ಕೊಪ್ಪಳ.08.ಜುಲೈ .26: ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಅನಾಮಧೇಯ ವ್ಯಕ್ತಿಯು ಮೃತಪಟ್ಟಿದ್ದು, ಮೃತನ ವಾರಸುದಾರರ ಪತ್ತೆಗೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜುಲೈ 3 ರಂದು ರಾತ್ರಿ ಸಮಯದಲ್ಲಿ ಸುಮಾರು 50 ರಿಂದ 60 ವಯಸ್ಸಿನ ಅನಾಮಧೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆಯುತ್ತಿದ್ದಾಗ ಜುಲೈ 6 ರಂದು ರಾತ್ರಿ 9 ಗಂಟೆಗೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿಯು ಮೃತಪಟ್ಟಿರುತ್ತಾರೆ. ಈ ಮೃತನ ಹೆಸರು ವಿಳಾಸ ಹಾಗೂ ಸಂಬಂಧಿಕರು ಯಾರು ಎಂಬುದು ಪತ್ತೆಯಾಗಿರುವುದಿಲ್ಲ.
ಮೃತನ ಚಹರೆ ಪಟ್ಟಿ: ಅನಾಮಧೇಯ ವ್ಯಕ್ತಿ ವಯಸ್ಸು 50 ರಿಂದ 60 ವರ್ಷ, ದುಂಡು ಮುಖ, ಗೋದಿ ಮೈಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು ಇದ್ದು, ಒಂದು ಬಳಿ ಲುಂಗಿ, ಬಿಳಿ ಶರ್ಟ್ ಧರಿಸಿರುತ್ತಾರೆ.
ಈ ಮೃತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರಿದ್ದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08539-220333, ಪೊಲೀಸ್ ಇನ್ಸಪೆಕ್ಟರ್ ಮೊ.ನಂ: 9480803745 ಅಥವಾ ಪಿ.ಎಸ್.ಐ ಮೊ.ನಂ: 9611589433 ಗೆ ಸಂಪರ್ಕಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.
****






Any questions related to ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಅನಾಮಧೇಯ ವ್ಯಕ್ತಿ ಮೃತ: ವಾರಸುದಾರರ ಪತ್ತೆಗೆ ಮನವಿ?