Home » ಲೈವ್ ನ್ಯೂಸ್ » ನೂತನ ವಾರ್ತಾ ಆಯುಕ್ತ ಎಂ. ಎನ್. ಅನುಚೇತ್ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದಿoದ ಅಭಿನಂದನೆ:

ನೂತನ ವಾರ್ತಾ ಆಯುಕ್ತ ಎಂ. ಎನ್. ಅನುಚೇತ್ ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದಿoದ ಅಭಿನಂದನೆ:

Facebook
X
WhatsApp
Telegram

ಬೀದರ,09.ಜು.26:- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಎಂ. ಎನ್. ಅನುಚೇತ್, ಐಪಿಎಸ್ , IPS ಅವರಿಗೆ ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದ ಬೀದರ್ ಜಿಲ್ಲಾ ಘಟಕದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ, ಸನ್ಮಾನಿಸಲಾಯಿತು.


ಬೆಂಗಳೂರಿನ ವಾರ್ತಾ ಇಲಾಖೆಯ ಕಚೇರಿಯಲ್ಲಿ ನೂತನ ಆಯುಕ್ತರನ್ನು ಭೇಟಿಯಾದ ಸಂಘದ ನಿಯೋಗವು, ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿತು. ಇದೇ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಪತ್ರಿಕಾ ಭವನದ ನಿರ್ವಹಣೆಗೆ ಸಂಬoಧಿಸಿದoತೆ ಪ್ರಮುಖ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಸಲ್ಲಿಸಲಾಯಿತು.


ಬೀದರ್ ಜಿಲ್ಲೆಯ ಪತ್ರಿಕಾ ಭವನವು ಎಲ್ಲಾ ಸಂಘಟನೆಗಳ ಮಾನ್ಯತೆ ಪಡೆದ ಪತ್ರಕರ್ತರ ನಿರ್ವಹಣಾ ಸಮಿತಿಯನ್ನು ಹೊಂದಿದೆ. ಪ್ರಸ್ತುತ ಇರುವ ಸಮಿತಿ ಒಳ್ಳೆಯ ಕೆಲಸ ಮಾಡುತ್ತ ಬಂದಿದೆ. ಮುಂದೆಯೂ ಮುಂದುವರಿಸಿಕೊoಡು ಹೋಗಬೇಕು ಮತ್ತು ಇದರಲ್ಲಿ ಕೆಲವು ಸಂಘಟನೆಗಳ ಮುಖಂಡರು ಮತ್ತು ಮಾನ್ಯತೆ ಹೊಂದಿದ ಪತ್ರಕರ್ತರನ್ನೋಳಗೊಂಡ ಸಮಿತಿ ರಚಿಸಿ ಪತ್ರಿಕಾ ಭವನದ ಸುಗಮ ನಿರ್ವಹಣೆಗೆ ಇಲಾಖೆಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ನಿಯೋಗವು ಆಯುಕ್ತರಲ್ಲಿ ಒತ್ತಾಯಿಸಿತು.


ಬೀದರ್ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಈ ನಿರ್ವಹಣಾ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈಗ ಕೆಲವು ಸಂಘಟನೆಗಳು ಪತ್ರಿಕಾ ಭವನದ ಕುರಿತು ಬೇರೆ ಬೇರೆ ಬೇಡಿಕೆಗಳನ್ನು ಸಲ್ಲಿಸುತ್ತಿವೆ. ಪ್ರಸ್ತುತ ಪತ್ರಿಕಾ ಭವನದ ನಿರ್ವಹಣೆಗೆ ಸಂಬAಧಿಸಿದ ನಮ್ಮ ಈ ಪ್ರಮುಖ ಬೇಡಿಕೆಯು ಯಾವುದೇ ಒಂದು ನಿರ್ದಿಷ್ಟ ಸಂಘಕ್ಕೆ ಮಾತ್ರ ಸೀಮಿತವಾಗಿದ್ದಲ್ಲ, ಬದಲಿಗೆ ಇದು ಇಡೀ ಜಿಲ್ಲೆಯ ಎಲ್ಲಾ ಪತ್ರಕರ್ತರ ಹಿತದೃಷ್ಟಿಯಿಂದ ಕೂಡಿದಾಗಿದೆ ಎಂಬುದನ್ನು.ನಿಯೋಗವು ಆಯುಕ್ತರ ಮುಂದೆ ಸ್ಪಷ್ಟಪಡಿಸಿತು. ಮನವಿ ಸ್ವೀಕರಿಸಿದ ಆಯುಕ್ತ ಎಂ. ಎನ್. ಅನುಚೇತ್ ಅವರು, ಪತ್ರಕರ್ತರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಮಂಜುನಾಥ್ ಡೊಳ್ಳಿನ್, ರಾಮಲಿಂಗಪ್ಪ ಹಾಗೂ ಸಂಘದ ಪ್ರಮುಖರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ ಪಾಟೀಲ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷರಾದ ಬಾಬುವಾಲಿ, ಹಿರಿಯ ಸಂಪಾದಕರುಗಳಾದ ಡಾ.ರಜನೀಶ ವಾಲಿ, ಸಯ್ಯದ್ ಉಲ್ ಶಾ ಖಾದ್ರಿ, ಮಾಳಪ್ಪ ಅಡಸಾರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ರಡ್ಡಿ, ರಾಜ್ಯ ಪ್ರತಿನಿಧಿ ಅಜಯ ಭೋಸ್ಲೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಕುಮಾರ ಪಾಟೀಲ, ಶ್ರೀನಿವಾಸ ಚೌಧರಿ, ಅಬ್ದುಲ್ ಖದೀರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology