ಬಸವಕಲ್ಯಾಣ.06.ಸೆಪ್ಟೆಂಬರ್.26: ಬಸವಕಲ್ಯಾಣದ ಬಸವ ಶಿಕ್ಷಣ ಸಂಸ್ಥೆಯ ಡಾ|| ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ
65ನೇ ಶಿಕ್ಷಕರ ದಿನಾಚರಣೆಯ ಸಮಾರಂಭವನ್ನು ಬಸವ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ರವೀಂದ್ರ ಬಿ. ಗಾಯಕವಾಡ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಚೆಲ್ಲಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸಲು ಇದು ಅತ್ಯಂತ ಮಹತ್ವಪೂರ್ಣವಾದ ದಿನವಾಗಿದೆ. ಅಲ್ಲದೇ ಶಿಕ್ಷಕರು ಸಮಾಜದ ಅಭಿವೃದ್ಧಿಗೆ ಮೂಲಸ್ತಂಭ. ಈ ನಿಟ್ಟಿನಲ್ಲಿ ಶಿಕ್ಷಕರು ಮಾಡುವ ಅಪ್ರತೀಮ ತೀಮ ಶ್ರಮವನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಸಮಾರಂಭದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಭವ್ಯ ಪ್ರತಿಮೆಗೆ ಹಾಗೂ ಡಾ.ಎಸ್. ರಾಧಾಕೃಷ್ಣನ್, ಮಹಾತ್ಮ ಜ್ಯೋತಿಬಾ ಫುಲೆ, ವಿಶ್ವದ ಪ್ರಪ್ರಥಮ ಶಿಕ್ಷಕಿ ಮಹಾಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಜೈಶೇನಪ್ರಸಾದ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಾದ ಕುಮಾರಿ ವಿದ್ಯಾ, ವಿಜಯಲಕ್ಷ್ಮೀ, ಗಾಯತ್ರಿ, ಸಮೀಕ್ಷಾ ಅವರು ವಿಶೇಷ ಉಪನ್ಯಾಸವನ್ನು ಮಂಡಿಸಿದರು. ಸ್ವಾಗತ ಗೀತೆ ಕುಮಾರಿ ಚಾಂದನಿ, ಸಮೀಕ್ಷಾ, ಸಖುಬಾಯಿ ಹಾಡಿದರು. ಸ್ವಾಗತ ಭಾಷಣ ಕುಮಾರಿ ಲಕ್ಷ್ಮೀ, ವರ್ಷಾ, ನಿರೂಪಣೆಯನ್ನು ಕುಮಾರಿ ಭಾಗ್ಯಶ್ರೀ ಮತ್ತು ರಾಣಿ ವಂದನಾರ್ಪಣೆಯನ್ನು ಕುಮಾರ ಸುದರ್ಶನ ಮಾಡಿದರು.





Any questions related to ಶಿಕ್ಷಕರು ಸಮಾಜದ ಅಭಿವೃದ್ಧಿಗೆ ಮೂಲಸ್ತಂಭ :- ಶ್ರೀ ರವೀಂದ್ರ ಗಾಯಕವಾಡ?