ಬೀದರ್ ಸೆ. 21 : ಕಲಬುರಗಿ ನಗರದ ಎಚ್.ಕೆ.ಇ. ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಎಂ.ಎಸ್.ಐ. ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಕೃಷ್ಣವೇಣಿ ಬಿ. ಪಾಟೀಲ್ ಅವರಿಗೆ ರಾಜಸ್ಥಾನದ ಅಲ್ವಾರ್ನ ಸನ್ರೈಸ್ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
“ಕೋಲೊನಿಯಲ್ ಐಂಡ್ ಪೋಸ್ಟ್ ಕೋಲೊನಿಯಲ್ ರೆಂಡಿಷನ್ಸ್ ಇನ್ ಚಿನುವಾ ಅಂಬೆ ನವೆಲ್ಸ್: ಎ ಸೆಲೆಕ್ಟ್ ಸ್ಟಡಿ” ವಿಷಯದ ಕುರಿತು ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ. ಹಿರಿಯ ಪ್ರಾಧ್ಯಾಪಕರಾದ ಡಾ. ಉಮಾಕಾಂತ ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು.
ಡಾಕ್ಟರೇಟ್ ಪದವಿ ಪಡೆಯಲು ಪ್ರೋತ್ಸಾಹ ಹಾಗೂ ಸಹಕಾರ ನೀಡಿದ ಎಚ್.ಕೆ.ಇ. ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೆ ಡಾ. ಕೃಷ್ಣವೇಣಿ ಬಿ. ಪಾಟೀಲ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.






Any questions related to ಕೃಷ್ಣವೇಣಿ ಬಿ. ಪಾಟೀಲ್ ಅವರಿಗೆ ಡಾಕ್ಟರೇಟ್?