Home » ಲೈವ್ ನ್ಯೂಸ್ » ತೊಗರಿ ಬೆಳೆಯ ಸಂರಕ್ಷಣೆಗೆ ರೈತರ ಸಾಹಸ:ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸಲಹೆ

ತೊಗರಿ ಬೆಳೆಯ ಸಂರಕ್ಷಣೆಗೆ ರೈತರ ಸಾಹಸ:ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಸಲಹೆ

Facebook
X
WhatsApp
Telegram

ಕೊಪ್ಪಳ.13.ಜುಲೈ 26: ಪ್ರಸ್ತುತ ಮಳೆ ಕೊರತೆಯಿಂದಾಗಿ ತೊಗರಿ ಬೆಳೆಯ ಸಂರಕ್ಷಣೆಗೆ ರೈತರು ಸಾಹಸ ಪಡುತ್ತಿರುವ ಬಗ್ಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ, ಕೆಲ ಸಲಹೆಗಳನ್ನು ನೀಡಿದ್ದಾರೆ.


ತಳಕಲ್ ಗ್ರಾಮದಲ್ಲಿ ರೈತರು ತಮ್ಮ ತೊಗರಿ ಬೆಳೆಯನ್ನು ಕಾಪಾಡಿಕೊಳ್ಳಲು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಪರಿಶೀಲಿಸಿದಾಗ ತಳಕಲ್ ಗ್ರಾಮದ ರೈತರಾದ ನೀಲನಗೌಡ್ರು ಅವರು, ಎರಡು ಟ್ಯಾಂಕರ್‌ಗಳ ಮೂಲಕ ತೊಗರಿ ಬೆಳೆಗೆ ನೀರು ಹಾಯಿಸುತ್ತಿದ್ದು, ಒಂದು ಎಕರೆಗೆ ನಾಲ್ಕರಿಂದ ಐದು ಟ್ಯಾಂಕರ್ ನೀರು ಬೇಕಾಗುತ್ತದೆ. ಇದ್ದಕ್ಕಾಗಿ ಖರ್ಚು ಬರುತ್ತಿದ್ದು, ಶತಾಯಗತಾಯ ಬರ ಪರಿಸ್ಥಿತಿಯಲ್ಲಿ ಬೆಳೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ತಿಳಿಸಿರುತ್ತಾರೆ.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ತಿಮ್ಮಣ್ಣ ಚೌಡಿ ಅವರು ಮಾತನಾಡಿ, ಪ್ರಸ್ತುತ ಮಳೆ ಇಲ್ಲದೆ ರೈತರು ಆತಂಕದಲ್ಲಿ ಸಿಲುಕಿದ್ದಾರೆ. ಹೇಗಾದರೂ ಮಾಡಿ ಬೆಳೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.


ಕೊಪ್ಪಳ ಕೃಷಿ ವಿಸ್ತಾರಣ ಶಿಕ್ಷಣ ಕೇಂದ್ರದ ಮುಖ್ಯಸ್ಥರಾದ ಡಾ. ಬದರಿ ಪ್ರಸಾದ್ ಅವರು ಮತನಾಡಿ, ರೈತರ ಪ್ರಯತ್ನವನ್ನು ಗಮನಿಸಿ ಮಸಾರಿಭೂಮಿಯಲ್ಲಿ ಸಾವಯವಗೊಬ್ಬರವು ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ರೈತರು ಹೆಚ್ಚು ಸಗಣಿಗೊಬ್ಬರ ಅಥವಾ ಎರೆಗೊಬ್ಬರವನ್ನು ಬಳಸಬೇಕು ಮತ್ತು ಬೆಳೆಯನ್ನು ಮುಚ್ಚಿಗೆಯಾಗಿ ಬಳಸಿದರೆ ತೇವಾಂಶ ಸಂರಕ್ಷಣೆಯಾಗುತ್ತದೆಂದು ರೈತರಿಗೆ ಮನವರಿಕೆ ಮಾಡಿಕೊಟ್ಟರು.


ರೈತರು ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು (ಡಾ. ಬದರಿ ಪ್ರಸಾದ ಪಿ.ಆರ್., ವಿಸ್ತರಣಾ ಮುಂದಾಳು, ಮೊ.ನಂ: 9900145705) ಸಂಪರ್ಕಿಸಬಹುದು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology