Home » ಲೈವ್ ನ್ಯೂಸ್ » 15 ಸಾವಿರ ಶಿಕ್ಷಕರ ನೇಮಕ ರದ್ದು!

15 ಸಾವಿರ ಶಿಕ್ಷಕರ ನೇಮಕ ರದ್ದು!

ಕಲಬುರಗಿ.20.ಸೆಪ್ಟೆಂಬರ್.26: ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಮೀಸಲು ಉಲ್ಲಂಘನೆ ಕಾರಣಕೆ ಕಲಬುರ್ಗಿ ಹೈಕೋರ್ಟ್ ಪೀಠ ಮಹತ್ವದ ತೀರ್ಪು ಅರ್ಹರನ್ನು ಪರಿಗಣಿಸಿ 3 ತಿಂಗಳಲ್ಲಿ ಹೊಸ ನೇಮಕ ಪಟ್ಟಿಗೆ ಸೂಚನೆ

371j ಕಲ್ಯಾಣ ಕರ್ನಾಟಕ ಭಾಗದಲ್ಲಿ 2023ರಲ್ಲಿ ನಡೆದ ಆರರಿಂದ ಎಂಟನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿಆರ್) ನೇಮಕಾತಿ ಪಟ್ಟಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದು ಪಡಿಸಿ ಮಹತ್ವದ ಆದೇಶ ನೀಡಿದೆ. ಇದ ರೊಂದಿಗೆ ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 15 ಸಾವಿರ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಆತಂತ್ರಕ್ಕೆ ಸಿಲುಕಿದೆ.

ಹೈದರಾಬಾದ್ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಯೇತರ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ ಈ ಹಿಂದೆ ಪ್ರಕಟವಾಗಿದ್ದ ತಾತ್ಕಾಲಿಕ ಹಾಗೂ ಅಂತಿಮ ಪಟ್ಟಿಗಳನ್ನು ರದ್ದುಪಡಿಸಿರುವ ಹೈಕೋರ್ಟ್, ನಿಯಮಾನುಸಾರ ಹೊಸದಾಗಿ ಪ್ರಕ್ರಿಯೆ ನಡೆಸಲು ನಿರ್ದೇಶಿಸಿದೆ.

ರಾಜ್ಯ ಸರಕಾರ 15 ಸಾವಿರ ಜಿಪಿಎಸ್

ಟಿಆರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿಯಲ್ಲಿ ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕದ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ವಯಿಸುವ ಮೀಸಲಾತಿ ಹಾಗೂ ಎಚ್‌ಕೆ, ನಾನ್-ಎಚ್ಕೆ ವೃಂದಗಳ ಹಂಚಿಕೆ ವಿಚಾರ ದಲ್ಲಿ ಗೊಂದಲ ಉಂಟಾಗಿತ್ತು. ಇದನ್ನು ಪ್ರಶ್ನಿಸಿ ಹಲವು ಅಭ್ಯರ್ಥಿಗಳು ನ್ಯಾಯಾಲ ಯದ ಮೊರೆ ಹೋಗಿದ್ದರು.

ಶಿಕ್ಷಕರ ಸ್ಥಿತಿ ಅತಂತ್ರ

ಈಗಾಗಲೇ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಮುಂದಿನ ಸೇವಾ ಸ್ಥಿತಿಗತಿ ಕುರಿತು ಚರ್ಚೆ ಆರಂಭವಾಗಿದೆ. ಹಿಂದಿನ ಪ್ರಕ್ರಿಯೆಯ ಆಧಾರದಲ್ಲಿ ನೇಮಕ ಗೊಂಡವರ ವಿಚಾರದಲ್ಲಿ ಸರಕಾರ ಯಾವ ಕ್ರಮ ಅನುಸರಿಸಲಿದೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಹೊಸ ಪಟ್ಟಿಯ ನಂತರ ಉಂಟಾಗ ಬಹುದಾದ ಬದಲಾವಣೆಗಳ ಕುರಿತು ಇಲಾಖೆಯಿಂದ ಸ್ಪಷ್ಟ ಮಾರ್ಗಸೂಚಿ ಹೊರಬರುವ ನಿರೀಕ್ಷೆಯಿದೆ. ಇದರಿಂದ ಸಾವಿರಾರು ಕುಟುಂಬಗಳ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಆಯ್ಕೆ ಕುತೂಹಲ

ಮುಂದಿನ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಜತೆಗೆ ಹುದ್ದೆಗಳ ಸ್ಥಳವಾರು ಲಭ್ಯತೆ ಕೂಡ ಪ್ರಮುಖವಾಗಲಿದೆ. ನೇಮಕಾತಿಗೆ ಅರ್ಹತೆ ಪಡೆದವರಿಗೆ ಶಾಲೆಗಳ ಆಯ್ಕೆಯಲ್ಲಿ ಯಾವ ಮಾನ ದಂಡ ಅನುಸರಿಸಲಾಗುತ್ತದೆ ಎಂಬು ದರತ್ತ ಅಭ್ಯರ್ಥಿಗಳ ಗಮನ ನೆಟ್ಟಿದೆ.ೃಂದವಾರು ಹುದ್ದೆಗಳ ವಿವರ, ಖಾಲಿ ಸ್ಥಾನಗಳ ಮಾಹಿತಿ ಹಾಗೂ ಅಭ್ಯರ್ಥಿ ಗಳಿಗೆ ಲಭ್ಯವಾಗುವ ಆಯ್ಕೆ ಅವಕಾಶ ಗಳನ್ನು ಮುಂಚಿತವಾಗಿ ಪ್ರಕಟಿಸಿದರೆ ಪ್ರಕ್ರಿಯೆಯಲ್ಲಿ ಸ್ಪಷ್ಟತೆ ಮೂಡಲಿದೆ. ಇಲಾಖೆಯು ಈ ಬಾರಿ ಸಂಪೂರ್ಣ ವ್ಯವಸ್ಥೆಯನ್ನು ಡಿಜಿಟಲ್, ಪಾರದರ್ಶಕ ವಾಗಿ ನಿರ್ವಹಿಸುವ ನಿರೀಕ್ಷೆಯಿದೆ.

Author

ಪ್ರಮುಖ ಸುದ್ದಿ

Stock market

Astrology