Home » ಲೈವ್ ನ್ಯೂಸ್ » ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ ಅವರ ಪರಿಚಯ

ಮಾನ್ಯ ಶ್ರೀ ಈಶ್ವರ ಬಿ ಖಂಡ್ರೆ ಅವರ ಪರಿಚಯ

Facebook
X
WhatsApp
Telegram

ಬೀದರ್.04.ಜೂನ್.26: ಕರ್ನಾಟಕ ಕಿರೀಟ ಎಂದೇ ಖ್ಯಾತವಾದ ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರು. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾಗಿರುವ ಈಶ್ವರ್ ಖಂಡ್ರೆ, ಎಂಜಿನಿಯರಿಂಗ್ ಪದವೀಧರರು.
ಈಶ್ವರ್ ಖಂಡ್ರೆ ರಾಜಕೀಯ ರಂಗ ಪ್ರವೇಶಿಸಿದ್ದು ಸೇವಾದಳದ ಮೂಲಕ. ಸೇವಾದಳದ ಶಿಬಿರದಲ್ಲಿ ಅಂದಿನ ಯುವ ನಾಯಕ ರಾಜೀವ್ ಗಾಂಧಿ ಅವರ ಭಾಷಣದಿಂದ  ಪ್ರೇರಿತರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.

ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಹೋರಾಟದ ನೇತಾರರು, ನಿಜಾಮರು ಮತ್ತು ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಡಿದ ತಮ್ಮ ತಂದೆ ಹಾಗೂ ಲೋಕನಾಯಕ ಶತಾಯುಷಿ ಮಾಜಿ ಸಚಿವ ಲಿಂಗೈಕ್ಯ ಶ್ರೀ ಭೀಮಣ್ಣ ಖಂಡ್ರೆ ಬದುಕಿಗೆ ರೋಲ್ ಮಾಡಲ್.

ತಂದೆಯಿಂದ ಪ್ರೇರಣೆ ಪಡೆದು, ಸಾರ್ವಜನಿಕರೊಂದಿಗೆ ಬೆರೆತು, ಜನ ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಾ, ತಮ್ಮ ಹುಟ್ಟೂರು ಭಾಲ್ಕಿಯ ಮತ್ತು ಜಿಲ್ಲೆ ಬೀದರ್ ನ ಸರ್ವಾಂಗೀಣ ಪ್ರಗತಿಗಾಗಿ ಸದಾ ಶ್ರಮಿಸುತ್ತಿರುವ, ಕ್ಷೇತ್ರದ ಮತ್ತು ಜಿಲ್ಲೆಯ ಜನತೆಗೆ ಹಿತಕ್ಕಾಗಿ ಸದಾ ತುಡಿಯುವ, ಮಿಡಿಯುವ  ಈಶ್ವರ ಖಂಡ್ರೆ ಅವರನ್ನು ಭಾಲ್ಕಿಯ ಜನತೆ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದ್ದಾರೆ. ಅಷ್ಟೇ ಅಲ್ಲ ಇವರ ಪುತ್ರ ಸಾಗರ್ ಈ ಖಂಡ್ರೆ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ 1.29 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಸಂಸತ್ತಿಗೆ ಕಳಿಸಿದ್ದಾರೆ. ಇದು ಖಂಡ್ರೆ ಕುಟುಂಬದ ಬಗ್ಗೆ ಬೀದರ್ ಜನತೆಗೆ ಇರುವ ಪ್ರೀತಿ ವಿಶ್ವಾಸದ ಧ್ಯೋತಕವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ನಿಷ್ಠರಾಗಿರುವ ಈಶ್ವರ ಖಂಡ್ರೆ, ಶಾಸಕರಾಗಿ ಕ್ಷೇತ್ರದ ಬಗ್ಗೆ ಇಟ್ಟಿರುವ ಕಾಳಜಿ ಮತ್ತು ಪಕ್ಷದ ಸಂಘಟನೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು, 2017ರಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ (Minister of Municipal Administration & Public Enterprises) ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು.
ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಮುಂದುವರಿಯುವ ಅವಕಾಶ ಇದ್ದರೂ ಈಶ್ವರ ಖಂಡ್ರೆ, ಪಕ್ಷ ಸಂಘಟನೆಯ ಹೊಣೆ ಹೊರುವ ನಿರ್ಧಾರ ಮಾಡಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಏಕೈಕ ಕಾರ್ಯಾಧ್ಯಕ್ಷರಾಗಿ, ಕರ್ನಾಟಕದಾದ್ಯಂತ ಪ್ರವಾಸ ಮಾಡಿ, ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟಿಸಿದರು.

2023ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಪುನರಾಯ್ಕೆಯಾದ  ಈಶ್ವರ ಖಂಡ್ರೆ ಅವರು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವರಾಗಿದ್ದು, ಸಚಿವರಾದ ಮೊದಲ ದಿನದಿಂದಲೇ ಇಲಾಖೆಯ ಮಹತ್ವವನ್ನು ಈ ನಾಡಿಗೆ ಪರಿಚಯಿಸಿದ್ದಾರೆ.

ಈವರೆಗೆ ಯಾವುದೇ ಅರಣ್ಯ ಸಚಿವರು ತೋರದ ಧೈರ್ಯ ಪ್ರದರ್ಶಿಸಿರುವ ಅವರು 12 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿದ್ದಾರೆ. ಹೊಸದಾಗಿ 15 ಸಾವಿರ ಎಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಿಸಿದ್ದಾರೆ.

ಅರಣ್ಯ ಇಲಾಖೆಯ ವತಿಯಿಂದ 2023ರಿಂದ ಇಲ್ಲಿಯವರೆಗೆ 11 ಕೋಟಿ ಸಸಿ ನೆಟ್ಟು ಪೋಷಣೆ ಮಾಡುವ ಗುರಿಯನ್ನು ಪೂರೈಸಿದ್ದು, ಈ ಪೈಕಿ ಎಷ್ಟು ಗಿಡಗಳು ಬದುಕುಳಿದಿವೆ ಎಂದು ತಿಳಿಯಲು ಆಡಿಟ್ ಕೂಡ ಮಾಡಿಸಿದ್ದಾರೆ.

ಅರಣ್ಯ ಅಪರಾಧ ತಡೆಗಟ್ಟಲು ಗರುಡಾಕ್ಷಿ ಎಂಬ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿ ಮಾಡಿಸಿದ್ದಾರೆ.

ಬೆಂಗಳೂರಿನಲ್ಲಿ 150 ವರ್ಷಗಳ ತರುವಾಯ ಮೊಟ್ಟ ಮೊದಲ ಬಾರಿಗೆ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಶ್ವಾಸತಾಣಗಳನ್ನು ಉಳಿಸಲು ಹೆಸರುಘಟ್ಟ ಕೆರೆ ಪ್ರದೇಶದಲ್ಲಿ 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರುಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಿದ್ದಾರೆ.

ಚಾರಣಪಥಗಳ ಟಿಕೆಟ್ ಆನ್ ಲೈನ್ ಮಾಡಿದ್ದಷ್ಟೇ ಅಲ್ಲದೆ, ಚಾರಣಕ್ಕೆ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರಮಾಣಿತ ಕಾರ್ಯಾಚರಣೆ ಮಾನದಂಡ ಎಸ್.ಓ.ಪಿ. ಮಾಡಿಸಿದ್ದಾರೆ. ಆನೆ ಶಿಬಿರ ಮತ್ತು ಸಫಾರಿಗೂ ಹೊಸ ಎಸ್.ಓ.ಪಿ. ಮಾಡಿಸಿದ್ದಾರೆ.

ಆನೆ-ಮಾನವ ಸಂಘರ್ಷ ತಪ್ಪಿಸಲು ರೈಲ್ವೆ ಬ್ಯಾರಿಕೇಡ್, ಟೆಂಟಕಲ್ ಫೆನ್ಸಿಂಗ್, ಸೌರ ತಂತಿ ಬೇಲಿ, ಆನೆ ಕಂದಕಗಳಿಗೆ ಆದ್ಯತೆ ನೀಡಿರುವುದಲ್ಲದೆ, ಆನೆ-ಮಾನವ ಸಂಘರ್ಷ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನವನ್ನೂ ಆಯೋಜಿಸಿದ್ದಾರೆ. ಜೊತೆಗೆ ದಕ್ಷಿಣ ರಾಜ್ಯಗಳ ಜೊತೆಗೆ ಸಮನ್ವಯ ಸಾಧಿಸಲು ಬಂಡೀಪುರ ಚಾರ್ಟರ್ ಅಂಗೀಕರಿಸಿದ್ದಾರೆ. ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿ ವನ್ಯಜೀವಿಗಳ ಚಲನ ವಲನದ ಬಗ್ಗೆ ನಿಗಾ ಇಟ್ಟು ಕಾಡಿನಂಚಿನ ಗ್ರಾಮಗಳಿಗೆ ಮಾಹಿತಿ ನೀಡುವ ಕಾರ್ಯ ಮಾಡಿದ್ದಾರೆ. ಕಮಾಂಡ್ ಸೆಂಟರ್ ಸ್ಥಾಪಿಸಿ, ಥರ್ಮಲ್ ಡ್ರೋನ್ ನೇರವಿನಿಂದ ವನ್ಯಜೀವಿಗಳ ಸೆರೆಗೆ ಮತ್ತು ನಿಗಾ ಇಡಲು ಕ್ರಮ ವಹಿಸಿದ್ದಾರೆ.

