ಕೊಪ್ಪಳ.03.=ಜುಲೈ 26: ಕೊಪ್ಪಳದ ಮುಚುಗೇರ ಓಣಿಯ ನಿವಾಸಿ ನಾಗರಾಜ ತಂದೆ ಪರುಶರಾಮ ಕಳ್ಳಿಮನಿ ಎಂಬ 15 ವರ್ಷದ ಬಾಲಕನು ಕಾಣೆಯಾಗಿದ್ದು, ಪತ್ತೆಗಾಗಿ ಸಹಕರಿಸುವಂತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ನಾಗರಾಜ ತಂದೆ ಪರುಶರಾಮ ಕಳ್ಳಿಮನಿ ಎಂಬ ಬಾಲಕನು 2026ರ ಜೂನ್ 8ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಶಾಲೆಗೆ ಹೋಗುತ್ತೆನೆ ಎಂದು ಹೋದವನು ವಾಪಸ್ ಬರದೆ ಇರುವುದರಿಂದ ಬಾಲಕನ ತಂದೆಯು ತನ್ನ ಮಗನ ಕ್ಲಾಸಮೆಂಟ್ ಹಾಗೂ ಬಾಲಕನು ಒದುತ್ತಿರುವ ಶಾಲೆಯ ಮುಖ್ಯೋಪಾಧ್ಯಯರನ್ನು ಕೆಳಿದಾಗ ಬಾಲಕನು ಶಾಲೆಗೆ ಬಂದಿರುವದಿಲ್ಲ ಎಂಬ ವಿಷಯ ತಿಳಿದಿರುತ್ತದೆ. ನಂತರದಲ್ಲಿ ತಮ್ಮ ಸಂಬoಧಿಕರಲ್ಲಿ ಹಾಗೂ ಗವಿಮಠ, ಮಳೆಮಲ್ಲೇಶ್ವರ ಬೆಟ್ಟ, ತಾಲೂಕು ಮೈದಾನ ಮತ್ತು ಇತರೇ ಕಡೆ ಹುಡುಕಾಡಿದರು ಸಿಗದೆ ಇರುವ ಕಾರಣ ತನ್ನ ಮಗನನ್ನು ಯಾರೊ ಅಪಹರಣ ಮಾಡಿರಬಹುದು ಎಂದು ಅನುಮಾನಿಸಿ, ನನ್ನ ಮಗನನ್ನು ಹುಡುಕಿ ಕೊಡಿ ಎಂದು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣಾ ಗುನ್ನೆ ನಂ.55/2025 ಕಲಂ: 137(2) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಬಾಲಕನ ಚಹರೆ ಪಟ್ಟಿ: ನಾಗರಾಜ ತಂದೆ ಪರುಶರಾಮ ಕಳ್ಳಿಮನಿ, ವಯಸ್ಸು 15 ವರ್ಷ, ಎತ್ತರ 3.5 ಅಡಿ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು ಬಾಲಕನು ಮನೆಯಿಂದ ಹೊರಡುವಾಗ ಚೆಕ್ಸ್ ಬದಾಮಿ ಬಣ್ಣದ ಶರ್ಟ, ಬದಾಮಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಬಾಲಕನು ಯಾರಿಗಾದರೂ ಕಂಡುಬಂದಲ್ಲಿ ಅಥವಾ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539-221233, ಮಹಿಳಾ ಠಾಣೆಯ ಪಿ.ಐ ನಂ.8088400542, ಅಥವಾ ತನಿಖಾಧಿಕಾರಿಗಳಾದ ಲಿಂಗರಾಜ ಸಿ.ಹೆಚ್.ಸಿ ಮೊ.ನಂ: 9880289369 ಹಾಗೂ ಕೊಪ್ಪಳ ಪೊಲೀಸ್ ಕಂಟ್ರೋಲ್ ರೊಂ ದೂರವಾಣಿ ಸಂಖ್ಯೆ 9480803700 ಗೆ ಸಂಪರ್ಕಿಸುವAತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಬಾಲಕ ಕಾಣೆ: ಪತ್ತೆಗೆ ಸಹಕರಿಸಲು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮನವಿ?