Home » ಲೈವ್ ನ್ಯೂಸ್ » ರಾಜ್ಯದ ಪ್ರಾಥಮಿಕ ಶಿಕ್ಷಕರಿಗೆ ‘OPS’ ಭಾಗ್ಯ!

ರಾಜ್ಯದ ಪ್ರಾಥಮಿಕ ಶಿಕ್ಷಕರಿಗೆ ‘OPS’ ಭಾಗ್ಯ!

ಬೆಂಗಳೂರು.13.ಅ: ರಾಜ್ಯ ಸರ್ಕಾರದ 2006-07ನೇ ಸಾಲಿನಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿ, ದಿನಾಂಕ 01-04-2006ರ ನಂತರ ಸೇವೆಗೆ ಸೇರಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಡಿಫೈನ್ಡ್ ಪಿಂಚಣಿ (OPS) ಸೌಲಭ್ಯಕ್ಕೆ ಒಳಪಡಿಸುವ ಪ್ರಕ್ರಿಯೆಗೆ ಶಾಲಾ ಶಿಕ್ಷಣ ಇಲಾಖೆ ಮತ್ತಷ್ಟು ವೇಗ ನೀಡಿದೆ.

ಈ ಕುರಿತಂತೆ ಅರ್ಹ ಶಿಕ್ಷಕರ ಪ್ರಸ್ತಾವನೆಗಳನ್ನು ಸೂಕ್ತ ಶಿಫಾರಸ್ಸಿನೊಂದಿಗೆ ಕೂಡಲೇ ಸಲ್ಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರಿಗೆ (ಆಡಳಿತ) ಜ್ಞಾಪನಾ ಪತ್ರದ ಮೂಲಕ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.

ಸರ್ಕಾರದ ಅನುಮೋದನೆ ನಂತರವೂ ಉಳಿದ ಪ್ರಸ್ತಾವನೆಗಳು

ದಿನಾಂಕ 01-04-2006ರ ಪೂರ್ವದಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾಗಿ, ಆ ದಿನಾಂಕದಂದು ಅಥವಾ ನಂತರದಲ್ಲಿ ಸೇವೆಗೆ ಸೇರಿದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಹಳೆಯ ಪಿಂಚಣಿ ಸೌಲಭ್ಯಕ್ಕೆ ಒಳಪಡಿಸಲು ಈಗಾಗಲೇ ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಸರ್ಕಾರ ಪರಿಶೀಲಿಸಿ ಆದೇಶ ಹೊರಡಿಸಿದೆ. ಆದರೆ, ರಾಜ್ಯದ ಕೆಲವು ಜಿಲ್ಲೆಗಳಿಂದ ಈ ಸಂಬಂಧ ಇನ್ನೂ ಪ್ರಸ್ತಾವನೆಗಳು ಸ್ವೀಕೃತವಾಗುತ್ತಿರುವುದು ಕಂಡುಬಂದಿದೆ.

ಕೂಡಲೇ ಮಾಹಿತಿ ರವಾನಿಸಲು ತಾಕೀತು

ಈ ಹಿನ್ನೆಲೆಯಲ್ಲಿ, ಇಂತಹ ಅನುಮೋದನೆಗೆ ಅರ್ಹರಾಗಿರುವ ಶಿಕ್ಷಕರು ಯಾರೂ ವಂಚಿತರಾಗದಂತೆ ಕ್ರಮವಹಿಸಲು ಇಲಾಖೆ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸೌಲಭ್ಯಕ್ಕೆ ಅರ್ಹರಾಗಿರುವ ಶಿಕ್ಷಕರ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಅಗತ್ಯ ದಾಖಲೆಗಳು ಹಾಗೂ ಸೂಕ್ತ ಶಿಫಾರಸ್ಸಿನೊಂದಿಗೆ ಕಚೇರಿಗೆ ತಕ್ಷಣವೇ ಸಲ್ಲಿಸಬೇಕೆಂದು ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಆದೇಶಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology