ರಾಯಚೂರು.09.ಜುಲೈ.26: ರಾಯಚೂರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್.ಬಿ.ಎಸ್ ನಗರದ ನಿವಾಸಿಯಾದ ಎನ್.ನಾಗೇಂದ್ರ ತಂದೆ ಭೀಮಾರಾವ್ (50) ಎಂಬ ವ್ಯಕ್ತಿಯು ಜೂನ್ 13ರ ಬೆಳಿಗ್ಗೆ 9.30ಕ್ಕೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಗುನ್ನ ಸಂಖ್ಯೆ: 64/2026ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಮನುಷ್ಯನ ಚಹರೆ: ಜಾತಿ ಮರಾಠ, ಉದ್ಯೋಗ ಇನ್ಸೂರೆನ್ಸ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದು,
ಕಪ್ಪು ಮೈಬಣ್ಣ, ಸಾದರಣ ಮೈಕಟ್ಟು, ದಪ್ಪನೆಯ ಮೂಗು, ಆತನು ಕನ್ನಡ ಮತ್ತು ತೆಲುಗು ಹಾಗೂ ಹಿಂದಿ, ಮರಾಠಿ ಭಾಷೆಗಳನ್ನು ಮಾತನಾಡುತ್ತಾನೆ.
ಮನೆಯಿಂದ ಹೋಗುವಾಗ ಹಳದಿ ಬಣ್ಣದ ಶರ್ಟ್, ನೀಲಿ ಬಣ್ಣದ ಲುಂಗಿ ಧರಿಸಿದ್ದು, ಈ ಚಹರೆ ಪಟ್ಟಿಯ ವ್ಯಕ್ತಿ ಪತ್ತೆಯಾದಲ್ಲಿ ಮಾರ್ಕೆಟ್ ಯಾರ್ಡ ಠಾಣೆ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803849 ಅಥವಾ ಠಾಣೆ ದೂರವಾಣಿ ಸಂಖ್ಯೆ: 08532-235600ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿಸದ್ದಾರೆ.






Any questions related to ಎಲ್.ಬಿ.ಎಸ್ ನಿವಾಸಿ ಎನ್.ನಾಗೇಂದ್ರ ಕಾಣೆ: ಪತ್ತೆಗೆ ಪೊಲೀಸರ ಮನವಿ?