Home » ಲೈವ್ ನ್ಯೂಸ್ » ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಅಧ್ಯಕ್ಷರಾಗಿ ಉತ್ತಮ ಶಿಂದೆ ಪುನರಾಯ್ಕೆ!

ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಅಧ್ಯಕ್ಷರಾಗಿ ಉತ್ತಮ ಶಿಂದೆ ಪುನರಾಯ್ಕೆ!

ಭಾಲ್ಕಿ.02 ಅಕ್ಟೋಬರ್: ಸರ್ಕಾರದ ಮಾನ್ಯತೆ ಪಡೆದಿರುವ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಭಾಲ್ಕಿ ತಾಲೂಕು ಘಟಕದ 2026 ರಿಂದ 31 ನೆ ಸಾಲಿಗೆ ಅಧ್ಯಕ್ಷರಾಗಿ ಉತ್ತಮ ಶಿಂದೆ ಅವರು ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಸೂಚನೆ ಪ್ರಕಟವಾಗಿದ್ದು, ಅದರಂತೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉತ್ತಮ ಶಿಂದೆ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಿಕ್ಷಕರ ಸಮಸ್ಯೆಗಳು ಹಾಗೂ ಹಕ್ಕುಗಳ ಕುರಿತು ಉತ್ತಮ ಶಿಂದೆ ಅವರು ತೋರಿಸುತ್ತಿರುವ ಕಾಳಜಿ ಮತ್ತು ಶಿಕ್ಷಕರಲ್ಲಿ ಅವರ ಮೇಲಿರುವ ವಿಶ್ವಾಸ ಹಾಗೂ ಅಭಿಮಾನವೇ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಪ್ರಮುಖ ಕಾರಣವಾಗಿದೆ.

ಸಂಘದ ತಾಲೂಕು ಘಟಕಕ್ಕೆ ಒಟ್ಟು 12 ನಿರ್ದೇಶಕರ ಆಯ್ಕೆ ನಡೆದಿದ್ದು, ಬಳಿಕ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಬಾಳಪ್ಪ ಹಾಗೂ ಖಜಾಂಚಿಯಾಗಿ ಸಂಗಮೇಶ ಅವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಉಮಾಲತಾ ರೆಡ್ಡಿ,ರವಿಚಂದ್ರ ಮೈನಾಳೆ,ರುಕ್ಮವ್ವ ನಾಟೆಕಾರ್,
ಡಾ, ಮೇರಿ ಬಿವಲಾ,ಸಂತೋಷ ಬಾಬುರಾವ, ಜೆಟ್ಟೆಪ್ಪಾ ವಾಲಿಕಾರ,ಬಸವನಗೌಡ,
ನವಾಜ್ ಅಲಿ, ಗೋವಿಂದ ಭಂಡಾರೆ ನಿರ್ದೇಶಕರು ಆಗಿ ನೇಮಕವಾಗಿದ್ದಾರೆ,
ನೂತನ ಪದಾಧಿಕಾರಿಗಳು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಶಿಕ್ಷಕರ ಹಿತಾಸಕ್ತಿ ಹಾಗೂ ಸಂಘದ ಬಲವರ್ಧನೆಗಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಚುನಾವಣಾಧಿಕಾರಿ ಡಿ.ಡಿ. ಶಿಂದೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology