ಬೆಂಗಳೂರು.10.ಜುಲೈ.26:ವಿದ್ಯಾರ್ಥಿಗಳಿಗೆ ೧೮ ವರ್ಷದ ನಂತರ ಲೈಸೆನ್ಸï ಪಡೆದು ವಾಹನ ಚಲಾಯಿಸಲು .ವಿಜಯಕುಮಾರ ಉಮ್ಮರ್ಗೆ ಸಲಹೆ
ರಸ್ತೆಯ ಮೇಲೆ ಬರುವಾಗ ಎಲ್ಲ ವಿದ್ಯಾರ್ಥಿಗಳು ಏಡಬದಿಯಿಂದ ನಡೆದುಕೊಂಡು ಬರಬೇಕು. ಈ ಮೂಲಕ ಸಂಚಾರ ನಿಯಮಗಳ ಪಾಲನೆ ಮಾಡಬೇಕು ಎಂದು ಬಸವಕಲ್ಯಾದ ಮೋಟಾರು ವಾಹನ ನಿರೀಕ್ಷಕರಾದ ವಿಜಯಕುಮಾರ ಉಮರ್ಗೆ ಅವರು ನುಡಿದರು.
ಜುಲೈ ೮ರಂದು ಹುಲಸೂರು ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಬಸವಕಲ್ಯಾಣ ಹಾಗೂ ಇಕಬಾಲ್ ಪಟೇಲ ಪಿ.ಯು.ಕಾಲೇಜ ಹಾಗೂ ಕಾಳೆ ಮೋಟಾರ ವಾಹನ ತರಬೇತಿ ಶಾಲೆಯ ಸಹಯೋಗದಲ್ಲಿ ನಡೆದ ರಸ್ತೆ ಸುರಕ್ಷತಾ ಹಾಗೂ ಸಂಚಾರಿ ಚಿಹ್ನೆಗಳ ಅರಿವು ಕಾರ್ಯಕ್ರಮವನ್ನು ಸಸಿಗೆ ನೀರುಣ ಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಅಪಘಾತದಲ್ಲಿ ಹೆಚ್ಚಿನ ಜನ ಯುವಕರೇ ಬಲಿಯಾಗುತ್ತ್ತಿದ್ದಾರೆ. ಎಷ್ಟೋ ಯುವಕರು ಅಂಗವಿಕಲ ಆಗುತ್ತಿದ್ದಾರೆ. ಹಾಗಾಗಿ, ರಸ್ತೆ ಮೇಲೆ ಬರುವಾಗ ಸಂಚಾರಿ ಚಿಹ್ನೆ ನೋಡಿ ವಾಹನ ಚಲಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು.
ಅಪಘಾತವಾದರೆ ತಲೆಗೆ ಪೆಟ್ಟು ಬೀಳುತ್ತದೆ. ಹೀಗಾಗಿ ಯಾರೆ ಆಗಲಿ ಬೈಕï ಓಡಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ೧೮ ವರ್ಷ ಮುಗಿದ ಬಳಿಕವೆ ಲೈಸೆನ್ಸ್ ಪಡೆದುಕೊಂಡು, ವಾಹನ ಚಲಾಯಿಸಬೇಕು. ಲೈಸೆನ್ಸ್ ಇಲ್ಲದೇ ಇದ್ದರೆ ವಾಹನ ಚಲಾಯಿಸಬಾರದು. ಲೈಸೆನ್ಸ್ ಇಲ್ಲದೆ ವಾಹನ ಓಡಿಸಿದರೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹುಲಸೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಏಸ್‌ಐ ಪಂಡಿತ ಸರ್ ಮಾತನಾಡಿ,ವಿದ್ಯಾರ್ಥಿಗಳು ಅತೀ ವೇಗದಲ್ಲಿ ಬೈಕ್ ಓಡಿಸಬಾರದು. ಅಲ್ಲದೆ ಬೈಕ್ ಮೇಲೆ ಇಬ್ಬರಿಗಿಂತ ಹೆಚ್ಚು ಜನರು ಕೂರಬಾರದು ಎಂದು ಸೂಚಿಸಿದರು.
ಇಕಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಫಯಾಜ ಪಟೇಲ ಮಾತನಾಡಿ, ದ್ವಿಚಕ್ರ ವಾಹನ ನಡೆಸುವಾಗ ಹೆಡ್ ಫೋನ್, ಬ್ಲೂಟೂತ್, ಮೊಬೈಲ್ ಫೋನï ಬಳಸಬಾರದು. ರಸ್ತೆಯ ಮೇಲೆ ಬರುವಾಗ ವಾಹನದ ದಾಖಲಾತಿಗಳನ್ನು ಇಟ್ಟುಕೊಂಡಿರಬೇಕು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿರುವ ವಾಹನ ದಾಖಲೆಗಳನ್ನು ಸರಿಯಾದ ಸಮಯಕ್ಕೆ ನವೀಕರಣಗೊಳಿಸಬೇಕು. ಜತೆಗೆ ಕುಟುಂಬದ ಇತರರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದರು.
ಹುಲಸೂರು ಕಾಳೆ ಮೋಟಾರು ವಾಹನ ತರಬೇತಿ ಶಾಲೆಯ ಪ್ರಾಚಾರ್ಯ ಪ್ರಾಶಾಂತ ಕಾಳೆ ಮಾತನಾಡಿ, ವಿದ್ಯಾರ್ಥಿಗಳು ಮದುವೆ ಹಾಗೂ ಹುಟ್ಟು ಹಬ್ಬಗಳಿಗೆ ಹೆಲ್ಮೆಟ್ ಉಡುಗೊರೆಯಾಗಿ ನೀಡುವ ಹವ್ಯಾಸ ಬೆಳೆoಸಿಕೊಳ್ಳಬೇಕು ಎಂದು ಹೇಳಿದರು.
ಇಕಬಾಲ್ ಪಟೇಲ್ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ ಸಬಿಯಾ ಫಯಾಜ್ ಪಟೇಲ ಹಾಗೂ ಇತರರು ಇದ್ದರು. ಲಕ್ಷ÷್ಮಣ ಎ. ಸೂರ್ಯವಂಶಿ ನಿರೂಪನೆ ಮಾಡಿದರು. ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಧನ್ಯೆವಾದಗಳೋoದಿಗೆ
ಶಿವರಾಜ ಜಮಾದರ ಖಾಜಾಪುರ
೯೯೧೬೪೨೩೬೦೦





Any questions related to ವಿದ್ಯಾರ್ಥಿಗಳಿಗೆ ೧೮ ವರ್ಷದ ನಂತರ ಲೈಸೆನ್ಸï ಪಡೆದು ವಾಹನ ಚಲಾಯಿಸಲು ವಿಜಯಕುಮಾರ ಉಮ್ಮರ್ಗೆ ಸಲಹೆ?