Home » ಲೈವ್ ನ್ಯೂಸ್ » ಅಲ್ಲಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ನಿಯೋಜನೆ’ಗೆ ಮನವಿ.

ಅಲ್ಲಾಪುರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು  ನಿಯೋಜನೆ’ಗೆ ಮನವಿ.

Facebook
X
WhatsApp
Telegram

ಅಲ್ಲಾಪುರ, 04.ಆಗಸ್ಟ್.26: ಅಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರ ವರ್ಗಾವಣೆ ಮತ್ತು ಹೊಸ ಇಂಗ್ಲೀಷ ಶಿಕ್ಷಕರ ನಿಯೋಜನೆ  ಅಥವಾ ಗೆಸ್ಟ್ ಟೀಚರ್ ಅನ್ನು ನಿಯೋಜಿಸಬೇಕಾಗಿ  ಗ್ರಾಮಸ್ಥರು  ಮಾನ್ಯ  ತಹಸೀದಾರ್ ಔರಾದ ಇವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಪತ್ರದ ಮೂಲಕ ನಾವು ತಮ್ಮ ಗಮನಕ್ಕೆ ತರಲು ಬಯಸುವುದೆಂದರೆ, ನಮ್ಮ ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಮುಖ್ಯಗುರುಗಳು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಮುಖ್ಯಗುರುಗಳು ದಿನಾಲು ಶಾಲೆಯಲ್ಲಿ ಫೋನ್ ವಿಕ್ಷಣೆ ಮಾಡುತ್ತಾ ಕುತ್ತುಕೊಳ್ಳುತ್ತಿದ್ದಾರೆ. ಅವರು ಸರಿಯಾಗಿ ಬೋಧನೆ ಮಾಡುತ್ತಿಲ್ಲ, ಇದರಿಂದ ಮಕ್ಕಳ ಕಲಿಕೆಗೆ ಧಕ್ಕೆಯಾಗುತ್ತಿದೆ.

ಶಾಲೆ ಹಾಗೂ ಪರಿಸರದ ಸ್ವಚ್ಚತೆಯ ಬಗ್ಗೆಯೂ ಅವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಜೊತೆಗೆ, ಸಾರ್ವಜನಿಕರೊಂದಿಗೆ ಅನುಚಿತವಾಗಿ ಮಾತನಾಡುತ್ತಾ ಗೌರವಕ್ಕೆ ಕುಂದುಂಟು ಮಾಡುತ್ತಿದ್ದಾರೆ.

ಆದ್ದರಿಂದ, ಕೂಡಲೇ ಸದರಿಯವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿ, ಆ ಜಾಗಕ್ಕೆ ಸೂಕ್ತವಾದ ಹೊಸ ಇಂಗ್ಲಿಷ್ ಶಿಕ್ಷಕರನ್ನು ಅಥವಾ ಗೆಸ್ಟ್ ಟೀಚರ್ ಅನ್ನು ನಿಯೋಜಿಸಬೇಕಾಗಿ  ಗ್ರಾಮಸ್ಥರು  ಮಾನ್ಯ  ತಹಸೀಲ್ದಾರರು ಔರಾದ ಇವರಿಗೆ ಮನವಿ ಸಲ್ಲಿಸಿದ್ದಾರೆ.

ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology