ಕೊಪ್ಪಳ.23.ಸೆಪ್ಟೆಂಬರ್26: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2026-27ನೇ ಸಾಲಿನಲ್ಲಿ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘ(ರಿ) ಕುಷ್ಟಗಿ ಕಲಾತಂಡದ ಮೂಲಕ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 02ರವರೆಗೆ ಕೊಪ್ಪಳ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಾನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಸೆ. 23ರಂದು ಬೆಳಿಗ್ಗೆ ಬಹದ್ದೂರಬಂಡಿ ಹಾಗೂ ಸಂಜೆ ಕುಣಿಕೇರಿ ಗ್ರಾಮದಲ್ಲಿ, ಸೆ. 24ರಂದು ಬೆಳಿಗ್ಗೆ ಹಿರೇಬಗನಾಳ ಹಾಗೂ ಸಂಜೆ ಹೊಸಳ್ಳಿಯಲ್ಲಿ, ಸೆ. 25ರಂದು ಬೆಳಿಗ್ಗೆ ಹುಲಿಗಿ ಹಾಗೂ ಸಂಜೆ ಶಿವಪುರದಲ್ಲಿ, ಸೆ. 26ರಂದು ಬೆಳಿಗ್ಗೆ ಬಂಡಿಹರ್ಲಾಪುರ ಹಾಗೂ ಸಂಜೆ ಅಗಳಕೇರಾದಲ್ಲಿ, ಸೆ. 27ರಂದು ಬೆಳಿಗ್ಗೆ ಹಿಟ್ನಾಳ ಹಾಗೂ ಸಂಜೆ ಬೂದಗಂಪಾದಲ್ಲಿ ಸೆ. 28ರಂದು ಬೆಳಿಗ್ಗೆ ಇಂದರಗಿ ಹಾಗೂ ಸಂಜೆ ಗುಳದಳ್ಳಿಯಲ್ಲಿ, ಸೆ. 29ರಂದು ಮುಂಜಾನೆ ಕಲ್ತಾವರಗೇರಾ ಹಾಗೂ ಸಂಜೆ ಗಿಣಿಗೇರಾದಲ್ಲಿ, ಸೆ. 30ರಂದು ಬೆಳಿಗ್ಗೆ ಗೊಂಡಬಾಳ ಹಾಗೂ ಸಂಜೆ ಹಿರೇಸಿಂಧೋಗಿಯಲ್ಲಿ, ಅದೇ ರೀತಿ ಅಕ್ಟೋಬರ್ 01ರಂದು ಬೆಳಿಗ್ಗೆ ಕಾತರಕಿ-ಗುಡ್ಲಾನೂರು ಹಾಗೂ ಸಂಜೆ ಬೇಟಗೇರಿಯಲ್ಲಿ ಮತ್ತು ಅಕ್ಟೋಬರ್ 02ರ ಬೆಳಿಗ್ಗೆ ಮತ್ತೂರು ಹಾಗೂ ಸಂಜೆ ಬೋಚನಹಳ್ಳಿ ಗ್ರಾಮದಲ್ಲಿ ಜನಪದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಕಲಾವಿದರು ಆಯಾ ಗ್ರಾಮದ ಜನ ಸಂದಣಿ ಸ್ಥಳದಲ್ಲಿ ಸೇರಿ, ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನಪದ ಸಂಗೀತ ಕಾರ್ಯಕ್ರಮದ ಮೂಲಕ ಮಾಹಿತಿ ನೀಡುವರು. ಆಯಾ ಗ್ರಾಮಸ್ಥರು ಈ ಜನಪದ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಕೊಪ್ಪಳ: ಸೆ. 23 ರಿಂದ ವಿವಿಧ ಗ್ರಾಮಗಳಲ್ಲಿ ವಾರ್ತಾ ಇಲಾಖೆಯಿಂದ ಜಾನಪದ ಸಂಗೀತ ಕಾರ್ಯಕ್ರಮ.?