Home » ಲೈವ್ ನ್ಯೂಸ್ » ಸರ್ಕಾರಿ ಶಾಲೆಗಳಲ್ಲಿ Computer Teachers ನೇಮಕಾತಿಗೆ ಸರ್ಕಾರ ಸಿದ್ಧತೆ

ಸರ್ಕಾರಿ ಶಾಲೆಗಳಲ್ಲಿ Computer Teachers ನೇಮಕಾತಿಗೆ ಸರ್ಕಾರ ಸಿದ್ಧತೆ

Facebook
X
WhatsApp
Telegram

ಬೆಂಗಳೂರು.30.ಜೂನ್.26: ರಾಜ್ಯ ಸರ್ಕಾರ ಇನ್ಮುಂದೆ ಪ್ರತಿಯೊಂದು ಶಾಲೆಗಳಲ್ಲಿ ಗಣಕ ವಿಜ್ಞಾನ (ಕಂಪ್ಯೂಟರ್ ಸೈನ್ಸ್) ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಮಹತ್ವದ ತಬದಲಾವಣೆ ತರಲು ಮುಂದಾಗಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ‘ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು, 2026’ ರ ಕರಡು ಅಧಿಸೂಚನೆಯನ್ನು ಅಧಿಕೃತ ರಾಜ್ಯಪತ್ರದಲ್ಲಿ ಜೂನ್ 29, 2026 ರಂದು ಪ್ರಕಟಿಸಿದೆ.

ಈ ಹೊಸ ಬದಲಾವಣೆ ನಿಯಮಗಳ ಅನ್ವಯ, 1 ರಿಂದ 8ನೇ ತರಗತಿಯ ಗಣಕ ವಿಜ್ಞಾನ ಶಿಕ್ಷಕರ (ಪದವೀಧರ ಪ್ರಾಥಮಿಕ ಶಿಕ್ಷಕರು – 6 ರಿಂದ 8ನೇ ತರಗತಿ) ನೇರ ನೇಮಕಾತಿಗೆ ನಿಗದಿಪಡಿಸಲಾಗಿರುವ ವಿದ್ಯಾರ್ಹತೆ ಹಾಗೂ ಇತರೆ ಅಗತ್ಯ ನಿಯಮಗಳ ಸಂಪೂರ್ಣ ವಿವರ ಇಲ್ಲಿದೆ:

ವೇತನ ಶ್ರೇಣಿ:

ನೇಮಕಗೊಳ್ಳುವ ಗಣಕ ವಿಜ್ಞಾನ ಶಿಕ್ಷಕರಿಗೆ ರೂ. 44,425 – 83,700 ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಅಗತ್ಯವಿರುವ ವಿದ್ಯಾರ್ಹತೆಗಳು:

ಪದವಿ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ಯಾವುದಾದರೊಂದು ಪದವಿ ಹೊಂದಿರಬೇಕು:

ಬಿ.ಎಸ್ಸಿ ಗಣಕ ವಿಜ್ಞಾನ (B.Sc in Computer Science)

ಬಿಸಿಎ (BCA)

ಬಿಐಟಿ (BIT)

ಬಿ.ಇ (ಗಣಕ ವಿಜ್ಞಾನ) [B.E. (CS)]

ಬಿ.ಟೆಕ್ (ಗಣಕ ವಿಜ್ಞಾನ) [B.Tech. (CS)]

ಭಾಷಾ ಅರ್ಹತೆ: ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.

ಬಿ.ಇಡಿ ಮತ್ತು ಟಿ.ಇ.ಟಿ (TET) ನಿಯಮಗಳು:

ಶಾಲಾ ಶಿಕ್ಷಣ ಇಲಾಖೆಯಲ್ಲಿ ಗಣಕ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡ ಅಭ್ಯರ್ಥಿಗಳು, ನೇಮಕಗೊಂಡ 5 ವರ್ಷಗಳೊಳಗಾಗಿ ಎನ್‌ಸಿಟಿಇ (NCTE) ಇಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಇಡಿ (B.Ed) ಪದವಿಯನ್ನು ಹೊಂದಬೇಕಾಗುತ್ತದೆ.

ಇದೇ ರೀತಿ, ಇಲಾಖೆಯಲ್ಲಿ ಗಣಕ ವಿಜ್ಞಾನ ಶಿಕ್ಷಕರಾಗಿ ನೇಮಕಗೊಂಡ 5 ವರ್ಷಗಳೊಳಗಾಗಿ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (T.E.T) ಉತ್ತೀರ್ಣರಾಗಿ ಅರ್ಹತೆ ಗಳಿಸಬೇಕಿರುವುದು ಕಡ್ಡಾಯವಾಗಿದೆ.

ಆಕ್ಷೇಪಣೆ ಸಲ್ಲಿಕೆಗೆ ಅವಕಾಶ:
ಈ ಕರಡು ತಿದ್ದುಪಡಿ ನಿಯಮಗಳಿಂದ ಬಾಧಿತರಾಗಬಹುದಾದ ಯಾವುದೇ ವ್ಯಕ್ತಿಗಳು ಅಥವಾ ಸಾರ್ವಜನಿಕರು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ (29.06.2026) 7 ದಿನಗಳ ನಂತರ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಆಸಕ್ತರು ತಮ್ಮ ಆಕ್ಷೇಪಣೆಗಳನ್ನು ‘ಅಪರ ಮುಖ್ಯ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು – 560 001’ ಈ ವಿಳಾಸಕ್ಕೆ ನಿಗದಿತ ಅವಧಿಯೊಳಗೆ ಕಳುಹಿಸಬಹುದಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ) ಮಲ್ಲಿಕಾರ್ಜುನ ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology