|

ಪದೇ ಪದೇ ಡಾ. ಬಿ.ಆರ್.ಅಂಬೇಡ್ಕ‌ರ್ ಭಾವಚಿತ್ರಕ್ಕೆ ಅವ್ಮಾನ್ ಕಪ್ಪು ಬಣ್ಣ ಬಳಿದು ವಿಕೃತಿ ಮೆರೆದ ಕಿಡಿಗೇಡಿಗಳು

ಬೆಳಗಾವಿ: 21.ಏಪ್ರಿಲ್.25:ಎಂ.ಕೆ.ಹುಬ್ಬಳ್ಳಿ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಸೋಮವಾರ ನಸುಕಿನಲ್ಲಿ ಕಪ್ಪು ಬಣ್ಣ ಹಚ್ಚಿದ್ದಾರೆ ಈ ಘಟನೆ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿ  ನಡೆದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಚನ್ನಮ್ಮನ ಕಿತ್ತೂರು ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಎಂ.ಕೆ.ಹುಬ್ಬಳ್ಳಿಯ ದಲಿತ ಸಂಘರ್ಷ ಸಮಿತಿ ಯುವಕರು ಆಳವಡಿಸಿದ್ದ ಡಾ.ಬಿ.ಆರ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಕಪ್ಪು ಬಣ್ಣ ಬಳಿದು ವಿಕೃತಿ ಮರೆದಿದ್ದಾರೆ.

ಸದ್ಯ ಅದನ್ನು ತೆರವು ಮಾಡಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಚನ್ನಮ್ಮನ ಕಿತ್ತೂರು ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ಸಮುದಾಯದ ಜನ ಸೇರಿಕೊಂಡು ಶಾಂತಿಯುತವಾಗಿ ಚರ್ಚೆ ನಡೆಸಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Similar Posts

Leave a Reply

Your email address will not be published. Required fields are marked *