ವಿಶ್ವವಿದ್ಯಾಲಯೇಲ್ಲಿ ಪಿಎಚ್.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮ.
ಬೆಂಗಳೂರು.31.ಆಗಸ್ಟ್.25:- ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿಗೆ ಹೊಸ ನಿಯಮಗಳು ಚಾಲನೆಯಲ್ಲಿ ತರಲಾಗಿದೆ.ಪಿಎಚ್.ಡಿಗೆ ಪ್ರವೇಶ ಪಡೆಯಲು ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನದಲ್ಲಿ ಶೇ 30ರಷ್ಟು ಅಂಕಗಳು ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯೇಲ್ಲಿ ಪಿಎಚ್.ಡಿ ಪ್ರವೇಶಕ್ಕೆ ಪರಿಷ್ಕೃತ ನಿಯಮಗಳನ್ನು ವಿಶ್ವವಿದ್ಯಾಲಯ ಪ್ರಕಟಿಸಿದೆ. ಸ್ನಾತಕೋತ್ತರ ಪದವಿ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಪಡೆದಿರುವ ಶೇ 70ರಷ್ಟು ಹಾಗೂ ಸಂದರ್ಶನದಲ್ಲಿ ಪಡೆದಿರುವ ಶೇ 30ರಷ್ಟು ಅಂಕಗಳನ್ನು ಆಧರಿಸಿ ಪ್ರವೇಶ ನೀಡಲಾಗುತ್ತದೆ. ‘ಈ ಸಂಬಂಧ ವಿಶ್ವವಿದ್ಯಾಲಯ ರೂಪಿಸಿರುವ ನಿಯಮಗಳಿಗೆ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಒಪ್ಪಿಗೆ ನೀಡಿದ್ದಾರೆ….
Any questions related to prajaprabhat.com?