ಬೀದರ.29.ಜೂನ್.26:- ಪೋಲಿಯೋ ಕಾಯಿಲೆ ತಡೆಗಟ್ಟಲು ಪೋಲಿಯೋ ಹನಿಯೇ ಅತ್ಯಂತ ಪ್ರಮುಖವಾಗಿದೆ. 0-5 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಬೀದರ ಲೋಕಸಭಾ ಸದಸ್ಯರಾದ ಸಾಗರ ಖಂಡ್ರೆ ಅವರು ಹೇಳಿದರು.
ಬೀದರ ನಗರದ 2026ರ ಜೂನ್ 28 ರಂದು “ವಿಸ್ಡಮ್ ಶಾಲೆ” ಸಿದ್ದಿ ತಾಲಿಂ ಓಲ್ಡ್ ಸಿಟಿ ಬೀದರದಲ್ಲಿ “ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ”ಕ್ಕೆ ಮಕ್ಕಳಿಗೆ ಲಸಿಕೆ ಹಾಕಿಸಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ 2011ರಲ್ಲಿ ಪಶ್ಚಿಮ ಬಂಗಾಳದಲ್ಲಿ ವರದಿಯಾಗಿತ್ತು ಅದಾದಮೇಲೆ 15 ವರ್ಷಗಳಿಂದ ಯಾವುದೇ ಪೋಲಿಯೋ ಪ್ರಕರಣಗಳು ಭಾರತದಲ್ಲಿ ಕಂಡುಬoದಿರುವುದಿಲ್ಲ. ನಮ್ಮ ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಅಫಘಾನಿಸ್ತಾನದಲ್ಲಿ ಇನ್ನೂ ಪಾಜಿಟಿವ್ ಪ್ರಕರಣಗಳಿದ್ದುದರಿಂದ ನಮ್ಮ ದೇಶದಲ್ಲಿ ಮುಂಜಾಗೃತೆ ಕ್ರಮಕ್ಕಾಗಿ ಪ್ರತಿ ವರ್ಷ ಪಲ್ಸ್ ಪೋಲಿಯೋ ಕಾರ್ಯಕ್ರಮ ಪೋಲಿಯೋ ಕಾಯಿಲೆ ತಡೆಗಟ್ಟಲು ಪೋಲಿಯೋ ಹನಿಯೇ ಅತ್ಯಂತ ಪ್ರಮುಖವಾಗಿದೆ. 0-5 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ಪಾಲಕರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಬೀದರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಭಾರತ 2014ರಲ್ಲಿ ಪೋಲಿಯೋ ಮುಕ್ತ ದೇಶವಾಗಿರುತ್ತದೆ, ಇದೇ ಸ್ಥಿತಿ ಮುಂದುವರೆಯುವದಕ್ಕಾಗಿ ನಮ್ಮ ದೇಶ, ರಾಜ್ಯ ಹಾಗೂ ಜಿಲ್ಲೆಯಲ್ಲಿ ಪೋಲಿಯೋ ಪ್ರಕರಣ ಬರದಂತೆ ಕಡ್ಡಾಯವಾಗಿ ತಮ್ಮ ಹತ್ತಿರದ ಬೂತ್‌ಗೆ 0-5 ವರ್ಷದೊಳಗಿನ ಮಕ್ಕಳಿಗೆ ಕರೆತಂದು ಪೋಲಿಯೋಲಸಿಕೆ ಹಾಕಿಸುವಂತೆ ಪೋಷಕರಿಗೆ ತಿಳಿಸಿದರು.
ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ ನೀರಗುಡೆ ಅವರು ಮಾತನಾಡಿ, 2026ರ ಜೂನ್ 28 ರಂದು ಬೂತ್‌ಗಳ ಮೂಲಕ ಲಸಿಕೆ ನೀಡಲಾಗುವುದು ಹಾಗೂ 2026ರ ಜೂನ್ 29 ರಿಂದ ಜುಲೈ 1ರ ವರೆಗೆ ಮನೇ ಭೇಟಿಗಳ ಮೂಲಕ ಬಿಟ್ಟು ಹೋದ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುವುದು ಆದಪ್ರಯುಕ್ತ 0-5 ವರ್ಷದ 2,13,213 (ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ) ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, ಇದಕ್ಕಾಗಿ 996 ಬೂತ್‌ಗಳು ನಿರ್ಮಿಸಲಾಗಿದ್ದು ಅಲ್ಲದೇ 2154 ಲಸಿಕೆದಾರರನ್ನು ಹಾಗೂ 216 ಜನರನ್ನು ಬೂತ್ ಮೇಲ್ವಿಚಾರಣೆಗಾಗಿ ಸಿಬ್ಬಂದಿಯವರನ್ನು ನೇಮಿಸಲಾಗಿದೆ 11 ಮೊಬೈಲ್ ತಂಡಗಳು ಹಾಗೂ 70-ಟ್ರಾನ್ಸಿಟ್ ಪಾಯಿಂಟ್ಸ್ಗಳ ಮೂಲಕ ಪ್ರತಿಶತ ಲಸಿಕಾಕರಣ ಗುರಿ ಸಾಧಿಸಲಾಗುವುದೆಂದು ಹೇಳಿದರು.
