ಬೀದರ.25.ಜನವರಿ.26:- ಹೈದ್ರಾಬಾದ-ಮುಂಬೈ ಎನ್.ಹೆಚ್.65 ರಸ್ತೆ ಪಕ್ಕ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪೂರ ಗ್ರಾಮದ ಶಿವಾರದ ಜಮೀನು ಸರ್ವೆ ನಂ. 109/1 ನೇದ್ದರಲ್ಲಿನ ಖುಲ್ಲಾ ಜಾಗದಲ್ಲಿ ದಿನಾಂಕ: 19-12-2025 ರ ಸಾಯಂಕಾಲ 7 ರಿಂದ ದಿನಾಂಕ: 20-12-2025 ರ ಬೆಳಗಿನ ಜಾವ 6 ಗಂಟೆಯ ಮಧ್ಯದ ಅವಧಿಯಲ್ಲಿ ಅಂದಾಜು 30-35 ವರ್ಷದ ಒಬ್ಬ ಅಪರಿಚಿತ ಹೆಣ್ಣು ಮಗಳ ಮೃತ ದೇಹವು ಕಂಡುಬಂದಿದ್ದು, ಈವರೆಗೆ ಮೃತಳ ವಾರಸುದಾರರು ಯಾರೆಂದು ಪತ್ತೆಯಾಗಿರುವುದಿಲ್ಲ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಪೇದೆ ವಿಶ್ವನಾಥ ಕಾಶೆಪ್ಪಾ ಎಕ್ಕೆಳೆ ಅವರ ದೂರಿನನ್ವಯ ಬಸವಕಲ್ಯಾಣ ಪೊಲೀಸ್ ಠಾಣೆಯ ಗುನ್ನೆ ನಂ. 226/2025 ಕಲಂ 103(1),238 ಬಿ.ಎನ್.ಎಸ್.-2023 ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಮೃತ ಹೆಣ್ಣು ಮಗಳು 5’-3” ಅಡಿ ಎತ್ತರ ಇದ್ದು, ನೋಡಲು ದೃಢವಾದ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಮೈಮೇಲೆ ಒಂದು ಬಿಳಿ ಬಣ್ಣದ ಒಳಗಡೆ ಹಸಿರು ಆರೇಂಜ್ ಗೆರೆ ಮತ್ತು ಹೂವುಳ್ಳ ವೇಲ್ (ಓಡಣಿ), ಸ್ಕಾಯ್ ಬ್ಲ್ಯೂವ್ ಬಿಳಿ ಕಪ್ಪು ಬಣ್ಣ ಮಿಶ್ರಿತವುಳ್ಳ ಸೀರೆ, ಕೆಂಪು ಬಣ್ಣದ ಲಂಗಾ, ಬ್ಲೂ ಬಣ್ಣದ ಬ್ಲೌಸ್ ಹಾಗೂ ಕೋರಳಲ್ಲಿ ಮಾಂಗಲ್ಯ, ಕೆವಿ ಓಲೆ, ಬೆಳೆಯ ಕಾಲು ಜೈನ್, ಬೆಳ್ಳಿಯ ಕಾಲುಂಗರ, ತಾಮ್ರದ ಉಂಗುರ, ಬೆಳ್ಳಿ ಬಣ್ಣದ ಕೈ ಗಡಿಯಾರ ಇರುತ್ತದೆ.
ಈ ಚಹರೆ ಪಟ್ಟಿ ಇರುವ ಅಪರಿಚಿತ ಹೆಣ್ಣು ಮಗಳ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಉಪನಿರೀಕ್ಷಕರು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ: 9480803461, ಪೊಲೀಸ್ ವೃತ್ತ ನಿರೀಕ್ಷಕರು ಮಂಠಾಳ ವೃತ್ತ ಮೊಬೈಲ್ ಸಂಖ್ಯೆ: 9480803438, ಪೊಲೀಸ್ ಉಪಾಧೀಕ್ಷಕರು ಹುಮನಾಬಾದ ಮೊಬೈಲ್ ಸಂಖ್ಯೆ: 9480803422 ಗೆ ಸಂಪರ್ಕಿಸುವಂತೆ ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.






Any questions related to ಅಪರಿಚಿತ ಮೃತ ಹೆಣ್ಣು ಮಗಳ ವಾರಸುದಾರರ ಪತ್ತೆಗಾಗಿ ಮನವಿ?