Home » ಲೈವ್ ನ್ಯೂಸ್ » ಡಾ. ಬಿ.ಆರ್. ಅಂಬೇಡ್ಕರ ಜಯಂತಿಯಲ್ಲಿ ಶ್ರೀ ಕೆ. ಪುಂಡಲೀಕಾರಾವರಿಗೆ ಸನ್ಮಾನ

ಡಾ. ಬಿ.ಆರ್. ಅಂಬೇಡ್ಕರ ಜಯಂತಿಯಲ್ಲಿ ಶ್ರೀ ಕೆ. ಪುಂಡಲೀಕಾರಾವರಿಗೆ ಸನ್ಮಾನ

ಔರಾದ.24.ಏಪ್ರಿಲ.25:- ಔರಾದನಲ್ಲಿ ಏಪ್ರಿಲ್ 22 ರಂದು ಡಾ. ಬಿ.ಆರ್. ಅಂಬೇಡ್ಕರರ 134ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಅಂಗವಾಗಿ ಕರ್ನಾಟಕ ಸರ್ಕಾರದಿಂದ ಡಾ. ಬಿ.ಆರ್. ಅಂಬೇಡ್ಕರ ಪ್ರಶಸ್ತಿ ಪುರಸ್ಕೃತರಾಗಿರುವ, ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಬೀದರ ಜಿಲ್ಲೆಯಲ್ಲಿ 19 ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಶ್ರೀ ಕೆ. ಪುಂಡಲೀಕಾರಾವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಯುವ ಸಂಸದ ಶ್ರೀ ಸಾಗರ ಖಂಡ್ರೆ, ಮಾನ್ಯ ತಹಶೀಲ್ದಾರ ಮಹೇಶ ಪಾಟೀಲ, ಮುಖಂಡರು ಡಾ. ಭೀಮಸೇನರಾವ ಶಿಂದೆ, ರಾಮಣ್ಣಾ ವಡೆಯರ, ಕುಮಾರ ದೇಶಮುಖ, ಬಾಬುರಾವ ತಾರೆ, ಅಮರ ಜಾಧವ, ಶಿವಕುಮಾರ ಕಾಂಬಳೆ, ಸುನೀಲ ಮಿತ್ರಾ, ರತ್ನದೀಪ ಕಸ್ತೂರೆ ಹಾಗೂ ಆನಂದ ಕಾಂಬಳೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಆತ್ಮೀಯತೆ ಮತ್ತು ಗೌರವಭರಿತವಾಗಿ ನಡೆಯಿತು.

Author

ಪ್ರಮುಖ ಸುದ್ದಿ

Stock market

Astrology