ಕೊಪ್ಪಳ.23.ಸೆಪ್ಟೆಂಬರ್.26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ಜಿಲ್ಲಾ ಮಟ್ಟದ ತೀವ್ರಗೊಳಿಸಲಾದ ಐಇಸಿ ಅಭಿಯಾನದ ಅಂಗವಾಗಿ (Intensified IEC Campaign) ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9.30 ಗಂಟೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
2 ತಿಂಗಳ Intensified IEC Campaign ಗೆ ರಾಜ್ಯಾದ್ಯಂತ ಆಗಸ್ಟ್ 12, 2026 “ಅಂತರಾಷ್ಟಿçÃಯ ಯುವ ದಿನಾಚರಣೆ“ ರಂದು ಚಾಲನೆ ನೀಡಿದ್ದು, ಈ ಮೂಲಕ ವಿವಿಧ ಮಾಧ್ಯಮಗಳ ಮೂಲಕ ಜನರಲ್ಲಿ ಹೆಚ್.ಐ.ವಿ./ಏಡ್ಸ್ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಅಭಿಯಾನದ ಅಂಗವಾಗಿ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿಗಳು, ಡ್ಯಾಪ್ಕೂö್ಯ, ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಸೇರಿ ಹೆಚ್.ಐ.ವಿ./ಏಡ್ಸ್ ಹಾಗೂ ಎಸ್.ಟಿ.ಐ. ಬಗ್ಗೆ ಅರಿವು ಮೂಡಿಸಲು ಪ್ಲೇ ಕಾರ್ಡ್ಸ್, ಬ್ಯಾನರ್ಗಳ ಸಮೇತ ಬೈಕ್ ರ್ಯಾಲಿಯನ್ನು ಸೆ.29 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯದಿಂದ ಆರಂಭಿಸಿ ಬಸ್ ನಿಲ್ದಾಣ, ಲೇಬರ್ ಸರ್ಕಲ್, ಟೌನ್ ಪೊಲೀಸ್ ಸ್ಟೇಷನ್, ಗಡಿಯಾರ ಕಂಬ, ಗವಿಮಠ, ಗಂಜ್ ಸರ್ಕಲ್, ಅಶೋಕ ಸರ್ಕಲ್, ಮೂಲಕ ಪುನಃ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ತಲುಪುವ ಮುಖಾಂತರ ಅಂತ್ಯಗೊಳಿಸಲಾಗುವುದು.
ಬೈಕ್ ರ್ಯಾಲಿಯಲ್ಲಿ ಭಾಗವಹಿಸುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಚಾಲ್ತಿಯಲ್ಲಿರುವ ವಾಹನ ಪರವಾನಗಿ ಹೊಂದಿರಬೇಕು. ಸಂಚಾರಿ ವಾಹನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಯಾವುದೇ ನಿಯಮ ಉಲ್ಲಂಘನೆಯಾದಲ್ಲಿ ತಾವೇ ನೇರ ಜವಬ್ದಾರರಾಗಿರುತ್ತೀರಿ. ಇಂಧನ ಅಥವಾ ಇತರೆ ಯಾವುದೇ ವೆಚ್ಚವನ್ನು ಈ ಕಛೇರಿಯಿಂದ ಭರಿಸಲಾಗುವುದಿಲ್ಲ. ರ್ಯಾಲಿಯಲ್ಲಿ ಭಾಗವಹಿಸುವಿಕೆಯು ಸಂಪೂರ್ಣವಾಗಿ ಸ್ವ-ಇಚ್ಚೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆಗಿರುತ್ತದೆ.
ಆದ್ದರಿಂದ ಬೈಕ್ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಾಲತೇಶ್ ಎಂ ಸಜ್ಜನರ್, ಜಿಲ್ಲಾ ಮೇಲ್ವಿಚಾರಕರು, ಕೊಪ್ಪಳ-9449846981, ಕೃಷ್ಣ ಸಾಲ್ಮನಿ, ಆಪ್ತಸಮಾಲೋಚಕರು, ಜಿ.ಆ.ಕೊಪ್ಪಳ – 9035112509, ಶಿವಾನಂದ, ಆಪ್ತಸಮಾಲೋಚಕರು, ಉಪವಿಭಾಗ ಆಸ್ಪತ್ರೆ, ಗಂಗಾವತಿ- 9380806166, ಹನುಮಂತಪ್ಪ, ಆಪ್ತಸಮಾಲೋಚಕರು, ಸ.ಆ.ಕೇಂದ್ರ.
ಕಾರಟಗಿ-9986435505, ಸಿದ್ದರಾಮಪ್ಪ, ಆಪ್ತಸಮಾಲೋಚಕರು, ಸ.ಆ.ಕೇಂದ್ರ. ಕನಕಗಿರಿ-9972038094, ಚನ್ನಬಸಪ್ಪ, ಆಪ್ತಸಮಾಲೋಚಕರು, ಸಾ.ಆ.ಕುಷ್ಟಗಿ- 7259571355, ಅಮರೇಶ, ಆಪ್ತಸಮಾಲೋಚಕರು, ಸ.ಆ.ಕೇಂದ್ರ. ಮಂಗಳೂರು-9591355153 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Any questions related to ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಸೆ.29 ರಂದು ಬೈಕ್ ರ್ಯಾಲಿ?