ಬೀದರ್.06.ಸೆಪ್ಟೆಂಬರ್.26: ರಾಜ್ಯದ, ಜಿಲ್ಲೆಯ ಪ್ರತಿ ತಾಲೂಕಿನ ಪ್ರತಿ ಗ್ರಾಮದ ಜನರ ಮನೆಬಾಗಿಲಿಗೆ ಇಡೀ ಜಿಲ್ಲಾಡಳಿತ ತಲುಪಿ ಸಾರ್ವಜನಿಕರ ಅಹವಾಲು ಆಲಿಸಿ ಸ್ಥಳದಲ್ಲೆ ಪರಿಹಾರ ನೀಡುವ ದೃಷ್ಟಿಯಿಂದ ಪ್ರಜಾಸೇವಾ ಆಂದೋಲನ ಸಭೆ ಎಲ್ಲೆಡೆ ಹಮ್ಮಿಕೊಳ್ಳಲಾಗುತ್ತಿದೆಯೆಂದು ಶಾಸಕ ರಹೀಮ್ ಖಾನ್ ತಿಳಿಸಿದರು.
ಬೀದರ ತಾಲೂಕಿನ ಜನವಾಡದಲ್ಲಿ ಇಂದು ಪ್ರಜಾಸೇವಾ ಆಂದೊಲನ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಾ ಸರ್ಕಾರದ ಪ್ರತಿಯೊಂದು ಯೋಜನಾ ಕಾರ್ಯಕ್ರಮಗಳು ಸೌಲಭ್ಯಗಳು ಗ್ರಾಮಸ್ಥರ ಮನೆ ತಲುಪಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಜಿಲ್ಲಾಡಳಿತ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಗ್ರಾಮಸ್ಥರ ಹತ್ತಿರವೇ ಎಲ್ಲ ಅಧಿಕಾರಿಗಳು ಬಂದಿದ್ದಾರೆ. ಜಿಲ್ಲೆಯ ೪೦ಕ್ಕೂ ಹೆಚ್ಚು ಇಲಾಖೆಗಳ ಅಧಿಕಾರಿಗಳು ಸ್ಥಳದಲ್ಲೇ ಲಭ್ಯವಿದ್ದು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ಸ್ಥಳದಲ್ಲೇ ಇತ್ಯರ್ಥ ಪಡಿಸುವ ಅಹವಾಲುಗಳನ್ನು ತಕ್ಷಣವೇ ಬಗೆಹರಿಸಲಾಗುವುದು. ಅಧಿಕಾರಿಗಳು ೧೫ ದಿನದೊಳಗೆ ಜಿಲ್ಲಾಡಳಿತಕ್ಕೆ ಹಾಗೂ ಸಾರ್ವಜನಿಕರಿಗೆ ವರದಿ ಸಲ್ಲಿಸಬೇಕು ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಶಾಸಕ ರಹೀಂ ಖಾನ ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿಟ್ಟೆ ಮಾಧವ ವಿಠ್ಠಲರಾವ್ ಅವರು ಮಾತನಾಡಿ ಸರ್ಕಾರದ ಮಹಾತ್ವಾಕಾಂಕ್ಷಿ ಹಾಗೂ ವಿನೂತನವಾದ ಪ್ರಜಾಸೇವೆ ಅಭಿಯಾನವು ಸಾರ್ವಜನಿಕರು ಜಿಲ್ಲಾ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಜನರ ಬಳಿಗೆ ಬಂದು ಪರಿಹಾರ ಕಂಡುಕೋಳ್ಳಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಸಮಸ್ಯಗಳಿಗೆ ಸಾರ್ವಜನಿಕರು ತಮ್ಮ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು ಒಂದು ವಾರದಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಸೆ.೪ರಂದು ಜಿಲ್ಲೆಯಲ್ಲಿ ೩೮ ಸಾವಿರದಷ್ಟು ಉದ್ಯೋಗನ್ನು ಸೃಷ್ಟಿಸಲಾಗಿದೆ. ಸಾರ್ವಜನಿಕರು ಗುಳೆ ಹೋಗದೇ ತಮ್ಮ ತಮ್ಮ ಗ್ರಾಮಗಳಲ್ಲಿಯೆ ಬಿ.ವಿ.ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪ್ರಜಾ ಸೇವೆ ಅಭಿಯಾನದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯಗಳಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ಈ ಅಭಿಯಾನದಲ್ಲಿ ಸಾರ್ವಜನಿಕರ ಸಮಸ್ಯಗಳಿಗೆ ಸಮರ್ಪಕವಾಗಿ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಜಿಲ್ಲೆಯ ಸಮಗ್ರ ವಿಕಾಸಕ್ಕಾಗಿ ಸಾರ್ವಜನಿಕರು ಹಾಗೂ ಎಲ್ಲ ಅಧಿಕಾರಿಗಳು ಕೈಜೋಡಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಮಾತನಾಡಿ ಕಳೆದ ವರ್ಷವೂ ಕೂಡ ಇದೇ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇಂದು ಕೂಡ ಪ್ರಜಾಸೇವಾ ಅಭಿಯಾನದಡಿ ಯೋಜನೆಗಳು ಗ್ರಾಮಸ್ಥರ ಮನೆ ಬಾಗಿಲಿಗೆ ಬಂದಿದ್ದು ಗ್ರಾಮೀಣ ಪ್ರದೇಶದ ಸಮಸ್ಯಗಳಾದ ರಸ್ತೆ, ಚರಂಡಿ, ಹೊಲಗಳಿಗೆ ರಸ್ತೆ, ಸರ್ವೇ ಹಾಗೂ ಇತರೆ ಸಮಸ್ಯಗಳಿಗೆ ೧೫ ದಿನದೊಳಗೆ ಸಮಸ್ಯಗಳನ್ನು ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ ಒಂದೊoದು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮೀಣ ಬಾಗದ ಸಮಸ್ಯಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಇಂದು ಕೂಡ ಬೆಳಿಗ್ಗೆ ಕಮಲನಗರ ಗ್ರಾಮಕ್ಕೆ ಭೇಟಿ ನೀಡಿ ಈ ಕಾರ್ಯಕ್ರಮದಲ್ಲಿ ಹಾಜರಾಗಿ ಸಮಸ್ಯಗಳಿಗೆ ಪರಿಹರಿಸಲು ಕ್ರಮ ವಹಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಸಾರ್ವಜನಿಕರ ಸಮಸ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.
ಮಾನ್ಯ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ಭಾಗವಹಿಸಿದ ಪ್ರಜಾಸೇವಾ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಎಲ್ಲ ತಾಲೂಕಿನ ಪ್ರಜಾಸೇವಾ ಸಭೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಶಾಸಕರು, ಜಿಲ್ಲಾಧಿಕಾರಿಗಳು, ಸಿ.ಇ.ಓ ಎಸ್.ಪಿ ಸೇರಿದಂತೆ ಎಲ್ಲ ಅಧಿಕಾರಿಗಳು ಮುಖ್ಯಮಂತ್ರಿಗಳ ಕಾರ್ಯಕ್ರಮ ವೀಕ್ಷಿಸಿದರು.
ಸುಮಾರು ೪೦ ಇಲಾಖೆಗಳು ತಮ್ಮ ಅಹವಾಲು ಮಳಿಗೆಗಳನ್ನು ಸ್ಥಾಪಿಸಿದ್ದವು. ಒಟ್ಟು ೪೦೦ ಅಹವಾಲು ಸ್ವೀಕೃತವಾದವು. ಜಿಲ್ಲೆಯ ಔರಾದ ತಾಲೂಕಿನ ಸಂತಪೂರ, ಚಿಟಗುಪ್ಪಾದ ಬೆಳಮಖೇಡ, ಬೀದರನ ಜನವಾಡ, ಹುಮನಾಬಾದನ ಹಳ್ಳಖೇಡ, ಬಸವಕಲ್ಯಾಣದ ಮುಡಬಿ, ಕಮಲನಗರ ಹಾಗೂ ಹುಲಸೂರ ಹೋಬಳಿಗಳಲ್ಲಿ ಪ್ರಜಾ ಸೇವೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಾಲ್ಕಿಯ ಮೆಹಕರ ಗ್ರಾಮದಲ್ಲಿ ಸೆ.೮ರಂದು ಸಚಿವ ಈಶ್ವರ ಖಂಡ್ರೆ ಅವರಿಂದ ಪ್ರಜಾಸೇವಾ ಆಂದೋಲನ ನಡೆಯಲಿದೆ.





Any questions related to ಜಿಲ್ಲೆಯ ಪ್ರತಿ ಮನೆಗೆ ಸರಕಾರದ ಯೋಜನೆ ತಲುಪಲು ಪ್ರಜಾಸೇವಾ ಅಭಿಯಾನ ಶಾಸಕ : ರಹೀಂ ಖಾನ್?