ರಾಯಚೂರು.13.ಜುಲೈ 26: ರಾಯಚೂರಿನ ಪಶ್ಚಿಮ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾದ ನಂದಿನಿ ತಂದೆ ದಿವಂಗತ ನಾಗರಾಜ (19) ಎಂಬ ಯುವತಿ ಏಪ್ರಿಲ್ 17ರ ರಾತ್ರಿ 10ಗಂಟೆಯ ಸುಮಾರಿಗೆ ಊಟ ಮಾಡಿ, ನಂತರ ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು, ಏಪ್ರಿಲ್ 18ರ ಬೆಳಿಗ್ಗೆ 5ಗಂಟೆ ಸುಮಾರಿಗೆ ಕಾಣೆಯಾಗಿದ್ದು, ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಸಂ:71/2026 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಂದಿನಿ (19)ಯು ಬೆಂಗಳೂರಿನಲ್ಲಿ ಏರೋನಾಟಿಕಲ್ ಪ್ರಥಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಈಕೆಯು ಮೊಹಮ್ಮದ್ ಅಸ್ಲಮ ಎಂಬ ಹುಡುಗನನ್ನು ಪ್ರೀತಿಸುತ್ತಿರುವ ಬಗ್ಗೆ ವಿಷಯ ತಿಳಿದ ಪೋಷಕರು ನಂದಿನಿಯನ್ನು 5 ತಿಂಗಳಿನಿoದ ಮನೆಯಲ್ಲಿ ಇಟ್ಟುಕೊಳ್ಳಲಾಗಿತ್ತು.
ಸುತ್ತಮುತ್ತ ಹುಡುಕಾಡಿ ನೋಡಿದರೂ ಎಲ್ಲಿಯು ನಂದಿನಿ ಕಾಣಲಿಲ್ಲ. ನಂತರ ಆಕೆಯ ಮೊಬೈಲ್ ನಂ: 7975015742ಗೆ ಕರೆ ಮಾಡಲಾಗಿದ್ದು, ಮೊಬೈಲ್ ಫೋನ್ ಸ್ವಿಚ್ ಆಫ್ ಬಂದಿರುತ್ತದೆ. ಮೊಬೈಲ್ ಸಿಮ್ ಕಾರ್ಡನ್ನು ಮನೆಯಲ್ಲಿಯೇ ಬಿಟ್ಟು ಮೊಬೈಲ್ ಮಾತ್ರ ತೆಗೆದುಕೊಂಡು ಹೋಗಿರುತ್ತಾಳೆ.
ನಂತರ ಕುಟುಂಬದವರು ಕೂಡಿ ಆಕೆಯ ಪತ್ತೆಗಾಗಿ ನಗರದ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಸೇರಿದಂತೆ ಇತ್ಯಾದಿ ಕಡೆಗಳಲ್ಲಿ ಹುಡುಕಾಡ ಮಾಡಲಾಗಿದೆ ನಂದಿನಿ ಸಿಕ್ಕಿರುವದಿಲ್ಲ. ಕಾಣೆಯಾದ ಮಹಿಳೆ ಚಹರೆ ಪಟ್ಟಿ: 5.4 ಅಡಿ ಎತ್ತರ, ಕೆಂಪು ಬಣ್ಣ, ಸದೃಢ ಮೈಕಟ್ಟು, ದುಂಡುಮುಖ, ತಲೆಯಲ್ಲಿ ಕಪ್ಪುಕೂದಲು ಹೊಂದಲಾಗಿದೆ. ಗುಲಾಬಿ ಬಣ್ಣದ ಟಾಪ್ ಹಾಗೂ ನೀಲಿ ಜೀನ್ಸ ಪ್ಯಾಂಟ್ ಧರಿಸಲಾಗಿದ್ದು, ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ.
ಈ ಚಹರೆವುಳ್ಳ ಮಹಿಳೆಯು ಕಂಡುಬAದಲ್ಲಿ ಪಶ್ಚಿಮ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-232570, ಪಿಎಸ್‌ಐ ಮೊಬೈಲ್ ಸಂಖ್ಯೆ: 9480803847 ಸಿ.ಪಿ.ಐ ಪಶ್ಚಿಮ ವೃತ್ತ, ರಾಯಚೂರು : 08532-226856, 9480803831, ಜಿಲ್ಲಾ ನಿಸ್ತಂತು ಘಟಕ ರಾಯಚೂರು: 08532-235635 ಅಥವಾ 9480803800ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ನಂದಿನಿ ಕಾಣೆ: ಪತ್ತೆಗೆ ಪೊಲೀಸರ ಮನವಿ?