Home » ಲೈವ್ ನ್ಯೂಸ್ » ಮಹಾತ್ಮ ಬೊಮ್ಮಗೊಂಡೇಶ್ವರರ ಆದರ್ಶಗಳು ಯುವಜನತೆಗೆ ಸ್ಫೂರ್ತಿ – ಭೀಮಶಾ ಬಸಲಾಪುರ್

ಮಹಾತ್ಮ ಬೊಮ್ಮಗೊಂಡೇಶ್ವರರ ಆದರ್ಶಗಳು ಯುವಜನತೆಗೆ ಸ್ಫೂರ್ತಿ – ಭೀಮಶಾ ಬಸಲಾಪುರ್

Facebook
X
WhatsApp
Telegram

ಬೀದರ್.29.ಜೂನ್.26: ಮಹಾತ್ಮ ಬೊಮ್ಮಗೊಂಡೇಶ್ವರರು 14 ಮತ್ತು 15ನೇ ಶತಮಾನದಲ್ಲಿ ಜನ್ಮ ತಾಳಿದ ಮಹಾನ್ ಸಂತರೆAದು ತಿಳಿಯಲಾಗಿದ್ದು, ಮೈಲಾರ ಮಲ್ಲಣ್ಣ ಅವರು ಮನೆದೇವರಾಗಿದ್ದರು. ತಿರುಪತಿ ತಿಮ್ಮಪ್ಪನಿಗೆ ಏಳು ಕೋಟಿ ರೂಪಾಯಿ ಸಾಲ ನೀಡಿದ ಕುರಿತು ಇತಿಹಾಸದಿಂದ ತಿಳಿಯಬಹುದಾಗಿದೆ. ಅಲ್ಲದೆ, ಅಂದಿನ ಬಹಮನಿ ಸುಲ್ತಾನರಿಗೆ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಗ್ರೇಡ್-1 ಅನುದಾನಿತ ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಭೀಮಶಾ ಬಸಲಾಪುರ್ ಹೇಳಿದರು.

ರವಿವಾರ ಬೆಳಿಗ್ಗೆ ನಗರದ ಗಾಂಧಿಗAಜ್‌ನ ಕನಕ ಭವನದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ (ರಿ), ಬೀದರ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹಾತ್ಮ ಬೊಮ್ಮಗೊಂಡೇಶ್ವರರ ಕುರಿತು ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮ ಬೊಮ್ಮಗೊಂಡೇಶ್ವರರ ಕಾಯಕನಿಷ್ಠೆ, ಶ್ರದ್ಧೆ ಮತ್ತು ಭಕ್ತಿಯನ್ನು ಕಂಡು ಅಂದಿನ ರಾಜರು ನಿನಗೆ ಏನು ಬೇಕು? ಎಂದು ಕೇಳಿದಾಗ, ನನಗೇನೂ ಬೇಡ. ನನ್ನ ಸಮಾಜದ ಬಂಧುಗಳಿಗೆ ಕುರಿ ಕಾಯಲು ಅರಣ್ಯದಲ್ಲಿ ಗೋಮಾಳ ಮೀಸಲಿಡಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಾಕು ಎಂದು ವಿನಂತಿಸಿಕೊAಡಿದ್ದರು. ಇದು ಅವರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಸಂಗಪ್ಪ ತೌಡಿ ಮಾತನಾಡಿ, ಹಾಲುಮತ ಸಮಾಜದಲ್ಲಿ ಅನೇಕ ಮಹಾತ್ಮರು, ಸಂತರು ಹಾಗೂ ಶರಣರು ಜನ್ಮ ತಾಳಿ ಸಮಾಜಕ್ಕೆ ಆದರ್ಶ ಜೀವನದ ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ. ಅವರ ತತ್ವ-ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವ ಜನತೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಹಾತ್ಮ  ಬೊಮ್ಮಗೊಂಡೇಶ್ವರರು ತಮ್ಮ ಜೀವನದಲ್ಲಿ ಅನೇಕ ಕಷ್ಟ ಸಂಕಷ್ಟಗಳನ್ನು ಎದುರಿಸಿದರೂ ಧೈರ್ಯ ಕಳೆದುಕೊಳ್ಳದೆ, ಕಾಯಕದಲ್ಲಿಯೇ ದೇವರನ್ನು ಕಂಡು ಶ್ರಮ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಬದುಕಿದ ಅಪರೂಪದ ಮಹನೀಯರಾಗಿದ್ದಾರೆ. ಸಮಾಜದ ಒಳಿತನ್ನೇ ಬಯಸಿದ ಅವರ ಆದರ್ಶ ಜೀವನ ಇಂದಿನ ಪೀಳಿಗೆಗೆ ದಾರಿದೀಪವಾಗಿದೆ ಎಂದು ಹೇಳಿದರು.

ಸಮಾಜದ ಯುವ ಮುಖಂಡ ದೀಪಕ್ ಚಿದ್ರಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತನು, ಮನ ಮತ್ತು ಧನದಿಂದ ಸಹಕಾರ ನೀಡುವುದು ಅತ್ಯವಶ್ಯಕವಾಗಿದೆ. ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದ ಯುವಕರು ಮುಖ್ಯವಾಹಿನಿಗೆ ಬರಬೇಕು. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸುತ್ತಿರುವ ಜಿಲ್ಲಾ ಗೊಂಡ ವಿದ್ಯಾರ್ಥಿಗಳ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರ ಗಾಂಧಿಗAಜ್ ಕನಕ ಭವನದ ಅಧ್ಯಕ್ಷ ನಾಗರಾಜ್ ನಂದಗಾAವ್ ವಹಿಸಿದ್ದರು. ಕರವೇ ಜಿಲ್ಲಾ ಸಂಚಾಲಕ ಬಸವರಾಜ್ ನಂದಗಾAವ್, ಹಿರಿಯ ಮುಖಂಡ ಭೀಮ್ ಸಿಂಗ್ ಮಲ್ಕಾಪುರೆ, ಸುರೇಶ್ ಹುಗೇರಿ, ಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಮೇಶ್ ಮೇತ್ರೆ ಸೇರಿದಂತೆ ಹಲವರು ಮಾತನಾಡಿ ಮಹಾತ್ಮ ಬೊಮ್ಮಗೊಂಡೇಶ್ವರರ ಆದರ್ಶಗಳನ್ನು ಸ್ಮರಿಸಿದರು.

ಆರಂಭದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷಕುಮಾರ್ ಜೋಳದಾಪಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ್ ಬ್ಯಾಲಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಮುರ್ಕೆ ಕಾರ್ಯಕ್ರಮ ನಿರೂಪಿಸಿ, ಸಿದ್ದು ಬಾವಗಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೇವಣಪ್ಪ ಮೂಲಗೆ, ಮಲ್ಲಿಕಾರ್ಜುನ ಮಲ್ಕಾಪೂರೆ, ಮನೋಹರ ಹುಪಳಾ, ಮಲ್ಲಿಕಾರ್ಜುನ ಪಾಟೀಲ್ ಹಾಗೂ ಕೃಷ್ಣರಾಜ ಅವರು ಜಾನಪದ ಮತ್ತು ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿ ಸಭಿಕರನ್ನು ರಂಜಿಸಿದರು.

ಈ ಸಂದರ್ಭದಲ್ಲಿ ಕಲ್ಲಪ್ಪ ರಾಯಗೊಂಡ, ಸುನಿಲ್ ಚಿಲ್ಲರ್ಗಿ, ಮುರಳಿನಾಥ್ ಮೇತ್ರಿ, ಪಂಡರಿ ಜಮಾದಾರ್, ತುಕಾರಾಮ ನೀಲಮ್ಮನಳ್ಳಿ, ಅಶೋಕ್ ನೆಮ್ತಾಬಾದ್, ಆನಂದ್ ಎಖೆಳ್ಳಿಕರ್, ಕಲ್ಲಪ್ಪ ಶಾಪುರ್, ಶಿವಶಂಕರ ನೀಲಮ್ಮನಳ್ಳಿ, ಆತ್ಮಾನಂದ ಬೊಂಬುಳಗಿ ಸೇರಿದಂತೆ ಗೊಂಡ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾ ಪ್ರಭಾತ ಸುಧಿ 24X7

ವರದಿಗಾರ: ಡಾ. ಮಿಲಿಂದ ಸೋಮವಂಶಿ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology