Home » ಲೈವ್ ನ್ಯೂಸ್ » ಅಪರಿಚಿತ ವ್ಯಕ್ತಿ ಮೃತ: ಗುರುತು ಪತ್ತೆಗಾಗಿ ಮನವಿ

ಅಪರಿಚಿತ ವ್ಯಕ್ತಿ ಮೃತ: ಗುರುತು ಪತ್ತೆಗಾಗಿ ಮನವಿ

Facebook
X
WhatsApp
Telegram

ಬೀದರ.29.ಜೂನ್.26:- ಬೀದರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ
ಸುಮಾರು ೪೦ ರಿಂದ ೪೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಗುರುತು ಪತ್ತೆಗಾಗಿ ಬೀದರ್ ರೈಲ್ವೆ ಪೊಲೀಸ್
ಠಾಣೆಯ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ವ್ಯಕ್ತಿಯು ಮಚಲಿಪಟ್ಟಣಂ ರೈಲು ಗಾಡಿಯಲಿ ್ಲ ಅಸ್ವಸ್ಥನಾಗಿ ದಿನಾಂಕ: ೨೭-೦೬-೨೦೨೬ ರಂದು ಬಿದ್ದಿದ್ದು,
ಇರವನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೮-೦೬-
೨೦೨೬ ರಂದು ಮ. ೧೨:೨೦ ಗಂಟೆಗೆ ಸದರಿ ರೋಗಿಯು ಮೃತಪಟ್ಟಿದ್ದಾರೆ.


ಈ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂ. ೧೦/೨೦೨೬, ಕಲಂ ೧೯೪
ಬಿ.ಎನ್.ಎಸ್.ಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿ ೆ.
ಅಪರಿಚಿತ ವ್ಯಕ್ತಿಯು ೫ ಅಡಿ ೪ ಇಂಚ್ ಎತ್ತರ ಇದ್ದು, ಸಾಧಾರಣ ಮೈಕಟು ್ಟ, ಗೋಧಿ ಮೈಬಣ್ಣ, ಗುಂಡು
ಮೂಖ ಹೊಂದಿದ್ದು, ಅಗಲವಾದ ಹಣೆ, ದಪ್ಪು ಮೂಗು, ಬಲಗೈ ಮೇಲೆ ಸೂರ್ಯದ ಚಿತ್ರವಿದ್ದು, ಮೈಮೇಲೆ ಒಂದು
ನೀಲಿ ಬಣ್ಣದ ಶರ್ಟ್ ಮತ್ತು ಒಂದು ರೈಲ್ವೆ ಬ್ಲಾಂಕೆಟ್, ಅರೇಂಜೆ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.


ಈ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಇಂತಹ ವ್ಯಕ್ತಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದ್ದಲ್ಲಿ ತಕ್ಷಣವೇ ಪೊಲೀಸ್ ಉಪ ನೀರಿಕ್ಷಕರು, ರೈಲ್ವೆ ಪೊಲೀಸ್
ಠಾಣೆ, ಬೀದರ್ ದೂರವಾಣಿ ಸಂಖ್ಯೆ: ೯೪೮೦೮೦೦೨೧೩೩, ೭೪೮೩೦೯೫೫೦೮, ೭೦೧೯೩೮೪೬೪೫ ಅಥವಾ ೦೮೪೮೨-
೨೨೬೩೮೯ ಗೆ ಕರೆ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology