ಬೀದರ.23.ಸೆಪ್ಟೆಂಬರ್.26: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2026ರ ಅಕ್ಟೋಬರ್ 1ರ ಅರ್ಹತಾ ದಿನಾಂಕಕ್ಕೆ ಸಂಬAಧಿಸಿದAತೆ ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರ ಭಾಗವಾಗಿ ಆಗಸ್ಟ್ 24, 2026 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ 21 ರವರೆಗೆ ಜಿಲ್ಲೆಯಾದ್ಯಂತ ಒಟ್ಟು 8,562 ಹೊಸ ಸೇರ್ಪಡೆ (ನಮೂನೆ-6), 67 ಹೆಸರು ತೆಗೆದುಹಾಕುವಿಕೆ (ನಮೂನೆ-7) ಹಾಗೂ 5,146 ತಿದ್ದುಪಡಿ/ಸ್ಥಳಾಂತರ (ನಮೂನೆ-8) ಅರ್ಜಿಗಳು ಸ್ವೀಕೃತವಾಗಿವೆ. ವಿಧಾನಸಭಾ ಕ್ಷೇತ್ರವಾರು ವಿವರ ನೋಡುವುದಾದರೆ, ಬಸವಕಲ್ಯಾಣ ಕ್ಷೇತ್ರದಲ್ಲಿ 1,221 (ನಮೂನೆ-6), ಹುಮ್ನಾಬಾದ್ನಲ್ಲಿ 1,480, ಬೀದರ್ (ದಕ್ಷಿಣ) ಕ್ಷೇತ್ರದಲ್ಲಿ 1,218, ಬೀದರ್ ಉತ್ತರ ಕ್ಷೇತ್ರದಲ್ಲಿ 1,977, ಭಾಲ್ಕಿಯಲ್ಲಿ 1,385 ಹಾಗೂ ಔರಾದ್ (ಬಿ) ಕ್ಷೇತ್ರದಲ್ಲಿ 1,281 ಹೊಸ ಸೇರ್ಪಡೆ ಅರ್ಜಿಗಳು ಬಂದಿವೆ.
ಕರಡು ಮತದಾರರ ಪಟ್ಟಿಯಲ್ಲಿ ವ್ಯತ್ಯಾಸಗಳಿರುವ ಹಾಗೂ ಮ್ಯಾಪಿಂಗ್ ಆಗದ ಮತದಾರರಿಗೆ ನೋಟೀಸ್ ನೀಡಲಾಗಿದ್ದು, ಒಟ್ಟು 32,672 ನೋಟೀಸ್ಗಳ ಪೈಕಿ 32,001 ನೋಟೀಸ್ಗಳನ್ನು ವಿತರಿಸಿ, ಈಗಾಗಲೇ 20,013 ವಿಚಾರಣೆಗಳನ್ನು ನಡೆಸಲಾಗಿದೆ. ಪಟ್ಟಿಯಲ್ಲಿ ಇನ್ನು ಹೆಸರು ಸೇರ್ಪಡೆಯಾಗದ ಅರ್ಹ ಮತದಾರರು ಸೆಪ್ಟೆಂಬರ್ 23, 2026 ರೊಳಗಾಗಿ ನಿಯಮಿತ ನಮೂನೆ-6 ಮತ್ತು ಸ್ವಯಂ ಘೋಷಣಾಪತ್ರವನ್ನು ದಾಖಲೆಗಳೊಂದಿಗೆ ಸಲ್ಲಿಸಲು ಅಥವಾ ಆನ್ಲೈನ್ ಪೋರ್ಟಲ್ voters.eci.gov.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತವಾದ ಅರ್ಜಿಗಳನ್ನು ಅಕ್ಟೋಬರ್ 22 ರೊಳಗಾಗಿ ವಿಲೇವಾರಿ ಮಾಡಿ, ಅಕ್ಟೋಬರ್ 27, 2026 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಬೀದರ್ನಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ: ಅಕ್ಟೋಬರ್ 27ಕ್ಕೆ ಅಂತಿಮ ಪಟ್ಟಿ ಪ್ರಕಟ?