|

ರಾಜ್ಯದ ವಿವಿಧ 32 ವಿಶ್ವವಿದ್ಯಾಲಗಳಲ್ಲಿ 3008 ಬೋಧಕ ಹುದ್ದೆಗಳು ಖಾಲಿ:

ಬೆಂಗಳೂರು.28.ಜೂನ್.26: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ 3008 ಬೋಧಕ ಹುದ್ದೆಗಳು ಖಾಲಿ. ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ ಆದರೆ ಯಾವದೇ ಇಲಾಖೆಗೆ ಸಚಿವರು ಇಲ್ಲ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರೇ ಇಲ್ಲದಂತಾಗಿದೆ. ರಾಜ್ಯಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ 3,008 ಬೋಧಕ ಹುದ್ದೆಗಳು ಖಾಲಿ.

ರಾಜ್ಯದಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.

ಎಕ್ಸ್ ಪೋಸ್ಟ್ ಮಾಡಿರುವ ಅವರು, ಉನ್ನತ ಶಿಕ್ಷಣ ಸಚಿವರು ಎಲ್ಲಿದ್ದಾರೆ? ಸರ್ಕಾರದ ಆದ್ಯತೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸ್ಥಾನವೇ ಇಲ್ಲವೇ? ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ ಇಂದು ಸಂಪೂರ್ಣವಾಗಿ ದಿಕ್ಕು ತಪ್ಪಿ ಕತ್ತಲಿಗೆ ತಳ್ಳಲ್ಪಟ್ಟಿದೆ. ಅದಕ್ಕೆ ಕಾರಣ ಡಿಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಉನ್ನತ ಶಿಕ್ಷಣವೇ ಆದ್ಯತೆಯಾಗಿಲ್ಲ. ಹೊಸ ಮುಖ್ಯಮಂತ್ರಿಗಳು ಬಂದು ತಿಂಗಳು ಕಳೆಯುತ್ತಾ ಬಂದರೂ, ಇಡೀ ರಾಜ್ಯದ ಮಕ್ಕಳ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವ ಈ ಇಲಾಖೆಗೆ ಒಬ್ಬ ಪೂರ್ಣಾವಧಿಯ ಉನ್ನತ ಶಿಕ್ಷಣ ಸಚಿವರೇ ಇಲ್ಲ ಎಂದು ದೂರಿದರು.

ವಿಶ್ವವಿದ್ಯಾಲಯಗಳಲ್ಲಿ ಶೇ 64 ರಷ್ಟು ಹುದ್ದೆಗಳು ಖಾಲಿ!

ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಚಿವರಿಲ್ಲ, ಹುದ್ದೆಗಳ ನೇಮಕಾತಿ ಆಗಿಲ್ಲ. ವ್ಯವಸ್ಥೆಗೊಂದು ದಿಕ್ಕಿಲ್ಲ. ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಿರಂತರವಾಗಿ ಚೆಲ್ಲಾಟ ಆಡಲಾಗುತ್ತಿದೆ. ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ಶೇಕಡಾ 64 ರಷ್ಟು ಬೋಧಕ ಹುದ್ದೆಗಳು ಖಾಲಿ ಇರುವದೇ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಹೇಳಿದರು.

ಪ್ರಮುಖ ವಿಶ್ವವಿದ್ಯಾಲಯಗಳಲ್ಲೇ ಖಾಲಿ ಇರುವ ಹುದ್ದೆಗಳ ಸಂಖ್ಯೆ


1.ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ: 272ಕ್ಕೆ 272 ಹುದ್ದೆಗಳೂ ಖಾಲಿ!

2. ನೃಪತುಂಗ ವಿಶ್ವವಿದ್ಯಾಲಯ: 100ಕ್ಕೆ 100 ಹುದ್ದೆಗಳೂ ಖಾಲಿ!

3.ಕರ್ನಾಟಕ ವಿಶ್ವವಿದ್ಯಾಲಯ: 422 ಹುದ್ದೆಗಳು

4.ಮೈಸೂರು ವಿಶ್ವವಿದ್ಯಾಲಯ: 391 ಹುದ್ದೆಗಳು

5. ಬೆಂಗಳೂರು ವಿಶ್ವವಿದ್ಯಾಲಯ: 245 ಹುದ್ದೆಗಳು

6.ಗುಲ್ಬರ್ಗಾ ವಿಶ್ವವಿದ್ಯಾಲಯ: 171 ಹುದ್ದೆಗಳು ಖಾಲಿ.

7. ಬೆಂಗಳೂರು ನಗರ ವಿಶ್ವವಿದ್ಯಾಲಯ: 151 ಹುದ್ದೆಗಳು ಖಾಲಿ ಇವೆ.

Similar Posts

Leave a Reply

Your email address will not be published. Required fields are marked *