20 ವರ್ಷಗಳ ಸೇವೆಗೂ ಬೆಲೆ ಇಲ್ಲವೇ? ಅತಿಥಿ ಉಪನ್ಯಾಸಕರ ಅಳಲು — ಸೇವಾ ಭದ್ರತೆಗೆ ಸರ್ಕಾರಕ್ಕೆ ಆಗ್ರಹ10, 15, 20 ವರ್ಷಗಳಿಂದ ಜ್ಞಾನಧಾರೆ ಹರಿಸಿದ ಶಿಕ್ಷಕರ ಬದುಕಿಗೆ ಭದ್ರತೆ ಕಲ್ಪಿಸಿ: ಅತಿಥಿ ಉಪನ್ಯಾಸಕರ ಒತ್ತಾಯ
ಬೆಂಗಳೂರು.05.ಸೆಪ್ಟೆಂಬರ್.26: ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ 20 ವರ್ಷಗಳ ಕಾಲ ಸೇವೆ ಮಾಡಿ ಇಂದು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ, ಇನ್ಮುಂದೆ ದೋಧ್ ಸಮಸ್ಯೆ ಅಂದ್ರೆ ನಮ್ಮ ಜೋತೆ ನಮ್ಮ ಮಕ್ಕಳ ಭವಿಷ್ಯ ಏನು ಆಗಬಹುದು ? ನಮಗೆ ನಮ್ಮದೇ ಭವಿಷ್ಯ ಯಾವಾಗ” — ಇದು ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 10, 15 ಹಾಗೂ 20 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಬಹಳಷ್ಟು ಜನ ಸೇವಾ ನಿವೃತ್ತಿ ಆಗುತ್ತಿದ್ದಾರೆ ಆದರೆ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಿದೆ.
ಎರಡು ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗದ ಭದ್ರತೆ ಇಲ್ಲದೆ ಅನಿಶ್ಚಿತತೆಯಲ್ಲಿ ಬದುಕುವಂತಾಗಿದೆ. ಅನುಭವ, ಶೈಕ್ಷಣಿಕ ಅರ್ಹತೆ ಹಾಗೂ ಸುದೀರ್ಘ ಸೇವೆಯನ್ನು ಪರಿಗಣಿಸಿ ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಂಡು ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು ಎಂದು ಕರ್ನಾಟಕ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಲ್ಯಾಣ ಮಂಡಳಿ ಒತ್ತಾಯಿಸಿದೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಪದಾಧಿಕಾರಿಗಳು, 10, 15 ಮತ್ತು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ವಿಶೇಷ ನೇಮಕಾತಿ ಅಥವಾ ಸೂಕ್ತ ಸರ್ಕಾರಿ ಕ್ರಮದ ಮೂಲಕ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ದಶಕಗಳ ಸೇವೆ… ಇನ್ನೂ ‘ಅತಿಥಿ’ಯೇ!
ರಾಜ್ಯದ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಹಲವರು ತಮ್ಮ ವೃತ್ತಿಜೀವನದ ಬಹುಪಾಲು ಅವಧಿಯನ್ನು ಇದೇ ಸೇವೆಗೆ ಮೀಸಲಿಟ್ಟಿದ್ದಾರೆ. ಆದರೆ ಇಷ್ಟೊಂದು ಸುದೀರ್ಘ ಸೇವೆಯ ನಂತರವೂ ಉದ್ಯೋಗ ಮುಂದುವರಿಯುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಶಿಕ್ಷಕರ ಭವಿಷ್ಯವೇ ಅತಂತ್ರವಾಗಬಾರದು. ವರ್ಷಗಳ ಸೇವೆಗೆ ಸರ್ಕಾರ ನ್ಯಾಯ ಒದಗಿಸಬೇಕು” ಎಂದು ಮಂಡಳಿ ಮನವಿ ಮಾಡಿದೆ.
ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳು
10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸೇವೆ ಸಲ್ಲಿಸಿರುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು.
15 ಹಾಗೂ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಅವರ ಅನುಭವಕ್ಕೆ ಸೂಕ್ತ ಮಾನ್ಯತೆ ನೀಡಬೇಕು.
ಅರ್ಹ ಅತಿಥಿ ಉಪನ್ಯಾಸಕರ ಸೇವೆಯನ್ನು ಸಕ್ರಮಗೊಳಿಸುವ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ವೇತನವನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಸಕಾಲದಲ್ಲಿ ಪಾವತಿ ಮಾಡಬೇಕು.
ಮಹಿಳಾ ಅತಿಥಿ ಉಪನ್ಯಾಸಕರಿಗೆ ಪ್ರಸೂತಿ ರಜೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು.
ಅತಿಥಿ ಉಪನ್ಯಾಸಕರ ಮಕ್ಕಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕು.
ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರಿಗೆ ಏಕರೂಪದ ವೇತನ ಮತ್ತು ಸೇವಾ ನಿಯಮ ಜಾರಿಗೆ ತರಬೇಕು.
“ಸೇವೆಗೆ ಗೌರವ, ಅನುಭವಕ್ಕೆ ಮಾನ್ಯತೆ, ಬದುಕಿಗೆ ಭದ್ರತೆ” ಎಂಬ ನ್ಯಾಯಯುತ ಬೇಡಿಕೆಯೊಂದಿಗೆ ಅತಿಥಿ ಉಪನ್ಯಾಸಕರು ಸರ್ಕಾರದತ್ತ ಎದುರು ನೋಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳಾದ ಡಾ. ಪೀಟರ್, ರಾಜ್ಯ ಕಾರ್ಯದರ್ಶಿಗಳಾದ ಶ್ರೀಧರ, ಪೂರ್ಣೆಶ್, ಶ್ರೀ ರಮೇಶ್ ರಾವ್ ಬಾರ್ಗೆ ಹಾಗೂ ಸೇರಿದಂತೆ ಪದಾಧಿಕಾರಿಗಳು ಹಾಗೂ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.





Any questions related to ಅತಿಥಿ ಉಪನ್ಯಾಸಕರ 20 ವರ್ಷಗಳ ಸೇವೆಗೂ ಬೆಲೆ ಇಲ್ಲವೇ ??