ಕಷ್ಟಪಟ್ಟು ಕೆಲಸ ಮಾಡುವ ಅರಣ್ಯ ಮುಂಚೂಣಿ ಸಿಬ್ಬಂದಿಗೆ ರಿಸ್ಕ್ ಅಲೋಯನ್ಸ್ ಅಪಾಯ ಭತ್ಯೆ ನೀಡಿದ ಶ್ರೇಯವೂ ಇವರಿಗೆ ಸಲ್ಲುತ್ತದೆ. ಇದಲ್ಲದೆ ಖಾಲಿ ಇದ್ದ ಹುದ್ದೆಗಳ ಭರ್ತಿಗೂ ಕ್ರಮ ವಹಿಸಿದ್ದಷ್ಟೇ ಅಲ್ಲದೆ, ನಗರ ಪ್ರದೇಶದ ಮರಗಳ ಸಂರಕ್ಷಣೆಗಾಗಿ ಮರದ ಸುತ್ತಲೂ ಹಾಕಲಾದ ಕಾಂಕ್ರೀಟ್ ತೆರವಿಗೆ ಆದೇಶ ಹೊರಡಿಸಿದ್ದಾರೆ.

ವನ್ಯಜೀವಿಗಳ ಅಂಗಾಂಗಕ್ಕಾಗಿ ವನ್ಯಜೀವಿ ಹತ್ಯೆ ತಡೆಯಲು ಇವರು ಕೈಗೊಂಡ ಕಠಿಣ ಕ್ರಮಗಳು ಜನರಲ್ಲಿ ಜಾಗೃತಿ ಮೂಡಿಸಿವೆ.
5 ನಗರಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿ, ಅದರ ಅನುಷ್ಠಾನಕ್ಕೆ ಶ್ರಮಿಸಿದ್ದಾರೆ.

ಇಡೀ ರಾಜ್ಯವೇ ಅರಣ್ಯ ಇಲಾಖೆಯತ್ತ ಚಿತ್ತ ಹರಿಸುವಂತೆ ಕೆಲಸ ನಿರ್ವಹಿಸಿದ್ದಾರೆ.

ಬೀದರ್ ನಲ್ಲಿ ರಾಜ್ಯಮಟ್ಟದ ಪಾರಂಪರಿಕ ವೈದ್ಯರ ಸಮ್ಮೇಳನ ಆಯೋಜಿಸಿ ಔಷಧೀಯ ಸಸ್ಯಗಳ ಸಂರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.

ಇದರ ಜೊತೆಗೆ ಬೆಂಗಳೂರು ನಗರದಲ್ಲಿ 10 ಸಾವಿರ ಕೋಟಿ ರೂ.ಬೆಲೆ ಬಾಳುವ 250 ಎಕರೆ ಸೇರಿದಂತೆ ಸಾವಿರಾರು ಕೋಟಿ ರೂ. ಮೌಲ್ಯದ ಅರಣ್ಯಭೂಮಿ ಒತ್ತುವರಿ ತೆರವು ಮಾಡಿಸಿದ್ದಾರೆ.
ಸುಮಾರು 50 ಸಾವಿರ ಕೋಟಿ ರೂ. ಬೆಲೆ ಬಾಳುವ ಎಚ್.ಎಂ.ಟಿ. ಅರಣ್ಯ ಭೂಮಿ ಸೇರಿದಂತೆ ಗುತ್ತಿಗೆ ಭೂಮಿಗಳ ವಶಕ್ಕೆ ಕ್ರಮ ಕೈಗೊಂಡಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿದ ಅವರು ಪ್ರಸ್ತುತ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಜನನ- 64 years (Born on 15th January, 1962) ತಂದೆ – ಲಿಂಗೈಕ್ಯ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (ಮಾಜಿ ಸಚಿವರು) ಪತ್ನಿ -Dr. Geetha Khandre, is a medical practitioner and the daughter of Justice Shashidhar B. Majge, former Karnataka Upa Lokayukth.

ಹಿರಿಯ ಪುತ್ರ – ಡಾ.ಗುರುಪ್ರಸಾದ್ ಎಂಬಿಬಿಎಸ್. ಎಂಡಿ. ತಜ್ಞ ವೈದ್ಯರು. ಎರಡನೇ ಪುತ್ರ – ಸಾಗರ್ ಖಂಡ್ರೆ, ಕಾನೂನು ಪದವೀಧರರು ಮತ್ತು ಹಾಲಿ ಬೀದರ್ ಸಂಸತ್ ಸದಸ್ಯರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology