|

ಕರಡ್ಯಾಳ ಗುರುಕುಲ: ನೀಟ್‌ ವೇದಾಂತ ರಾಷ್ಟ್ರಕ್ಕೆ  165ನೇ ರ‍್ಯಾಂಕ್,

ಬೀದರ.15.ಜೂನ್.25:- ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಹಣಮಂತರಾವ್ ಲಕಡೆ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 165ನೇ ರ‍್ಯಾಂಕ್‌ ಪಡೆದಿದ್ದಾರೆ.

ವೇದಾಂತ 720ಕ್ಕೆ 629 (99.98 ಪರ್ಸೆಂಟೈಲ್‌) ಅಂಕ ಪಡೆದು ಗಡಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ತಂದೆ ಹಣಮಂತರಾವ್, ತಾಯಿ ಸ್ಮಿತಾ ಉಪನ್ಯಾಸಕರು. ಚನ್ನಬಸವೇಶ್ವರ ಗುರುಕುಲ ಪ್ರತಿವರ್ಷ ನಡೆಸುವ ಗೋಲ್ಡನ್ ಸ್ಕಾಲರ್ ಶಿಪ್ ಯೋಜನೆಯಡಿ ಎರಡು ವರ್ಷ ಉಚಿತ ಊಟ, ವಸತಿ, ಪಿಯು ಶಿಕ್ಷಣ, ಕೋಚಿಂಗ್ ಪಡೆದು ಈ ಸಾಧನೆ ಮಾಡಿದ್ದಾರೆ.

ವೇದಾಂತ ಅವರು ಮುಂದೆ‌ ದೆಹಲಿ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾರೆ.

Similar Posts

Leave a Reply

Your email address will not be published. Required fields are marked *