Home » ಲೈವ್ ನ್ಯೂಸ್ » ಶೈಕ್ಷಣಿಕ ಅಭಿವೃದ್ಧಿಗೆ ನರಸಿಂಗರಾವ ಕಾಂಬಳೆ ಅವರ ಕೊಡುಗೆ ಅವಿಸ್ಮರಣೀಯ

ಶೈಕ್ಷಣಿಕ ಅಭಿವೃದ್ಧಿಗೆ ನರಸಿಂಗರಾವ ಕಾಂಬಳೆ ಅವರ ಕೊಡುಗೆ ಅವಿಸ್ಮರಣೀಯ

Facebook
X
WhatsApp
Telegram

ಬಸವಕಲ್ಯಾಣ : ಬಸವಕಲ್ಯಾಣದ ಬಸವ ಶಿಕ್ಷಣ ಸಂಸ್ಥೆಯ ಡಾ॥ ಅಂಬೇಡ್ಕರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 40ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ರವೀಂದ್ರ ಬಿ ಗಾಯಕವಾಡ ಅವರು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ದಿವಂಗತ ಶ್ರೀ ನರಸಿಂಗರಾವ ಕಾಂಬಳೆ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾತನಾಡಿ, ಹೈದರಾಬಾದ ಕರ್ನಾಟಕ (ಈಗಿನ) ಕಲ್ಯಾಣ ಕರ್ನಾಟಕದ ಗಡಿ ಪ್ರದೇಶವಾದ ಬಸವಕಲ್ಯಾಣ ತಾಲೂಕಿನಲ್ಲಿ ಹಿಂದಿ, ಮರಾಠಿ ಮತ್ತು ಉರ್ದು ಭಾಷೆಗಳ ಅತ್ಯಂತ ಪ್ರಭಾವಕ್ಕೆ ಒಳಗಾದ ಇಲ್ಲಿನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಹಿಂದೂಳಿದ್ದನ್ನು ಅರಿತು ಈ ಭಾಗದಲ್ಲಿ 1987ರಲ್ಲಿ ಪಂಚ ಭಾಷೆಗಳ ಅಧ್ಯಯನ ನೀಡುವ ಉದ್ದೇಶದಿಂದ ವಿಶ್ವಗುರು ಬಸವಣ್ಣನವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು.

ಇದರಡಿಯಲ್ಲಿ ಭಾರತ ಸಂವಿಧಾನದ ಶಿಲ್ಪಿಗಳಾದ ಡಾ॥ ಬಾಬಾಸಾಹೇಬ ಅಂಬೇಡ್ಕರ ಅವರ ಹೆಸರಿನಲ್ಲಿ ಕಾಲೇಜನ್ನು ಪ್ರಾರಂಭಿಸಿದರು. ಗಡಿ ಭಾಗದ ಈ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಉಚಿತ ಶಿಕ್ಷಣ ನೀಡುವುದರೊಂದಿಗೆ ಕನ್ನಡ, ಇಂಗ್ಲೀಷ, ಹಿಂದಿ, ಮರಾಠಿ ಮತ್ತು ಉರ್ದು ಭಾಷೆಯಲ್ಲಿ ಶಿಕ್ಷಣ ಒದಗಿಸಿದರು. ತನ್ನ ದುಡಿತದ ಸ್ವಂತ ಹಣದಿಂದಲೇ ಉಪನ್ಯಾಸಕರಿಗೆ ಸಂಬಳ ನೀಡುತ್ತಿದ್ದರು ಜೊತೆಗೆ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ವಸತಿ ಯೋಜನೆ ಅಡಿಯಲ್ಲಿ ವಸತಿ ಶಾಲೆಗೆ ಪ್ರವೇಶ ಪಡೆಯಲು ಸಹಕರಿಸುತ್ತಿದ್ದರು. ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗಾಗಿ ನಿರಂತರ ಹಗಲಿರುಳು ಶ್ರಮಿಸಿ ಅಪಾರ ಕೊಡುಗೆಯನ್ನು ನೀಡಿದ್ದು ಅವಿಸ್ಮರಣೀಯ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೈಶೇನಪ್ರಸಾದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿ ಮಾತನಾಡಿದರು. ಶ್ರೀ ಶ್ರೀಧರ ಛಲವಾದಿ ಅವರು ನಿರೂಪಣೆ ಮತ್ತು ಶ್ರೀ ನಿತ್ಯಾನಂದ ಮಂಠಾಳಕರ ಅವರು ವಂದಿಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಸವಕಲ್ಯಾಣದಲ್ಲಿ ನಡೆದ  ಡಾ|| ಅಂಬೇಡ್ಕರ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ 40ನೇ ಸಂಸ್ಥಾಪನಾ ದಿನಾಚರಣೆ ಹಾಗೂ ದಿವಂಗತ ನರಸಿಂಗರಾವ ಕಾಂಬಳೆ ಅವರ ಸ್ಮರಣಾರ್ಥ ಕಾರ್ಯಕ್ರಮದ ವಿವರ.

ಕಾರ್ಯಕ್ರಮದ ವಿವರ: ಬಸವಕಲ್ಯಾಣದ ಡಾ|| ಅಂಬೇಡ್ಕರ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 40ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಶ್ರೀ ನರಸಿಂಗರಾವ ಕಾಂಬಳೆ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.

ಶೈಕ್ಷಣಿಕ ಕೊಡುಗೆ: 1987ರಲ್ಲಿ ಪಂಚ ಭಾಷೆಗಳ ಅಧ್ಯಯನಕ್ಕಾಗಿ ಸಂಸ್ಥೆಯನ್ನು ಸ್ಥಾಪಿಸಿ, ಗಡಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ನರಸಿಂಗರಾವ ಕಾಂಬಳೆ ಅವರು ಹಗಲಿರುಳು ಶ್ರಮಿಸಿದ್ದಾರೆ.

ಉಪಸ್ಥಿತಿ: ಕಾಲೇಜಿನ ಪ್ರಾಚಾರ್ಯರು, ಆಡಳಿತಾಧಿಕಾರಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author

Leave a Reply

ಪ್ರಮುಖ ಸುದ್ದಿ

Stock market

Astrology