ಬೀದರ.27.ಜುಲೈ.26 : ಬೀದರ ಜಿಲ್ಲೆಯಲ್ಲಿ ಹವಾಮಾನ ಪರಿಸ್ಥಿತಿ ಪ್ರಸ್ತುತ ಹವಾಮಾನ ಪರಿಸ್ಥಿತಿಗಳಿಂದಾಗಿ ಬೇಗನೆ ಬಿತ್ತನೆ ಮಾಡಿದ ಬೆಳೆಗಳಲ್ಲಿ ಅಂತರ ಬೇಸಾಯ, ಕಳೆ ನಿಯಂತ್ರಣ ಮತ್ತು ಹೆಚ್ಚಾದ ಸಸಿಗಳನ್ನು ತೆಗೆದು ಹಾಕುವುದರಿಂದ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಬೇಕು ಎಂದು ಬೀದರ ಐಸಿಎಆರ್o ಕೃಷಿ ವಿಜ್ಞಾನಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ತಿಳಿಸಿದ್ದಾರೆ.
ಪೋಷಕಾಂಶ ನಿರ್ವಹಣೆ : ನೀರಿನಲ್ಲಿ ಕರಗುವ ಗೊಬ್ಬರವನ್ನು (19:19:19) @5 ಗ್ರಾಂ/ಲೀಟರ್ ನೀರಿಗೆ ಅನ್ವಯಿಸಿ, ಅಜೀವಕಒತ್ತಡದ ಪರಿಸ್ಥಿತಿಯನ್ನು ಪ್ರತಿರೋಧಿಸಲು ಸಹಾಯ ಮಾಡುತ್ತದೆ.
ತೇವಾಂಶರಕ್ಷಣೆ : ಬೆಳೆಗಳಲ್ಲಿ ಆಗಾಗ್ಗೆ ಅಂತರ ಬೇಸಾಯ ಮಾಡುವುದರಿಂದ ನೀರು ಆವಿಯಾಗುವಿಕೆಯನ್ನು ತಡೆಗಟ್ಟಬಹುದು.
ಮಳೆನೀರು ಕೊಯ್ಲು : ಮಳೆಯ ನೀರನ್ನುಆದಷ್ಟು ಮಳೆ ನೀರುಕೊಯ್ಲಿನ ಮುಖಾಂತರಅಥವಾ ಕೃಷಿ ಹೊಂಡಗಳಲ್ಲಿ ಶೇಖರಿಸಿಡುವುದರಿಂದ ಒಣ ಪರಿಸ್ಥಿತಿಯಲ್ಲಿ ಉಪಯೋಗಿಸಲು ಅನುಕೂಲವಾಗುವುದು.
ಸೋಯಾಬೀನ್ ಬೆಳೆ : ಸೋಯಾಬೀನ್ ಬೆಳೆಯಲ್ಲಿ ಎಲೆ ತರಚುವ ಹುಳು ಮತ್ತುಕಾಂಡದ ನೊಣದ ಬಾಧೆಕಂಡುಬAದಲ್ಲಿ, ನಿಯಂತ್ರಣಕ್ಕಾಗಿ ಕ್ಲೋರಾಂಟ್ರಾನಿಲಿಪ್ರೋಲ್ 18.5 SC (0.3ಮಿ.ಲೀ/ಲೀ) ಅಥವಾ ಇಂಡೋಕ್ಸಾಕಾರ್ಬ್ 14.5 SC (0.5 ಮಿ.ಲೀ/ಲೀ) ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಸರು ಮತ್ತು ಉದ್ದು ಬೆಳೆ : ಹೆಸರು ಮತ್ತುಉದ್ದು ಬೆಳೆಯಲ್ಲಿ ಹಳದಿ ನಂಜುರೋಗ (Yellow Mosaic) ಹರಡುವ ಬಿಳಿ ನೊಣದ ನಿಯಂತ್ರಣಕ್ಕೆಥೈಯಾಮೆಥೋಕ್ಸಮ್ 25 WG (0.2ಗ್ರಾಂ/ಲೀ) ಅಥವಾ ಇಮಿಡಾ ಕ್ಲೋಪ್ರಿಡ್ 17.8 SL (0.3ಮಿ.ಲೀ/ಲೀ) ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ತೊಗರಿ ಬೆಳೆ : ತೊಗರಿ ಬೆಳೆಯಲ್ಲಿ ಬಂಜರು ನಂಜುರೋಗದ (Sterility Mosaic) ನಿರ್ವಹಣೆಗೆರೋಗ ಹರಡುವ ನುಸಿ ಹುಳುವಿನ ನಿಯಂತ್ರಣಕ್ಕಾಗಿ ಪ್ರೊಪಾರ್ಗೈಟ್ 57% ಇಅ (2 ಮಿ.ಲೀ/ಲೀ) ಅಥವಾ ಫೆನ್ಪೈರಾಕ್ಸಿಮೇಟ್ (1 ಮಿ.ಲೀ/ಲೀ) ಸಿಂಪಡಿಸಬೇಕು.
ಮಾವಿನ ಬೆಳೆ (ಮಾಲ್ಫಾರ್ಮೇಷನ್ ನಿರ್ವಹಣೆ) : ರೋಗಪೀಡಿತ ಹೂವಿನ ಹಾಗೂ ಕುಡಿ ಗೊಂಚಲುಗಳನ್ನು 15 ರಿಂದ 20 ಸೆಂ.ಮೀ. ಆರೋಗ್ಯಕರ ಭಾಗದೊಂದಿಗೆ ಕತ್ತರಿಸಿ ಸುಟ್ಟುಹಾಕಬೇಕು.
ನಂತರರೋಗ ಹಾಗೂ ಮೊಗ್ಗು ನುಸಿ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿಕ್ಲೋರೈಡ್ (3ಗ್ರಾಂ/ಲೀ) ಮತ್ತು ಸ್ಪಿರೋಮೆಸಿಫೆನ್ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬೀದರ ಐಸಿಎಆರ್o ಕೃಷಿ ವಿಜ್ಞಾನಕೇಂದ್ರ, ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ದೂ.ಸಂ.9480696318, 9711330755ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಬೀದರ್: ಹವಾಮಾನ ಆಧಾರಿತ ಕೃಷಿ ಸಲಹೆ.?