|

UGC Regulation 2016ರಲ್ಲಿ ಪಿಹೆಚ್ ಡಿ, ಎಂ.ಫಿಲ್ ಪದವಿ ಪಡೆದವರಿಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ

ಬೆಂಗಳೂರು.24.ಏಪ್ರಿಲ್ .25:- ಉನ್ನತ ಶಿಕ್ಷಣ ಇಲಾಖೆ UGC Regulation 2016 ರಲ್ಲಿ ಪಿಹೆಚ್ ಡಿ, ಎಂ ಫಿಲ್ ಪದವಿ ಪಡೆದು, ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವಂತ ಉಪನ್ಯಾಸಕರಿಗೆ ಶಾಕ್ ನೀಡಿದೆ. 2016ರ ಯುಜಿಸಿ ವೇತನ ಶ್ರೇಣಿಯನ್ವಯ ಮುಂಗಡ ವೇತನ ಬಡ್ತಿ ಮಂಜೂರಾತಿಗೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊಸ ಸುತ್ತೋಲೆ

ಈ ಮೂಲಕ ಯುಜಿಸಿ ವೇತನ ಶ್ರೇಣಿ ನಿರೀಕ್ಷೆಯಲ್ಲಿದ್ದಂತ 2016ರಲ್ಲಿ ಪಿಹೆಚ್ ಡಿ, ಎಂ.ಫಿಲ್ ಪದವಿ ಪಡೆದು ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಬಿಗ್ ಶಾಕ್ ನೀಡಿದೆ.

ಈ ಕುರಿತಂತೆ ಕಾಲೇಜು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸರ್ಕಾರದ ಆದೇಶ ಸಂಖ್ಯೆ:ಇಡಿ/483/ಯುಎನ್‌ಇ/2017, ದಿನಾಂಕ:16-03-2019 ರ ಕಂಡಿಕೆ (14) ಕ್ಕೆ ಸರ್ಕಾರವು ಹೊರಡಿಸಿರುವ ತಿದ್ದುಪಡಿ ಆದೇಶದ ಪ್ರತಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಲಾಗಿದೆ ಎಂದು ತಿಳಿಸಿದೆ.

ಸದರಿ ತಿದ್ದುಪಡಿಯನ್ವಯ ದಿನಾಂಕ:01.01.2016 ರ ನಂತರ ಪಡೆದ ಪಿ.ಹೆಚ್.ಡಿ/ಎಂ.ಫಿಲ್ ಪದವಿಗಳಿಗೆ ಮುಂಗಡ ವೇತನ ಬಡ್ತಿಗಳನ್ನು ಮಂಜೂರು ಮಾಡಲು ಅವಕಾಶವಿಲ್ಲದ ಕಾರಣ ಈ ಸಂಬಂಧ ಯಾವುದೇ ಪ್ರಸ್ತಾವನೆಗಳನ್ನು ಕೇಂದ್ರ ಕಛೇರಿಗೆ ಸಲ್ಲಿಸದಿರುವಂತೆ ಸೂಚಿಸಲಾಗಿದೆ. ಮುಂದುವರೆದಂತೆ ಈಗಾಗಲೇ ಈ ಕಛೇರಿಯಲ್ಲಿ ಸ್ವೀಕೃತವಾಗಿರುವ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ ಎಂಬುದಾಗಿ ತಿಳಿಸಿ, ಬಿಗ್ ಶಾಕ್ ನೀಡಿದೆ.

Similar Posts

Leave a Reply

Your email address will not be published. Required fields are marked *