ಬೀದರ ವಿಸ್ಡಮ್ ಶಾಲೆ ಅಧ್ಯಕ್ಷರು ಎಂ.ಡಿ. ಆಸಿಫೋದಿನ್ ಅವರು ಮಾತನಾಡಿ, ನಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ಮಾಡಿರುವುದಕ್ಕಾಗಿ ನಮ್ಮ ಸಮಿತಿಯವರಿಗೆ ಸಂತೋಷ ತಂದಿದೆ. ಈ ಕಾರ್ಯಕ್ರಮ ಶತ ಪ್ರತಿಶತ ಪ್ರಗತಿ ಸಾಧಿಸುವಲ್ಲಿ ಹಾಗೂ ಈ ಕಾರ್ಯಕ್ರಮ ಸಮುದಾಯಕ್ಕೆ ಮುಟ್ಟಿಸುವಲ್ಲಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ನಮ್ಮ ಶಾಲೆಯ ಸಂಪೂರ್ಣ ಸಹಕಾರವಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ನೋಡಲ್ ಅಧಿಕಾರಿಗಳಾದ ಡಾ.ಇಂದುಮತಿ ಪಾಟೀಲ ಉಪ ನಿರ್ದೇಶಕರು (ಆರ್.ಬಿ.ಎಸ್.ಕೆ) ಆರೋಗ್ಯ & ಕು.ಕ ಸೇವೆಗಳ ನಿರ್ದೇಶನಾಲಯ ಬೆಂಗಳೂರು ಸಲಾವುದಿನ್ ಕಾರ್ಯದರ್ಶಿಗಳು ವಿಸ್ಡಮ್ ಶಾಲೆ, ಎಂ.ಡಿ.ಗೌಸ್ ಚೇರಮೇನ ಸಿ.ಎಂ.ಸಿ. ಬೀದರ, ಸಿ.ಎಂ.ಸಿ. ವಾರ್ಡ ಕೌನ್ಸೆಲರ್‌ಗಳಾದ ಚೇತನಾ ಮೋಹನ, ಎಂ.ಡಿ. ಕಲೀಫ್, ಡಾ.ಶಿವಶಂಕರ.ಬಿ. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಬೀದರ, ಡಾ.ರಾಜಶೇಖರ ಪಾಟೀಲ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅನೀಲ ಚಿಂತಾಮಣಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಕಿರಣ ಪಾಟೀಲ ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಬೀದರ, ಡಾ.ಎಸ್.ಕೆ.ಬೊಮ್ಮಾ ಜಿಲ್ಲಾ ಸರ್ವೇಕ್ಷಣಾಧಿಕಾರಿ ಬೀದರ, ಡಾ.ಸಂಗಾರೆಡ್ಡಿ ತಾಲೂಕಾ ಅಧಿಕಾರಿ ಬೀದರ, ಡಾ.ಎಂ.ಡಿ.ಸೋಹೆಲ್ ಆಡಳಿತ ವೈದ್ಯಾಧಿಕಾರಿ 100 ಹಾಸಿಗೆ ಆಸ್ಪತ್ರೆ ಬೀದರ, ಶಶಿಕಲಾ.ಬಿ.ಸಿನ್ನೂರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬೀದರ, ಸಾವಿತ್ರಿಬಾಯಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಶೇಖರ ಇಜಾರೆ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬೀದರ, ಉಮೇಶ ಬಿರಾದರ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಲೋಕೇಶ ಸಲಗರ ಲಸಿಕಾ ಮೇಲ್ವಿಚಾರಕರು, ದೇವಿದಾಸ, ತಾರಾದೇವಿ, ವಿನಾಯಕ ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುನಾಥ, ರವಿ ಶೆಂಬೆಳ್ಳಿ, ಚನ್ನಬಸವ, ಸತೀಶ ಬಿರಾದರ ಮುಂತಾದ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಟಿ.ಎಂ.ಮಚ್ಚೆ ಸ್ವಾಗತಿಸಿದರು ಹಾಗೂ ಕಾರ್ಯಕ್ರಮ ನಿರೂಪಿಸಿದರು.






Any questions related to ರಾಷ್ಟ್ರೀಯ ಪಲ್ಸ್ ಪೋಲಿಯೊ ಮಕ್ಕಳಿಗೆ ಲಸಿಕೆ ಹಾಕಿಸಿ ಚಾಲನೆ?