ಕಾರವಾರ.22.ಸೆಪ್ಟೆಂಬರ್.26: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಾರವಾರ ಇಲ್ಲಿ ಉಪನ್ಯಾಸಕರ ಕೊರತೆಯಿಂದ ಪಾಠ ಸರಿಯಾಗಿ ನಡೆಯದೇ ಇರುವುದನ್ನು ಖಂಡಿಸಿ ಇಲ್ಲಿನ ಕಾಲೇಜ್ನ ಬಿಸಿಎ ವಿದ್ಯಾರ್ಥಿಗಳು ಶನಿವಾರ ಕಾಲೇಜ್ ಎದುರು ಪ್ರತಿಭಟನೆ ನಡೆಸಿದರು. ಬೆಳಗ್ಗೆ 10.30 ಕ್ಕೆ ತರಗತಿ ಬಹಿಷ್ಕರಿಸಿ ಹೊರ ಬಂದ ವಿದ್ಯಾರ್ಥಿಗಳು ಕಾಲೇಜ್ ಎದುರು ಪ್ರತಿಭಟನೆ ನಡೆಸಿದರು.
ಕಾಲೇಜ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ಎಸ್ಎಫ್ಐನ ವೀರೇಶ ರಾಠೋಡ ಮುಂತಾದ ವಿದ್ಯಾರ್ಥಿ ಮುಖಂಡರು ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಂತರ ಸಾಯಂಕಾಲ 4 ಗಂಟೆಯ ಹೊತ್ತಿಗೆ ಕಾರವಾರ ಎಸಿ ರಮ್ಯಾ ಆಗಮಿಸಿ ಮನವಿ ಸ್ವೀಕರಿಸಿದರು.
ಬಿಸಿಎನಲ್ಲಿ 6 ವಿಷಯಗಳಿದ್ದು, ಕಂಪ್ಯೂಟರ್ ಸೈನ್ಸ್, ಗಣಿತ ಶಾಸ್ತç ಸೇರಿ ಪ್ರಮುಖ 4 ವಿಷಯಗಳಿಗೆ ಉಪನ್ಯಾಸಕರಿಲ್ಲ. ಇದರಿಂದ ತರಗತಿಗಳೇ ನಡೆಯುತ್ತಿಲ್ಲ. ಪ್ರಾಂಶುಪಾಲರಿಗೆ ಈ ಸಂಬAಧ ಸೆ.11 ರಂದು ಮನವಿ ಸಲ್ಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಯು ಟ್ಯೂಬ್ ನೋಡಿಕೊಂಡು ಅಧ್ಯಯನ ªಮಾಡಿ ಎಂದು ಹೇಳುತ್ತಿದ್ದಾರೆ.
ನವೆಂಬರ್ನಲ್ಲಿ ಪರೀಕ್ಷೆ ಇದೆ. ಆದರೆ, ಇದುವರೆಗೂ ಪಠ್ಯಕ್ರಮವನ್ನೇ ಪ್ರಾರಂಭಿಸಿಲ್ಲ. ಕೊಠಡಿಯಲ್ಲಿ ಫ್ಯಾನ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಗೃಹಕ್ಕೆ ಬಾಗಿಲುಗಳೇ ಇಲ್ಲ ಎಂದು ಸಮಸ್ಯೆಗಳನ್ನು ತೋಡಿಕೊಂಡರು. ಶೀಘ್ರ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು.
ಪರಿಹಾರ ಬೋಧನೆ ಮಾಡಿ ನವೆಂಬರ್ 11 ರ ಒಳಗೆ ಪಠ್ಯಕ್ರಮವನ್ನು ಮುಗಿಸುವಂತೆ ಮಾಡಬೇಕು. ಮೂಲ ಸೌಕರ್ಯ ಒದಗಿಸಬೇಕು. ವಿದ್ಯಾರ್ಥಿಗಳನ್ನು ಬೋಧಕರಿಗೆ ಪರ್ಯಾಯವಾಗಿ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದರು.





Any questions related to ಪಾಠ ಪ್ರವಚನ ನಡೆಯದೇ ಇರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ.?