ಟ ಪಡಿಸಿಲ್ಲ.





Any questions related to ಪಂಚಾಯಿತಿ ಮಟ್ಟದಲ್ಲೂ ಗ್ಯಾರಂಟಿ ಸಮಿತಿಗೆ ಆದೇಶ; 63 ಸಾವಿರ ಕಾಂಗ್ರೆಸ್ ಕಾರ್ಯಕರ್ತರಿಗೆ ಅಧಿಕಾರ?