Home » ಲೈವ್ ನ್ಯೂಸ್ » ಆಯಾತಪ್ಪಿ ಅಪರಿಚಿತ ವ್ಯಕಿ ಮೃತ: ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರ ಮನವಿ

ಆಯಾತಪ್ಪಿ ಅಪರಿಚಿತ ವ್ಯಕಿ ಮೃತ: ವಾರಸುದಾರರ ಪತ್ತೆಗೆ ರೈಲ್ವೇ ಪೊಲೀಸರ ಮನವಿ

Facebook
X
WhatsApp
Telegram

ರಾಯಚೂರು.09.ಜುಲೈ.26: ರಾಯಚೂರು ರೈಲ್ವೇ ನಿಲ್ದಾಣದ ವೇದಿಕೆ ನಂ-01 ರಲ್ಲಿ ಮಂತ್ರಾಲಯ ಎಂಡ್ ಕಡೆಗೆ 12732 ಪದ್ಮಾವತಿ ಎಕ್ಸ್ಪ್ರೆಸ್ ರೈಲುಗಾಡಿ ಹತ್ತುವಾಗ ಮೃತ ಅಪರಿಚಿತ ವ್ಯಕ್ತಿಯು ಆಯಾತಪ್ಪಿ ಕೆಳಗೆ ಬಿದು ಆಕಸ್ಮಿಕವಾಗಿ ಮೃತಪಟ್ಟಿದ್ದು, ಈ ಕುರಿತು ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಸಂಖ್ಯೆ: 36/2026 ಕಲಂ 194 ಬಿ.ಎನ್.ಎಸ್.ಎಸ್ ರಿತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಮೃತದೇಹ ದೊರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಆದ್ದರಿಂದ ಮೃತನ ವಾರುಸುದಾರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ಮೃತದೇಹವನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಯ ಶೀತಲ ಶವಗಾರದಲ್ಲಿ ಇಡಲಾಗಿದೆ.

ಮೃತ ಅಪರಿಚಿತ ವ್ಯಕಿಯ ಚಹರೆ: ಸುಮಾರು 30-35 ವರ್ಷ, ಎತ್ತರ ಸುಮಾರು 6 ಅಡಿ, ಸಾದಾಕಪ್ಪು ಮೈ ಬಣ್ಣ, ಉದ್ದ ಮುಖ, ಕಪ್ಪು ಗಡ್ಡ ಮತ್ತು ಕಪ್ಪು ಮೀಸೆ ಹೊಂದಿರುತ್ತಾನೆ. ತಲೆಯಲ್ಲಿ ಅರ್ಧ ಇಂಚು ಕಪ್ಪು ಕೂದಲು ಹೊಂದಿದ್ದು, ಒಂದು ಚ್ಯಾಕಲೇಟ್ ಮತ್ತು ಕಪ್ಪು ಬಣ್ಣದ ಪೂಲ್ ತೋಳಿನ ಶರ್ಟ, ಒಂದು ಚ್ಯಾಕಲೇಟ್ ಬಣ್ಣದ ಮಧ್ಯೆ ಬಿಳಿ ಬಣ್ಣದ ಒಂದು ಗೇರೆಯುಳ್ಳ ನೈಟ್ ಪ್ಯಾಂಟ್, ಎರಡು ಕಾಲಿನಲ್ಲಿ ಚಪ್ಪಲಿ ಧರಿಸಲಾಗಿದೆ
ಈ ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೊಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-231716 ಅಥವಾ ಮೊಬೈಲ್ ಸಂಖ್ಯೆ: 9480802111 ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ: 080-22871291ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology