Home » ಲೈವ್ ನ್ಯೂಸ್ » ಸಾಮಾಜಿಕ ಪರಿವತನೆಯ ಹರಿಕಾರ ಕಬೀರದಾಸ: ಡಾ. ಶಂಕರ ರಾಠೋಡ

ಸಾಮಾಜಿಕ ಪರಿವತನೆಯ ಹರಿಕಾರ ಕಬೀರದಾಸ: ಡಾ. ಶಂಕರ ರಾಠೋಡ

Facebook
X
WhatsApp
Telegram

ಕಲಬುರಗಿ.29.ಜೂನ್.26: ಸಮಾಜದಲ್ಲಿ ನಿರ್ಮಾಣವಾದ ಅಸಮಾನತೆಗಳನ್ನು ಹೋಗಲಾಡಿಸಲು ಹೋರಾಡಿದ ಕೀರ್ತಿ ಯಾರಿಗಾದರೂ ಸಲ್ಲ ಬೇಕೆಂದರೆ ಅದು ಕಬೀರದಾಸರಿಗೆ.

ಕಬೀರದಾಸರು ಮಧ್ಯಕಾಲದ ಸಂದರ್ಭದಲ್ಲಿ ಸಮಾಜದಲ್ಲಿ ನಡೆಯುತ್ತಿದ ಅಸಾಮಾಜಿಕ ತತ್ವಗಳ ವಿರೋಧ ಹೋರಾಟಮಾಡಿದ ಸಂತರು ಎಂದು ಸರಕಾರಿ ಸ್ವಾಯತ್ತ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಶಂಕರ್ ರಾಠೋಡ ಅವರು ನುಡಿದರು.


ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗ ಇಂದು ಹಮ್ಮಿಕೊಂಡ ಕಬೀರದಾಸರ್ 649ನೆಯ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮುಂದುವರೆದು ಕರ್ನಾಟಕದಲ್ಲಿ ಬಸವೇಶ್ವರರು ಮಾಡಿದ ಕ್ರಾಂತಿಯ ಸಮಾನವಾದ ಕ್ರಾಂತಿಯನ್ನು ಕಬೀರದಾಸರು ಮಾಡಿದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ವಹಿಸಿಕೊಂಡು ಕಬೀರದಾಸರು ಒಬ್ಬ ಮಹಾನ್ ದಾರ್ಶನಿಕರು ಹೌದು, ಸಮಾಜ ಸುಧಾರಕರು ಅದೇ ರೀತಿ ಸಂತರು ಕೂಡಾ ಹೌದು ಎಂದು ಹೇಳಿದರು.

ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರೇಮಚಂದ ಚವ್ಹಾಣ ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸುಷ್ಮಾ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು, ಕವಿತಾ ಠಾಕೂರ್ ಅವರು ವಂದಿಸಿದರು.


ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳಾದ ರವೀಂದ್ರ ವೈ. ಎನ್., ಡಾ ಮೋಹನರಾಜ ಪತ್ತಾರ ಹಾಗೂ ಗ್ರಂಥಪಾಲಕರಾದ ಶರಣಪ್ಪ ಎಂ. ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology