Home » ಲೈವ್ ನ್ಯೂಸ್ » ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

Facebook
X
WhatsApp
Telegram

ಕೊಪ್ಪಳ.28.ಜೂನ್.25:-2025-26ನೇ ಸಾಲಿನ ಜಿಲ್ಲಾ ವಲಯದ ಯೋಜನೆಗಳಾದ ಒಳನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಯಡಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ಉಚಿತ ವಿತರಣೆ (ಪ.ಜಾತಿ ಮತ್ತು ಪ.ಪಂಗಡ ವರ್ಗದವರಿಗೆ ಮಾತ್ರ)  ಹಾಗೂ ಮೀನು ಮಾರುಕಟ್ಟೆ ಮತ್ತು  ಮತ್ಸö್ಯ ವಾಹಿನಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಹೊಸದಾಗಿ ದ್ವಿಚಕ್ರವಾಹನ ಮತ್ತು ಐಸ್‌ಬಾಕ್ಸ್ ಖರೀದಿಗೆ ಸಹಾಯಧನ ಮತ್ತು ಯಲಬುರ್ಗಾ ತಾಲೂಕಿಗೆ ಮಾತ್ರ ನಾಲ್ಕು ಚಕ್ರ ವಾಹನ ಖರೀದಿಗೆ ಸಹಾಯಧನ ವಿತರಿಸಲು ತಾಲೂಕಾವಾರು ಗುರಿ ನಿಗದಿಯಾಗಿರುತ್ತವೆ. ಸರ್ಕಾರದ ಮಾರ್ಗಸೂಚಿ ಹಾಗೂ ಲಭ್ಯವಿರುವ ಅನುದಾನದ ಮೇರೆಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.

ಕೊಪ್ಪಳ, ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕಿನ ಅರ್ಹ/ಆಸಕ್ತ ವೃತ್ತಿಪರ ಮೀನುಗಾರರು ಹಾಗೂ ಮೀನುಗಾರಿಕೆ ಸಹಕಾರ ಸಂಘಗಳು ಜುಲೈ 20 ರೊಳಗೆ ಕೊಪ್ಪಳ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

ಪ್ರಮುಖ ಸುದ್ದಿ

Stock market

Astrology