|

ಆದಾಯ ತೆರಿಗೆ ಇಲಾಖೆಯಲ್ಲಿ ’63 ಹುದ್ದೆಗಳಿಗೆ’ ಅರ್ಜಿ ಆಹ್ವಾನಿಸಲಾಗಿದೆ

ಬೆಂಗಳೂರು.20.ಏಪ್ರಿಲ್.25:-  ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯು ಸ್ಟೆನೋಗ್ರಾಫರ್ ಗ್ರೇಡ್-I ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. 63 ಹುದ್ದೆಗಳು ಖಾಲಿಯಿದ್ದು ಅರ್ಜಿ ಆಹ್ವಾನಿಸಲಾಗಿದೆ .

ವಯಸು:

ಗರಿಷ್ಠ ವಯಸ್ಸು 56 ವರ್ಷ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂ. 35,400 ರಿಂದ 1,12,400ರವರೆಗೆ ವೇತನ ಸಿಗಲಿದೆ. ಇದಲ್ಲದೇ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ, ಇತರ ಸೌಲಭ್ಯಗಳು ಮತ್ತು ಭತ್ಯೆಗಳನ್ನು ಸಹ ದೊರೆಯಲಿದೆ.

ಅರ್ಹತೆ:

ಇಲಾಖೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿರುವ ಅಭ್ಯರ್ಥಿಗಳು ಮಾತ್ರ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯನ್ನು ಡೆಪ್ಯುಟೇಶನ್ ಆಧಾರದ ಮೇಲೆ ಮಾಡಲಾಗುತ್ತಿದೆ, ಅಂದರೆ, ಕೇಂದ್ರ ಸರ್ಕಾರದ ಯಾವುದೇ ಇತರ ಇಲಾಖೆಯಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಅಭ್ಯರ್ಥಿಗಳು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ. ನೇಮಕಾತಿ ಪ್ರಕ್ರಿಯೆಗೆ ಅರ್ಜಿಯನ್ನು ಆಫ್‌ಲೈನ್ ಮೋಡ್ ಮೂಲಕ ಸಲ್ಲಿಸಬೇಕು.

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಕೊನೆ ದಿನಾಂಕ: 22.04.2025


ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಜಾಲತಾಣ

https://incometaxindia.gov.in ಗೆ ಭೇಟಿ ನೀಡಿ.

Similar Posts

Leave a Reply

Your email address will not be published. Required fields are marked *