Home » ಲೈವ್ ನ್ಯೂಸ್ » 253 ಸಿವಿಲ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃತ ಆದೇಶ!

253 ಸಿವಿಲ್ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃತ ಆದೇಶ!

Facebook
X
WhatsApp
Telegram

ಬೆಂಗಳೂರು.17.ಜುಲೈ.26: ಪೊಲೀಸ್ ಇಲಾಖೆಯಲ್ಲಿ ಒಟ್ಟು 600 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) civil ಹುದ್ದೆಗಳ ನೇಮಕಾತಿಗೆ ಸಂಬಂಧಿತ ಪ್ರಕ್ರಿಯ ಪ್ರಾರಂಭವಾಗಿದೆ ಸರ್ಕಾರ ಮೊದಲ ಹಂತದಲ್ಲಿ ಖಾಲಿ ಇರುವ 253 ಪಿಎಸ್‌ಐ (ಸಿವಿಲ್) civil ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (DG&IGP) ಅವರು ಆದೇಶಿದ್ದಾರೆ.

ಜುಲೈ 16, 2026 ರಂದು ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಚೇರಿಯಿಂದ ಇಲಾಖೆ ನೇಮಕಾತಿ ವಿಭಾಗಕೆ ಅಧಿಕೃತ ಪತ್ರ ಬಿಡುಗಡೆ ಮಾಡಿ, ನೇಮಕಾತಿ ಆದೇಶ 5ಹೊರಡಿಸಿದ್ದಾರೆ .

ಸರ್ಕಾರದ ಅನುಮತಿ ಮತ್ತು ವರ್ಗೀಕರಣ

ಸರ್ಕಾರವು ಒಟ್ಟು 600 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಸದ್ಯ ಲಭ್ಯವಿರುವ 253 ರಿಕ್ತ ಹುದ್ದೆಗಳಿಗೆ ವಿವಿಧ ವಲಯ ಹಾಗೂ ಕಮಿಷನರೇಟ್‌ಗಳಿಂದ ವರ್ಗೀಕರಣವನ್ನು ಪಡೆದು ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಒಟ್ಟು 253 ಹುದ್ದೆಗಳ ಪೈಕಿ ಕಲ್ಯಾಣ ಕರ್ನಾಟಕ (KK) ಭಾಗಕ್ಕೆ 65 ಹುದ್ದೆಗಳು ಹಾಗೂ ಉಳಿದ ಒಳನಾಡು (NKK) ಭಾಗಕ್ಕೆ 180 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಸ್ಪೋರ್ಟ್ಸ್ ಕೋಟಾದಡಿ 8 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ? (ವಲಯವಾರು ವಿವರ)

ನೇಮಕಾತಿ ಆದೇಶದ ಅನ್ವಯ ಬಿಡುಗಡೆ ಮಾಡಲಾಗಿರುವ ವಲಯ ಮತ್ತು ಕಮಿಷನರೇಟ್‌ವಾರು ಹುದ್ದೆಗಳ ಹಂಚಿಕೆ ಪಟ್ಟಿ ಈ ಕೆಳಗಿನಂತಿದೆ:

ಪೊಲೀಸ್ ಕಮಿಷನರ್ ಬೆಂಗಳೂರು ನಗರ: 108 ಹುದ್ದೆಗಳು (KK-22, NKK-81, ಕ್ರೀಡೆ-5)

ಪೊಲೀಸ್ ಕಮಿಷನರ್ ಮೈಸೂರು ನಗರ: 7 ಹುದ್ದೆಗಳು (NKK-7)

ಪೊಲೀಸ್ ಕಮಿಷನರ್ ಮಂಗಳೂರು ನಗರ: 6 ಹುದ್ದೆಗಳು (NKK-6)

ಪೊಲೀಸ್ ಕಮಿಷನರ್ ಕಲಬುರಗಿ ನಗರ: 3 ಹುದ್ದೆಗಳು (KK-3)

ಕೇಂದ್ರ ವಲಯ, ಬೆಂಗಳೂರು: 17 ಹುದ್ದೆಗಳು (NKK-17)

ದಕ್ಷಿಣ ವಲಯ, ಮೈಸೂರು: 10 ಹುದ್ದೆಗಳು (NKK-10)

ಪೂರ್ವ ವಲಯ, ದಾವಣಗೆರೆ: 44 ಹುದ್ದೆಗಳು (NKK-42, ಕ್ರೀಡೆ-2)

ಪಶ್ಚಿಮ ವಲಯ, ಮಂಗಳೂರು: 8 ಹುದ್ದೆಗಳು (NKK-8)

ಈಶಾನ್ಯ ವಲಯ, ಗುಲ್ಬರ್ಗಾ: 8 ಹುದ್ದೆಗಳು (KK-7, NKK-1)

ಬಳ್ಳಾರಿ ವಲಯ: 29 ಹುದ್ದೆಗಳು (KK-28, ಕ್ರೀಡೆ-1)

ರೈಲ್ವೇಸ್: 13 ಹುದ್ದೆಗಳು (KK-5, NKK-8) (ಗಮನಿಸಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನಗರ ಮತ್ತು ಉತ್ತರ ವಲಯ ಬೆಳಗಾವಿಗಳಲ್ಲಿ ಪ್ರಸ್ತುತ ಯಾವುದೇ ಹುದ್ದೆಗಳು ಖಾಲಿ ಇರುವುದಿಲ್ಲ)

ಶೀಘ್ರದಲ್ಲೇ ಅಧಿಕೃತ ಅಧಿಸೂಚನೆ

ಇಲಾಖೆಯು ಆಯಾ ಘಟಕಗಳಿಗೆ ಹಂಚಿಕೆ ಮಾಡಲಾಗಿರುವ ಹುದ್ದೆಗಳ ನಿಯಮಾನುಸಾರ ವರ್ಗೀಕರಣದ ವಿವರಗಳನ್ನು ಒದಗಿಸುವಂತೆ ಈಗಾಗಲೇ ವಲಯಾಧಿಕಾರಿಗಳಿಗೆ ಸೂಚಿಸಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣವೇ ಅಧಿಕೃತ ಆನ್‌ಲೈನ್ ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಅರ್ಹತೆಗಳನ್ನೊಳಗೊಂಡ ಪೂರ್ಣ ಪ್ರಮಾಣದ ಅಧಿಸೂಚನೆ ಪ್ರಕಟವಾಗಲಿದೆ.

ಬಹಳ ದಿನಗಳಿಂದ ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಎದುರು ನೋಡುತ್ತಿದ್ದ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ತಾಲೀಮು ಆರಂಭಿಸಲು ಪ್ರಶಸ್ತ ಸಮಯವಾಗಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology