Home » ಲೈವ್ ನ್ಯೂಸ್ » ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲಜಾತಿ ಹೊಲೆಯ ಎಂದು ನಮೂದಿಸಿ

ಒಳಮೀಸಲಾತಿ ಸಮೀಕ್ಷೆಯಲ್ಲಿ ತಮ್ಮ ಮೂಲಜಾತಿ ಹೊಲೆಯ ಎಂದು ನಮೂದಿಸಿ

ಛಲವಾದಿ ಮಹರ್ (ಹೊಲೆಯ) ಬಂಧುಗಳೇ,

ಕರ್ನಾಟಕ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಬರುವ 101 ಜಾತಿ ಜನಾಂಗದವರನ್ನು ಇವರು ಇದೇ ಜಾತಿಯವರು ಎಂದು ಗುರುತಿಸಿ ಸಮೀಕ್ಷೆ ನಡೆಸಲು ರಾಜ್ಯಾದ್ಯಂತ 54 ಸಾವಿರ ಶಿಕ್ಷಕ/ಶಿಕ್ಷಕಿಯರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಸಮೀಕ್ಷೆ ನಡೆಸಲು ನೇಮಕಗೊಳಿಸಿರುತ್ತಾರೆ.

ಈಗಾಗಲೇ ಒಳಮೀಸಲಾತಿ ಸಮೀಕ್ಷೆ ಯನ್ನು ರಾಜ್ಯ ಸರ್ಕಾರ ಪ್ರಾರಂಭ ಮಾಡಿದೆ. ಆದ ಕಾರಣ, ಹೊಲೆಯ ಜಾತಿ ಜನಾಂಗದವರಾದ ನಾವು ಇಲ್ಲಿಯವರೆಗೆ ನಮ್ಮ ಮತ್ತು ನಮ್ಮ ಮಕ್ಕಳ ದಾಖಲಾತಿ ಗಳಲ್ಲಿ ಹಾಗೂ ಜಾತಿ ಪ್ರಮಾಣ ಪತ್ರಗಳಲ್ಲಿ ಅಥವಾ ಇನ್ಯಾವುದೇ ದಾಖಲಾತಿಗಳಲ್ಲಿ

1) ಆದಿ ಕರ್ನಾಟಕ (AK),

2) ಆದಿ ದ್ರಾವಿಡ (AD)

3) ಆದಿ ಆಂಧ್ರ (AA) ಎಂದು

ನಮೂದಿಸಿರುವುದು ತಿಳಿದು ಬಂದಿರುತ್ತದೆ. ಮುಂದೆ ಹೀಗಾಗುವುದು ಬೇಡ. ರಾಜ್ಯದಲ್ಲಿರುವ ಅತಿ ದೊಡ್ಡ ಜನ ಸಂಖ್ಯೆ ಹೊಂದಿರುವ ಮೂಲ ಹೊಲೆಯ ಜಾತಿ ಯವರಾದ ನಾವು AK, AD, AA, ಎಂದು ಬರೆದರೆ ನಮಗೆ ನಾವೇ ನಮ್ಮ ಜನಸಂಖ್ಯೆ ಕಡಿಮೆ ಮಾಡಿಕೊಂಡಂತಾಗುತ್ತದೆ.

ಮೂಲ ಜಾತಿ ಹೊಂದಿದ ಛಲವಾದಿ ಮಹರ್ (ಹೊಲೆಯ) ಗಳಾದ ನಾವು ಮುಂದೆ ನಮ್ಮ ಮಕ್ಕಳ ಶಾಲಾ ದಾಖಲಾತಿ ಗಳೊಂದಿಗೆ ಇನ್ನೂ ಮುಂದೆ ಖಡ್ಡಾಯವಾಗಿ ಹೊಲೆಯ ಎಂದು ನಮೂದಿಸಲು ಔರಾದ ತಾಲ್ಲೂಕು ಹೊಲೆಯ ಜಾಗೃತಿ ಸಮಿತಿ ತಮ್ಮಲ್ಲಿ ಈ ಮೂಲಕ ಕೋರುತ್ತದೆ.

ಈಗ ತಮ್ಮ ಮನೆಯ ಬಾಗಿಲಿಗೆ ಸರ್ಕಾರಿ ಅಧಿಕಾರಿಗಳು, ಇನ್ಯಾವುದೋ ಅಧಿಕಾರಿಗಳು ಸಮೀಕ್ಷೆ ನಡೆಸಲು ಬಂದಂಥ ಸಂದರ್ಭದಲ್ಲಿ ಅವರಿಗೆ ಖಡ್ಡಾಯವಾಗಿ ನಾವು ಹೊಲೆಯ ಎಂದು ಹೇಳಿ ನೋಂದಾಯಿಸಿ.



ಶ್ರೀ ಪ್ರಕಾಶ್ ಭಂಗಾರೇ

ಡಿಎಸ್ಎಸ್ ತಾಲೂಕಾ ಸಂಚಾಲಕ 

ಔರಾದ್  9945109814

Author

ಪ್ರಮುಖ ಸುದ್ದಿ

Stock market

Astrology