Home » ಲೈವ್ ನ್ಯೂಸ್ » ರಾಜ್ಯದಲ್ಲಿ 579 ಮದ್ಯದ ಅಂಗಡಿಗಳ ಪರವಾನಗಿ ಅಬಕಾರಿ ಇಲಾಖೆ ಅಧಿಸೂಚನೆ

ರಾಜ್ಯದಲ್ಲಿ 579 ಮದ್ಯದ ಅಂಗಡಿಗಳ ಪರವಾನಗಿ ಅಬಕಾರಿ ಇಲಾಖೆ ಅಧಿಸೂಚನೆ

ಬೆಂಗಳೂರು.17.ಜುಲೈ.26:ರಾಜ್ಯ ಸರ್ಕಾರ ಅಬಕಾರಿ ಆದಾಯ ಹೆಚ್ಚಿಸಲು  ಹೊಸ ಯೋಜನೆ. ಲೈಸೆನ್ಸ್ ಹರಾಜು ಮಾಡಲು ಮುಂದಾಗಿದೆ. ರಾಜ್ಯದಲ್ಲಿ 579 ಮದ್ಯದ ಅಂಗಡಿಗಳ ಅಬಕಾರಿ ಪರವಾನಗಿ (ಲೈಸೆನ್ಸ್‌) ಗಳನ್ನು ಹರಾಜು ಹಾಕಲು ಕರ್ನಾಟಕ ಆರ್ಥಿಕ ಇಲಾಖೆಯು ನಿರ್ಧರಿಸಿದ್ದು, ಲೈವ್ ಬಿಡ್ಡಿಂಗ್ ಕೂಡ ನಡೆಯಲಿದೆ.

ರಾಜ್ಯಾದ್ಯಂತ ಅಂಗಡಿ ಲೈಸೆನ್ಸ್ ಹರಾಜು, ಲೈವ್ ಬಿಡ್ಡಿಂಗ್

ಮದ್ಯದ ಅಂಗಡಿ ಪರವಾನಗಿಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕಲಾಗುವುದು. ಅತಿ ಹೆಚ್ಚು ಬಿಡ್ ಮಾಡಿದವರಿಗೆ ಪರವಾನಗಿ ನೀಡಲಾಗುವುದು ಎಂದು ಕರಡು ನಿಯಮದಲ್ಲಿದ್ದು, ಜುಲೈ 24 ರಿಂದ 31 ರವರೆಗೆ ಲೈವ್ ಬಿಡ್ಡಿಂಗ್ ನಡೆಯಲಿದೆ. 5 ವರ್ಷಗಳ ಅವಧಿಗೆ ಲೈಸೆನ್ಸ್ ಹಂಚಿಕೆ ಮಾಡಲಾಗುತ್ತೆ.

SC-ST ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿಯೊಂದಿಗೆ ಇ-ಹರಾಜು ಪ್ರಕ್ರಿಯೆ

ಜುಲೈ 24ರಿಂದ ಜುಲೈ 31ರವರೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

483 CL-2A, 96 CL-9A ಲೈಸೆನ್ಸ್ ಹರಾಜಿಗೆ ಸರ್ಕಾರ ಮುಂದಾಗಿದ್ದು. ಬೆಂಗಳೂರು ನಗರದಲ್ಲೇ ಅತಿ ಹೆಚ್ಚು 186 ಸನ್ನದುಗಳಿವೆ. ಜುಲೈ 3 ರಿಂದಲೇ ಬಿಡ್ದಾರರ ನೋಂದಣಿ ಆರಂಭವಾಗಲಿದೆ. ₹1,000 ನೋಂದಣಿ ಶುಲ್ಕ, ₹50 ಸಾವಿರ ಅರ್ಜಿ ಶುಲ್ಕ ಇರಲಿದೆ. SC-ST ಮೀಸಲಾತಿಯೊಂದಿಗೆ ಇ-ಹರಾಜು ಪ್ರಕ್ರಿಯೆ ನಡೆಯಲಿದೆ.

ಒಂದಕ್ಕಿಂತ ಹೆಚ್ಚು ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ಅಬಕಾರಿ ಇಲಾಖೆ ಅಧಿಸೂಚನೆ ಪ್ರಕಟವಾಗಲಿದೆ.

ಕರ್ನಾಟಕದಲ್ಲಿ ಮದ್ಯದಂಗಡಿ ಅಥವಾ ಬಾರ್ ತೆರೆಯಲು ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಿಂದ (Karnataka Excise Department) ಪರವಾನಗಿ ಪಡೆಯಬೇಕಿದೆ. ಮದುವೆ ಮತ್ತು ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಒಂದು ದಿನದ ಮದ್ಯ ಸನ್ನದು (CL-5) ಪಡೆಯಲು ₹11,500 ಶುಲ್ಕವಿದೆ. ಕಾಯಂ ಬಾರ್/ವೈನ್ ಶಾಪ್‌ಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಕರ್ನಾಟಕದಲ್ಲಿ ಲಭ್ಯವಿರುವ ಕೆಲವು ಪ್ರಮುಖ ಲೈಸೆನ್ಸ್ ವಿಧಗಳು ಮತ್ತು ವಿವರಗಳು:

CL-2: ಭಾರತೀಯ ಮದ್ಯ ಮತ್ತು ವಿದೇಶಿ ಮದ್ಯ ಚಿಲ್ಲರೆ ಮಾರಾಟದ ಮಳಿಗೆಗಳು (MRP).

CL-7: ಹೋಟೆಲ್ ಮತ್ತು ಬೋರ್ಡಿಂಗ್ ಹೌಸ್.

CL-9: ಬಾರ್ ಮತ್ತು ರೆಸ್ಟೋರೆಂಟ್

ಅಧಿಕೃತ ಮಾಹಿತಿ ಮತ್ತು ಅರ್ಜಿ ಸಲ್ಲಿಕೆಗಾಗಿ ನೀವು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ವೆಬ್‌ಸೈಟ್‌ ಅನ್ನು ಪರಿಶೀಲಿಸಬಹುದು.

ಇನ್ನು ಭಾರತ ಹಾಗೂ ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಮತ್ತಷ್ಟು ಬೆಲೆ ರಿಯಾಯಿತಿ ಮದ್ಯ ದೊರೆಯುವ ನಿರೀಕ್ಷೆ ಮೂಡಿದೆ.

Author

ಪ್ರಮುಖ ಸುದ್ದಿ

Stock market

Astrology