Home » ಲೈವ್ ನ್ಯೂಸ್ » ಶ್ರಾವಣ ಮಾಸದ ಮುಕ್ತಾಯ: ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ (ಬಿಲ್ವಪತ್ರೆ ) ಇಳಿಸುವ ಮೂಲಕ ಕಾಂಡ ಸಮಾರೋಪ

ಶ್ರಾವಣ ಮಾಸದ ಮುಕ್ತಾಯ: ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ (ಬಿಲ್ವಪತ್ರೆ ) ಇಳಿಸುವ ಮೂಲಕ ಕಾಂಡ ಸಮಾರೋಪ

ಶ್ರಾವಣ ಮುಕ್ತಾಯಕ್ಕೆ ಹಡಪದ ಅಪ್ಪಣ್ಣನ ಸನ್ನಿಧಿಯಲ್ಲಿ ಭಕ್ತಿಯ ವೈಭವ

*ಶಹಾಬಾದ*: – ನಗರದ ಬಸವೇಶ್ವರ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭವನ್ನು ಕಾಂಡ (ಬಿಲ್ವಪತ್ರೆ) ಇಳಿಸುವ ಮೂಲಕ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಚಿತ್ತಾಪುರದ ಕಂಬಳೇಶ್ವರ ಮಠದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟಗಳು ದೂರವಾಗಲಿ. ರೈತರ ಶಕ್ತಿಯಾದ ಎತ್ತುಗಳು ಸೇರಿದಂತೆ ನಾಡಿನ ಜನತೆ ಎದುರಿಸುತ್ತಿರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ. ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಆಶೀರ್ವಾದ ಸದಾ ನಾಡಿನ ಮೇಲಿರಲಿ ಎಂದು ಹಾರೈಸಿದರು.

ಪೇಠಶಿರೂರಿನ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಶಹಾಬಾದ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣನವರ ದೇವಸ್ಥಾನವು ಭವ್ಯವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ. ದೇವಸ್ಥಾನದ ಪೂಜ್ಯರಾದ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು ಹಗಲು-ರಾತ್ರಿ ಅಪ್ಪಣ್ಣನವರ ಸೇವೆ ಹಾಗೂ ಸಮಾಜದ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಮಲ್ಲಣ್ಣಪ್ಪ ಅಲ್ಲಮಪ್ರಭು ಪೀಠ, ಎಸ್. ತೋನಸನಹಳ್ಳಿ ಪೂಜ್ಯರು ಭಾಗವಹಿಸಿದ್ದರು.

ಯರಗೋಳದ ಶ್ರೀ ಸಂಗಮೇಶ್ವರ ಸ್ವಾಮಿಗಳು ಹಾಗೂ ಶಹಾಬಾದದ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಶ್ರಾವಣ ಮಾಸದ ಅಂಗವಾಗಿ ಇಡೀ ರಾತ್ರಿ ಭಜನಾ ಸಪ್ತಾಹ ನಡೆಯಿತು. ಜೇವರ್ಗಿ ತಾಲೂಕು ಹಡಪದ ಲಿಂಗಮ್ಮ ತಾಯಿಯ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಶ್ರೀಮತಿ ಸಾವಿತ್ರಮ್ಮ ಹಡಪದ ಅವರ ನೇತೃತ್ವದ ಭಜನಾ ಮಂಡಳಿ, ಹಳೇ ಶಹಾಬಾದದ ಸಂತೋಷ ಪಾಟೀಲ್ ಸಂಗಡಿಗರು ಹಾಗೂ ಬಸವೇಶ್ವರ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ರಾಜ್ಯ ಹಡಪದ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್., ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ, ಶಹಾಬಾದ ತಾಲೂಕಾಧ್ಯಕ್ಷ ಸಿದ್ರಾಮ ಹಡಪದ ಯಾಗಾಪುರ, ಪ್ರಧಾನ ಕಾರ್ಯದರ್ಶಿ ಶಿವಲಿಂಗ ಶಹಾಬಾದ, ಜೇವರ್ಗಿ ತಾಲೂಕಾಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಹಾಗೂ ಭಕ್ತರು ಭಾಗವಹಿಸಿದ್ದರು.

ಸಮಾಜದ ಹಿರಿಯರಾದ ಶಿವಶರಣಪ್ಪ ಹಡಪದ ಹಾಗರಗಿ, ಶಿವಶರಣಪ್ಪ ಹಡಪದ ಯಳವಂತಗಿ, ನಾಗಣ್ಣ ಮುತ್ತಕೋಡ, ದೂಳಪ್ಪ ಹಡಪದ ಹಳೇ ಶಹಾಬಾದ, ಸೋಮಣ್ಣ ಹಡಪದ ನರಿಬೋಳ, ಬಸಣ್ಣ ಹಡಪದ ಹಳೇ ಶಹಾಬಾದ, ಭೀಮಾಶಂಕರ ಹಡಪದ ಶಹಾಬಾದ, ಭಾಗಣ್ಣ ಹಡಪದ ದಂಡಗುಂಡ, ಮಹಾದೇವ ಹಡಪದ ರಾವೂರ, ಬಸವರಾಜ ಹಡಪದ ನಂದೆಳ್ಳಿ, ನಾಗರಾಜ ಹಡಪದ ಸಾತನೂರ, ರೇವಣಸಿದ್ದ ಕೋರವಾರ, ಸುನೀಲ್ ಕುಮಾರ್ ಹಡಪದ ಬಾಗಹಿಪ್ಪರರ್ಗಾ, ಶಿವಾಜಿ ಹಡಪದ ಶಹಾಬಾದ, ತೋಟೇಂದ್ರ ಹಡಪದ, ಭಾಗಣ್ಣ ಹಡಪದ ಮುತ್ತಕೋಡ, ಮಹೇಶ್ ಹಡಪದ ನಡುವಿನಹಳ್ಳಿ, ಪ್ರಸಾದ ಹಡಪದ, ಶ್ರೀಮಂತ ಹಡಪದ ಅವನೂರ, ರಮೇಶ್ ಹಡಪದ ಕುಕ್ಕುಂದಾ,ಶಂಕರ ಹರವಾಳ. ಮೌನೇಶ  ಕೂಡ್ಲಿ, ಶ್ರೀನಿವಾಸ್ ನೇದಲಗಿ, ಕಲ್ಯಾಣಿ ಪೂಜಾರಿ, ವೆಂಕಟೇಶ ಸುರಪುರ, ಸಿದ್ರಾಮಪ್ಪ ಅಕ್ಕಲಕೋಟೆ, ನಾಗು ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಬೆಳಿಗ್ಗೆ ಪೂಜ್ಯರ ಸಮ್ಮುಖದಲ್ಲಿ ಮತ್ತೊಮ್ಮೆ ಹಡಪದ ಅಪ್ಪಣ್ಣನವರ ಮೂರ್ತಿಗೆ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು. ಬಳಿಕ 500ಕ್ಕೂ ಹೆಚ್ಚು ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಭಕ್ತರು ಪ್ರಸಾದ ಸ್ವೀಕರಿಸಿದರು.   ‌    ‌  

  ‌ 
ಈ ಕುರಿತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಕನ್ನಡ ಮಾಧ್ಯಮ ಪತ್ರಿಕೆಗಳಿಗೆ ಮಾಹಿತಿ ನೀಡಿದರು.

Author

ಪ್ರಮುಖ ಸುದ್ದಿ

Stock market

Astrology