Home » ಲೈವ್ ನ್ಯೂಸ್ » ಜವಾಹರ್ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಜವಾಹರ್ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ,.09.ಜುಲೈ .26:- ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ 2026- 27ನೇ ಸಾಲಿನ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ನಾಗರಾಜನ್ ತಿಳಿಸಿದ್ದಾರೆ.


ಬೀದರ ಜಿಲ್ಲೆಯ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯಲ್ಲಿಯೇ ಐದನೇ ತರಗತಿ ಓದುತ್ತಿರುವವರು. 2015ರ ಮೇ 01 ರಿಂದ 2017ರ ಜುಲೈ 31ರ ಮದ್ಯದಲ್ಲಿ ಜನಿಸಿದವರಾಗಿರಬೇಕು.
3, 4 ಮತ್ತು 5ನೇ ತರಗತಿಯ ಪೂರ್ಣ ಶೈಕ್ಷಣಿಕ ವರ್ಷ ಅಧ್ಯಯನ ಮಾಡಿರಬೇಕು. ಅರ್ಜಿಗಳು ಆನ್ ಲೈನ್ ನಲ್ಲಿ ಈಗಾಗಲೇ ಸಲ್ಲಿಸುವ ಪ್ರಕ್ರಿಯೆ ಆರಂಭಗೊoಡಿದೆ.

2026ರ ಜುಲೈ 31ರ ಒಳಗೆ ಅರ್ಜಿಸಲ್ಲಿಸಬೇಕು. ಪ್ರವೇಶ ಪರೀಕ್ಷೆಯು 2026ರ ನವೆಂಬರ್ 28 ರಂದು ನಡೆಸಲು ನಿರ್ಧರಿಸಲಾಗಿದೆ. ಬೀದರ ಜಿಲ್ಲೆಯ ನಿವಾಸಿಗಳಾಗಿರುವ 5ನೇ ತರಗತಿ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆದುಕೊಂಡು, ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬೇಕು. ಅರ್ಜಿಯು ವೆಬ್ ಸೈಟ್  navodaya.gov.in ನಲ್ಲಿ ಕ್ಲಿಕ್ ಮಾಡಿದರೆ ಪೋರ್ಟಲ್ ಓಪನ್ ಆಗುತ್ತದೆ, ಕೇಳಿರುವ ಮಾಹಿತಿಯನ್ನು ಸರಿಯಾಗಿ ತುಂಬಿ ಅರ್ಜಿಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology