Home » ಲೈವ್ ನ್ಯೂಸ್ » KEA ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

KEA ವತಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!

ರಾಜ್ಯ ಸರ್ಕಾರ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ KEA ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 4,699 ತಾಂತ್ರಿಕ, ತಾಂತ್ರಿಕೇತರ ಹಾಗೂ ಗ್ರೂಪ್-ಸಿ (Group C) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿಗೆ ಪ್ರಕಟಣೆ ಮಾಡಲಾಗಿದೆ.

ರಾಜ್ಯದ ಯುವಜನರಿಗೆ ಉದ್ಯೋಗಾಕಾಂಕ್ಷಿಗಳ ಅವರ ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾಗಿ ಹುದ್ದೆಗಳನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ:

ಪದವಿ ಮಟ್ಟದ ಹುದ್ದೆಗಳು (Graduate Level – Non-Technical):

ಒಟ್ಟು ಹುದ್ದೆಗಳು:2,421

ಮಿಕ್ಕುಳಿದ ಮೂಲ ವೃಂದ (Non-KK):1,912 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದ (KK): 509 ಹುದ್ದೆಗಳು

ಅರ್ಹತೆ:ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು.

ಒಟ್ಟು ಹುದ್ದೆಗಳು:2,062

ಮಿಕ್ಕುಳಿದ ಮೂಲ ವೃಂದ (Non-KK):1,548 ಹುದ್ದೆಗಳು

ಅರ್ಹತೆ:ಪಿಯುಸಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಡಿಪ್ಲೊಮಾ ಮಟ್ಟದ ಹುದ್ದೆಗಳು (Diploma Level – Technical):

ಒಟ್ಟು ಹುದ್ದೆಗಳು:216

ಮಿಕ್ಕುಳಿದ ಮೂಲ ವೃಂದ (Non-KK): 185 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದ (KK):31 ಹುದ್ದೆಗಳು

ಅರ್ಹತೆ:ಸಂಬಂಧಪಟ್ಟ ತಾಂತ್ರಿಕ ವಿಷಯಗಳಲ್ಲಿ ಡಿಪ್ಲೊಮಾ (Diploma) ಪೂರ್ಣಗೊಳಿಸಿರಬೇಕು.

ಸಾಮಾನ್ಯ ವಯೋಮಿತಿ:ಕನಿಷ್ಠ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ 35 ವರ್ಷ ಹೊಂದಿರಬೇಕು.

ವಯೋಮಿತಿ ಸಡಿಲಿಕೆ (ನಿಯಮಾನುಸಾರ):

ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ (ಗರಿಷ್ಠ 38 ವರ್ಷ).

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ:5 ವರ್ಷಗಳ ಸಡಿಲಿಕೆ (ಗರಿಷ್ಠ 40 ವರ್ಷ).

ನೇರ ಸ್ಪರ್ಧಾತ್ಮಕ ಪರೀಕ್ಷೆ: ಯಾವುದೇ ಸಂದರ್ಶನ ಇರುವುದಿಲ್ಲ. KEA ನಡೆಸುವ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ (Written Examination) ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

ಪರೀಕ್ಷಾ ಮಾದರಿ:

ಪತ್ರಿಕೆ-1 (Paper 1):ಸಾಮಾನ್ಯ ಜ್ಞಾನ, ಕನ್ನಡ ಭಾಷೆ, ಪ್ರಚಲಿತ ಘಟನೆಗಳು ಹಾಗೂ ಮಾನಸಿಕ ಸಾಮರ್ಥ್ಯ.

ಪತ್ರಿಕೆ-2 (Paper 2):ಹುದ್ದೆಗೆ ಸಂಬಂಧಿಸಿದ ನಿರ್ದಿಷ್ಟ ವಿಷಯ/ವಿಷಯಾಧಾರಿತ ಪರೀಕ್ಷೆ.

ಕನ್ನಡ ಭಾಷಾ ಪರೀಕ್ಷೆ: ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದದಿರುವ ಅಭ್ಯರ್ಥಿಗಳಿಗೆ ಕಡ್ಡಾಯ ಅರ್ಹತಾ ಕನ್ನಡ ಭಾಷಾ ಪರೀಕ್ಷೆ ಇರುತ್ತದೆ.

ಪ್ರಾಧಿಕಾರದ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ಮುಖಪುಟದಲ್ಲಿ ‘KEA Recruitment 2026’ ಲಿಂಕ್ ಆಯ್ಕೆ ಮಾಡಿ.

ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಬಳಸಿ ಹೊಸ ಖಾತೆ ತೆರೆದು ನೋಂದಣಿ ವಿವರಗಳನ್ನು ಭರ್ತಿ ಮಾಡಿ.

ನಿಮ್ಮ ಶೈಕ್ಷಣಿಕ ದಾಖಲೆಗಳು, ಜನ್ಮ ದಿನಾಂಕ ಪ್ರಮಾಣಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಹಾಗೂ ಇತ್ತೀಚಿನ ಭಾವಚಿತ್ರವನ್ನು ನಿಗದಿತ ಅಳತೆಯಲ್ಲಿ ಅಪ್‌ಲೋಡ್ ಮಾಡಿ.

ಆನ್‌ಲೈನ್ ಪೇಮೆಂಟ್ ಗೇಟ್‌ವೇ ಮೂಲಕ ಅರ್ಜಿ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 29 ಸೆಪ್ಟೆಂಬರ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಅಕ್ಟೋಬರ್ 2026

ಸ್ಪರ್ಧಾತ್ಮಕ ಪರೀಕ್ಷೆಗಳು:ನವೆಂಬರ್ – ಡಿಸೆಂಬರ್ 2026

ಅಧಿಕೃತ ವೆಬ್‌ಸೈಟ್:cetonline.karnataka.gov.in

Author

ಪ್ರಮುಖ ಸುದ್ದಿ

Stock market

Astrology