ಕೊಪ್ಪಳ13ಜುಲೈ 26: 2026-27 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ತಾಲ್ಲೂಕಿನ ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯಲು ನಿಗದಿತ ದಿನಾಂಕದೊಳಗೆ ನೋಂದಾಯಿಸಿಕೊಳ್ಳಲು ಸೂಚಿಸಿದೆ.
ಯೋಜನೆಯಡಿ ಪ್ರತಿ ಹೆಕ್ಟೆರ್‌ಗೆ ಭತ್ತ(ನೀರಾವರಿ) ಬೆಳೆಗೆ ವಿಮಾ ಮೊತ್ತ ರೂ.1,08,600/-, ಭತ್ತ(ಮಳೆಯಾಶ್ರಿತ) ಬೆಳೆಗೆ ವಿಮಾ ಮೊತ್ತ 75,600/-, ಮುಸುಕಿನ ಜೋಳ(ನೀ) ಬೆಳೆಗೆ ವಿಮಾ ಮೊತ್ತ ರೂ.76,200/-, ಮುಸುಕಿನ ಜೋಳ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.67,500/-, ಜೋಳ(ನೀ) ಬೆಳೆಗೆ ವಿಮಾ ಮೊತ್ತ ರೂ.52,600/-, ಜೋಳ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.44,400/-, ಸಜ್ಜೆ(ನೀ) ಬೆಳೆಗೆ ವಿಮಾ ಮೊತ್ತ ರೂ.43,300/-, ಸಜ್ಜೆ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.34,800/, ನವಣೆ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.32,200/-, ತೊಗರಿ(ನೀ) ಬೆಳೆಗೆ ವಿಮಾ ಮೊತ್ತ ರೂ.60,300/-, ತೊಗರಿ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.57,600/-, ಹೆಸರು(ಮ.ಆ) ಬೆಳೆಗೆ ವಿಮಾ ಮೊತ್ತ ರೂ.39,700/-, ಹುರುಳಿ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.23,500/-, ಅಲಸಂದೆ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.35,000/- ಎಳ್ಳು(ಮ.ಆ) ಬೆಳೆಗೆ ವಿಮಾ ಮೊತ್ತ ರೂ.31,900/-, ನೆಲಗಡಲೆ/ಶೇಂಗಾ(ನೀ) ಬೆಳೆಗೆ ವಿಮಾ ಮೊತ್ತ ರೂ.77,800/-, ನೆಲಗಡಲೆ/ಶೇಂಗಾ(ಮ.ಆ) ಬೆಳೆಗೆ ವಿಮಾ ಮೊತ್ತ ರೂ. 65,400/-, ಸೂರ್ಯಕಾಂತಿ(ನೀ) ಬೆಳೆಗೆ ವಿಮಾ ಮೊತ್ತ ರೂ.57,900/-, ಸೂರ್ಯಕಾಂತಿ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.48,200/-, ಹತ್ತಿ(ನೀ) ಬೆಳೆಗೆ ವಿಮಾ ಮೊತ್ತ ರೂ.86,400/- ಹತ್ತಿ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.59,700/-, ಟೊಮ್ಯಾಟೊ ಬೆಳೆಗೆ ವಿಮಾ ಮೊತ್ತ ರೂ.1,69,800/-, ಈರುಳ್ಳಿ(ನೀ) ಬೆಳೆಗೆ ವಿಮಾ ಮೊತ್ತ ರೂ.93,900/-, ಈರುಳ್ಳಿ(ಮ.ಆ) ಬೆಳೆಗೆ ವಿಮಾ ಮೊತ್ತ ರೂ.85,600/- ನಿಗದಿ ಪಡಿಸಲಾಗಿದೆ.
ಹತ್ತಿ (ನೀ) ಮತ್ತು ಹೆಸರು (ಮ.ಆ) ಬೆಳೆಗಳಿಗೆ ನೋಂದಾಯಿಸಲು ಜುಲೈ 15 ಕೊನೆಯ ದಿನವಾಗಿದ್ದು, ಉಳಿದ ಎಲ್ಲಾ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದೆ. ಹತ್ತಿ(ನೀ), ಹತ್ತಿ(ಮ.ಆ), ಟೊಮ್ಯಾಟೊ, ಈರುಳ್ಳಿ(ನೀ) ಮತ್ತು ಈರುಳ್ಳಿ(ಮ.ಆ) ಬೆಳೆಗಳಿಗೆ ರೈತರ ವಂತಿಕೆ ಶೇ.5 ರಷ್ಟಿದ್ದು, ಉಳಿದ ಎಲ್ಲಾ ಬೆಳೆಗಳಿಗೆ ರೈತರ ವಂತಿಕೆ ಶೇ.2 ರಷ್ಟಿರುತ್ತದೆ.
ಇಂಡೆಮ್ನಿಟಿ ಮಟ್ಟವನ್ನು ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ.80 ರಷ್ಟು ನಿಗದಿಪಡಿಸಲಾಗಿದೆ. ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರು ಯೋಜನೆಯಲ್ಲಿ ಭಾಗವಹಿಸಬಹುದು. ರೈತರ ಫ್ರೂಟ್ಸ್ ಐಡಿ ಕಡ್ಡಾಯ. ಬೆಳೆ ಸಾಲ ಪಡೆಯದ ರೈತರು ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ-ಒನ್ ಕೇಂದ್ರ ಮೂಲಕ ನೋಂದಾಯಿಸಿಕೊಳ್ಳಬಹುದು.
ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯು ಜಿಲ್ಲೆಯ ಅನುಷ್ಠಾನ ವಿಮಾ ಸಂಸ್ಥೆಯಾಗಿದೆ. ಸಂಸ್ಥೆಯ ಟೋಲ್ ಫ್ರೀ ಸಂಖ್ಯೆ: 1800-103-5490 ಆಗಿದ್ದು, ರೈತರು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ: ನೋಂದಣಿಗೆ ಸೂಚನೆ?