Home » ಲೈವ್ ನ್ಯೂಸ್ » SSLC ಪರೀಕ್ಷೆ ಹಿಂದಿ ಗ್ರೇಡ್‌ ಪ್ರಶ್ನಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಉ. ನ್ಯ!

SSLC ಪರೀಕ್ಷೆ ಹಿಂದಿ ಗ್ರೇಡ್‌ ಪ್ರಶ್ನಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಉ. ನ್ಯ!

Facebook
X
WhatsApp
Telegram

ಬೆಂಗಳೂರು.11.ಏಪ್ರಿಲ್.26:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಗ್ರೇಡ್‌ ನೀಡುವ ಕುರಿತು ಸರಕಾರದ ಪ್ರಸ್ತಾವ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ಒಂದು ಲಕ್ಷ ರೂ.ದಂಡ ವಿಧಿಸಿದೆ.

ಕರ್ನಾಟಕ ರಾಜ್ಯ ಪೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಮಾಧ್ಯಮಗಳ ವರದಿ ಆಧರಿಸಿ ಬೆಂಗಳೂರಿನ ಎಚ್‌.ಎನ್‌.ಚಂದನಾ ಮತ್ತು ಎಸ್‌ ವೆಂಕಟೇಶ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.

ಅಲ್ಲದೆ, ”ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗಳಿಗೆ ಅಂಕಗಳ ಬದಲಿಗೆ ಶ್ರೇಣಿಗಳನ್ನು ನೀಡುವ ವ್ಯವಸ್ಥೆ ಕುರಿತ ಶಿಕ್ಷಣ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕಾ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಆ ಕುರಿತ ಸರಕಾರದ ಅಧಿಕೃತ ಆದೇಶದ ದಾಖಲೆಗಳನ್ನು ಒದಗಿಸಿಲ್ಲ.

ಅರ್ಜಿದಾರರ ಈ ನಡೆ ಅತ್ಯಂತ ಅಗೌರವಯುತವಾಗಿದೆ. ಇಂತಹ ಪತ್ರಿಕಾ ಹೇಳಿಕೆಗಳನ್ನು ರದ್ದುಗೊಳಿಸುವುದಕ್ಕೆ ಹೈಕೋರ್ಟ್‌ಗೆ ಅಸಾಧಾರಣವಾದ ವಿಶೇಷ ನ್ಯಾಯವ್ಯಾಪ್ತಿ ಚಲಾಯಿಸಬೇಕಾಗುತ್ತದೆ,” ಎಂದು ನ್ಯಾಯಪೀಠ ಹೇಳಿದೆ.


ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿ ಎಂದ ಕೋರ್ಟ್‌

ಅಲ್ಲದೆ, ಇದೊಂದು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿಯಾಗಿದೆ. ಅರ್ಜಿದಾರರಿಗೆ ತಲಾ 50 ಸಾವಿರ ರೂ. ದಂಡ ವಿಧಿಸಲಾಗುವುದು. ದಂಡದ ಮೊತ್ತವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಬೇಕು. ಒಂದು ವೇಳೆ ಅರ್ಜಿದಾರರು ದಂಡದ ಮೊತ್ತ ಪಾವತಿಸದಿದ್ದಲ್ಲಿಅವರ ಭೂ ಕಂದಾಯಕ್ಕೆ ಬಾಕಿ ಮೊತ್ತವನ್ನಾಗಿ ಪರಿಗಣಿಸಿ ವಸೂಲಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿತು.
ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಳ

ಅದಾದ ಬಳಿಕವೂ ಅರ್ಜಿದಾರರು ಮತ್ತೆ ವಾದ ಮುಂದುವರಿಸಿ ಹಿಂದಿ ಭಾಷೆ ತೆಗೆದು ಹಾಕಲಾಗುತ್ತದೆ ಎಂದು ವಿವರಿಸಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ”ಮೂರು ಸಾಲುಗಳ ಪತ್ರಿಕಾ ವರದಿ ಆಧರಿಸಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹಿಂದಿ ಭಾಷೆಯನ್ನು ತೆಗೆದುಹಾಕಲಾಗಿದೆ ಎಂಬುದಾಗಿ ಪತ್ರಿಕಾ ವರದಿಯಲ್ಲಿತಿಳಿಸಿಲ್ಲ. ಜತೆಗೆ, ಸಚಿವರು ಹಿಂದಿ ಭಾಷೆ ತೆಗೆಯಬೇಕೆಂದು ಹೇಳಿದ್ದಾರೆ ಎಂದು ಅರ್ಜಿಯಲ್ಲಿಉಲ್ಲೇಖಿಸಲಾಗಿದೆ. ಅದು ತಪ್ಪಾಗಿದ್ದು, ಅರ್ಜಿಯಲ್ಲಿಸೇರಿಸಲಾಗಿದೆ.

ಈ ರೀತಿಯ ಅಂಶ ಪತ್ರಿಕೆಗಳ ವರದಿಯಲ್ಲಿಉಲ್ಲೇಖವಾಗಿಲ್ಲ. ಆದ್ದರಿಂದ ದಂಡದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುತ್ತಿದೆ,” ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology